ಗದಗ: ಗದಗ-ಬೆಟಗೇರಿ ನಗರಸಭೆ ಮಾಲಿಕತ್ವದ ಆಸ್ತಿಗಳ ಚರ್ಚೆ ಕುರಿತು ವಿಶೇಷ ಸಾಮಾನ್ಯ ಸಭೆಯಲ್ಲಿ ಆಡಳಿತ, ವಿರೋಧ ಪಕ್ಷದ ಸದಸ್ಯರ ನಡುವೆ ಜಟಾಪಟಿ ನಡೆದಿದೆ.
ಸಭೆ ಆರಂಭದಲ್ಲೇ ಕಾನೂನು ಬಾಹಿರಸಭೆ ಕರೆಯಲಾಗಿದೆ ಎಂದು ವಿರೋಧ ಪಕ್ಷದ ಸದಸ್ಯರು ಆರೋಪಿಸಿದರು.
ನಗರಸಭೆ ವ್ಯಾಪ್ತಿಯಲ್ಲಿ ನೂರಾರು ಮಾಲಿಕತ್ವದ ಆಸ್ತಿಗಳಿದ್ದು, ಯಾವ ಆಸ್ತಿಯ ಕುರಿತು ಚರ್ಚೆ ಎಂಬುದರ ಕುರಿತು ಅಜೆಂಡಾದಲ್ಲಿ ಸ್ಪಷ್ಟವಾಗಿ ತಿಳಿಸಿಲ್ಲ. ಆರ್ಟಿಕಲ್ 48, 49ರ ನಿಯಮದ ವಿರುದ್ಧವಾಗಿ ಸಭೆ ಕರೆಯಲಾಗಿದೆ ಎಂದು ವಿರೋಧ ಪಕ್ಷದ ಸದಸ್ಯರು ಪೌರಾಯುಕ್ತರನ್ನು ತರಾಟೆಗೆ ತೆಗೆದುಕೊಂಡರು.
ಸಭೆಯನ್ನು ಮುಂದೂಡುವಂತೆ ಪಟ್ಟು ಹಿಡಿದ ಸದಸ್ಯರು, ಸಭೆಯಲ್ಲೇ ಪೌರಾಯುಕ್ತರನ್ನು ವಿರೋಧ ಪಕ್ಷದ ಸದಸ್ಯರು ಘೇರಾವ್ ಹಾಕಿದರು. ನಗರಸಭೆ ಆಸ್ತಿಯನ್ನು ಉಳಿಸಿಕೊಳ್ಳಲು ನಮ್ಮ ಆಸ್ತಿ ನಮ್ಮ ಹಕ್ಕು ಅಭಿಯಾನ ಮುಂದುವರಿಸುವುದಾಗಿ ಆಡಳಿತ ಪಕ್ಷದ ಸದಸ್ಯರು ತಿಳಿಸಿದರು. ರಾಜ್ಯಪಾಲರ ಬಳಿ ನಿಯೋಗ ತೆಗೆದುಕೊಂಡು ಹೋಗುವುದಾಗಿ ನಗರಸಭೆ ಅಧ್ಯಕ್ಷೆ ಉಷಾ ದಾಸರ ಘೋಷಣೆ ಮಾಡಿದರು.
ಸಚಿವ ಎಚ್.ಕೆ. ಪಾಟೀಲ ಅವರು ನಗರಸಭೆ ವಕ್ತಾರ ಸಾಲುಗಳ ಆಸ್ತಿಯನ್ನು ವಾಣಿಜ್ಯ, ಸಾಂಸ್ಕೃತಿಕ ವಸ್ತು ಪ್ರದರ್ಶನ ಅಭಿವೃದ್ಧಿ ಪ್ರಾಧಿಕಾರ ರಚಿಸಿ ವಿಧಾನಸಭೆಯಲ್ಲಿ ವಿಧೇಯಕ ಮಂಡನೆ ಮಾಡಿರುವುದು ಸರಿಯಲ್ಲ ಎಂಬ ಆರೋಪಿಸಿದರು.
ನಗರಸಭೆ ಆಡಳಿತ ಪಕ್ಷದ ಸದಸ್ಯರು ಸಚಿವ ಎಚ್.ಕೆ. ಪಾಟೀಲ್ ವಿರುದ್ಧ ಧಿಕ್ಕಾರ ಎಂಬ ಘೋಷಣೆ ಕೂಗಿದರು.
ನಗರಸಭೆ ಅಧ್ಯಕ್ಷೆ ಉಷಾ ದಾಸರ, ಉಪಾಧ್ಯಕ್ಷೆ ಸುನಂದಾ ಬಾಕಳೆ ಹಾಗೂ ಆಡಳಿತ ಪಕ್ಷದ ಸದಸ್ಯರು ಸಭೆಯಿಂದ ಹೊರನಡೆದರು.