Advertisement

ಸಾವಿನಲ್ಲೂ ಒಂದಾದ ದಂಪತಿ

06:33 PM Apr 11, 2021 | Team Udayavani |

ಗದಗ: ನಾಲ್ಕು ದಶಕಗಳ ಕಾಲ ಒಬ್ಬರಿಗೊಬ್ಬರು ಎಂಬಂತೆ ಬಾಳಿ ಬದುಕಿದ ದಂಪತಿ ಸಾವಿನಲ್ಲೂ ಒಂದಾಗಿರುವ ಘಟನೆ ನಗರದಲ್ಲಿ ಶನಿವಾರ ನಡೆದಿದೆ.

Advertisement

ಇಲ್ಲಿನ ರಾಜೀವಗಾಂಧಿ ನಗರ ನಿವಾಸಿ, ಗದಗ-ಬೆಟಗೇರಿ ನಗರಸಭೆ ನಿವೃತ್ತ ವ್ಯವಸ್ಥಾಪಕ ಅಮೀನಸಾಬ ಮುಲ್ಲಾ(72) ಹಾಗೂ ಅವರ ಪತ್ನಿ ಶಂಶಾದ್‌ ಬೇಗಂ(62) ಸಾವಿನಲ್ಲೂ ಒಂದಾಗಿದ್ದಾರೆ.

ಶುಗರ್‌ ಹಾಗೂ ರಕ್ತದೊತ್ತಡ ಏರುಪೇರಾಗಿದ್ದರಿಂದ ಶಂಶಾದ್‌ ಬೇಗಂ ಅವರನ್ನು ಚಿಕಿತ್ಸೆಗಾಗಿ ಮೂರು ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೇ ಶನಿವಾರ ಬೆಳಗಿನ ಜಾವ 5

ಗಂಟೆ ಸುಮಾರಿಗೆ ಮೃತಪಟ್ಟಿದ್ದಾರೆ.ಈ ಸುದ್ದಿ ತಿಳಿಯುತ್ತಿದ್ದಂತೆ ಖನ್ನತೆಗೆ ಒಳಗಾಗಿದ್ದ ಪತಿ ಅಮೀನಸಾಬ ಮುಲ್ಲಾ ಅವರು ಕೇವಲ ಮೂರು ಗಂಟೆಗಳ ಅಂತರದಲ್ಲಿ ಕೊನೆಯುಸಿರೆಳೆದಿದ್ದಾರೆ. ಕುಟುಂಬಸ್ಥರು ಆಕ್ರಂದನ ಮುಗಿಲು ಮುಟ್ಟಿತ್ತು. ಇಬ್ಬರು ಪುತ್ರರು, ಪುತ್ರಿ, ಸೊಸೆಯಂದಿರು,ಅಳಿಯಂದಿರು ಹಾಗೂ ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗ ಅಗಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next