Advertisement

ಗದಗ: ಪ್ರಶ್ನೆ ಕೇಳುವ ಮನೋಭಾವ ರೂಢಿಸಿಕೊಳ್ಳಿ-ಜಿಲ್ಲಾಧಿಕಾರಿ ವೈಶಾಲಿ

06:29 PM Jul 25, 2023 | Team Udayavani |

ಗದಗ: ವಿದ್ಯಾರ್ಥಿಗಳು ಪ್ರಶ್ನೆ ಕೇಳುವ ಮನೋಭಾವ ರೂಢಿಸಿಕೊಳ್ಳಬೇಕು. ವಿಜ್ಞಾನ ತಂತ್ರಜ್ಞಾನ ಬಳಸಿ ತಮ್ಮ ಭವಿಷ್ಯವನ್ನುತಾವೇ ರೂಪಿಸಿಕೊಂಡು ಸಮಾಜದಲ್ಲಿ ಆದರ್ಶ ವ್ಯಕ್ತಿಗಳಾಗಬೇಕು ಎಂದು ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್‌. ಹೇಳಿದರು.

Advertisement

ಸ್ಥಳೀಯ ಸಿದ್ಧಲಿಂಗ ನಗರದ ಸರಕಾರಿ ಪ್ರೌಢಶಾಲೆಯಲ್ಲಿ ಸಾರೆ ತಾರೆ ಜಮೀನ ಪರ್‌ ಟ್ರಸ್ಟ್‌ ಸಂಸ್ಥೆಯಿಂದ ಸೋಮವಾರ
ಆಯೋಜಿಸಿದ್ದ “ಕುತೂಹಲದ ಕಿಡಿ” ಯೋಜನೆಯಡಿ ವಿಜ್ಞಾನ ಮತ್ತು ಗಣಿತದಿಂದ ಕುತೂಹಲಕಾರಿ ವಿಷಯವನ್ನು ತಿಳಿಯುವ
ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ವಿದ್ಯಾರ್ಥಿಗಳ ಏಳ್ಗೆಗಾಗಿ ಇಂಥ ಕಾರ್ಯಕ್ರಮಗಳ ಆಯೋಜಿಸಬೇಕು. ವಿದ್ಯಾರ್ಥಿಗಳು ವಿಜ್ಞಾನ ತಂತ್ರಜ್ಞಾನ
ಬಳಸಿಕೊಂಡು ವಿಜ್ಞಾನಿಗಳಾಗಲು ಪ್ರಯತ್ನಿಸಬೇಕು ಎಂದು ಹೇಳಿದರು. ಅಬಾಟ್‌ನಲ್ಲಿ ಸಾರ್ವಜನಿಕ ವ್ಯವಹಾರಗಳ
ನಿರ್ದೇಶಕ ಆನಂದ್‌ ಕಡಕೋಳ ಮಾತನಾಡಿ, ಮಕ್ಕಳಿಗೆ ಗಣಿತ ಹಾಗೂ ವಿಜ್ಞಾನ ವಿಷಯಗಳ ಬಗ್ಗೆ ಹೆಚ್ಚಿನ ಆಸಕ್ತಿಯಿಂದ ಅಧ್ಯಯನ ನಡೆಸಬೇಕು. ಪ್ರಾಯೋಗಿಕ ವಿಷಯಗಳ ಬಗ್ಗೆ ತಿಳಿದುಕೊಳ್ಳುವುದು ಅವಶ್ಯಕವಾಗಿದೆ ಎಂದು ತಿಳಿಸಿದರು.

ಸಾರೆ ತಾರೆ ಜಮೀನ್‌ ಪರ ಸಂಸ್ಥೆಯ ಸ್ಥಾಪಕ ದಿನೇಶ ಬಡಗಂಡಿ ಮಾತನಾಡಿ, ವಿದೇಶದಲ್ಲಿ ಮಕ್ಕಳಿಗೆ ಕಲಿಕೆಯಲ್ಲಿ ಸಿಗುವ ಸೌಲಭ್ಯಗಳು ನಮ್ಮ ದೇಶದ ಬಡ ಹಳ್ಳಿ ಇದುವರೆಗೂ ಈ ಯೋಜನೆ ಅಡಿಯಲ್ಲಿ ಬೆಂಗಳೂರು ಹಾಗೂ ಮೈಸೂರು ಭಾಗಗಳಲ್ಲಿ ಸುಮಾರು 6 ಸಾವಿರಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಫಲಾನುಭವಿಗಳಾಗಿದ್ದಾರೆ. “ಕುತೂಹಲದ ಕಿಡಿ’ ಎಂಬ ಯೋಜನೆಯಲ್ಲಿ ಪ್ರತಿ ಮಕ್ಕಳಿಗೆ ವಿಜ್ಞಾನ ಕಿಟ್‌ ನೀಡಿ ಅವರಿಗೆ ವೈಜ್ಞಾನಿಕ ಪ್ರಯೋಗಗಳನ್ನು ಮಾಡಿಸುವುದು, ರಸಪ್ರಶ್ನೆ ನಡೆಸುವುದು, ವಿಜ್ಞಾನಿಗಳಿಂದ ಸಂವಾದ ಕಾರ್ಯಕ್ರಮ ಮತ್ತು ಮುಂತಾದ ಯೋಜನೆಗಳನ್ನು ಒಳಗೊಂಡಿದೆ ಎಂದರು.

ಸಾರೆ ತಾರೆ ಜಮೀನ ಪರ್‌ ಟ್ರಸ್ಟ್‌ ಪ್ರಿನ್ಸಿಪಾಲ್‌ ಸೆಕ್ರೆಟರಿ ರಿತೇಶ್‌ ಮಾತನಾಡಿ, “ಈ ಕುತೂಹಲದ ಕಿಡಿ’ ಯೋಜನೆಯನ್ನು ಉತ್ತರ ಕರ್ನಾಟಕದ ಸರ್ಕಾರಿ ಶಾಲೆಗಳಲ್ಲಿ ನಡೆಸಲು ದಿನೇಶ್‌ ಬಾಡಗಂಡಿ ಅವರು ಗದಗ ಜಿಲ್ಲೆಯನ್ನು ಆಯ್ಕೆ ಮಾಡಿಕೊಂಡು ಜಿಲ್ಲಾಡಳಿತ ಹಾಗೂ ಜಿಲ್ಲಾಧಿಕಾರಿಗಳ ಸಲಹೆಯಂತೆ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.

Advertisement

ಇದೇ ಸಂದರ್ಭದಲ್ಲಿ ವಿಜ್ಞಾನ ವಿಷಯದ ಬಗ್ಗೆ ಆಸಕ್ತಿ ಮೂಡಿಸಲು ವಿಜ್ಞಾನ ಮೇಳವನ್ನು ಆಯೋಜಿಸಲಾಗಿತ್ತು. ಈ ಮೇಳದಲ್ಲಿ ಶಾಲೆಯ 8ನೇ ತರಗತಿಯ ವಿದ್ಯಾರ್ಥಿ ಮಂಜುನಾಥ ರೈತರಿಗೆ ಮತ್ತು ಕುರಿಗಾಯಿಗಳಿಗೆ ಮಳೆಬರುವ ಸಂದೇಶದ ಬಗ್ಗೆ ಸಂಶೋಧನೆ ಮಾಡಿ ಪ್ರಥಮ ಸ್ಥಾನದೊಂದಿಗೆ 10,000 ಸಾವಿರ ರೂ, ನಗದು ಬಹುಮಾನ ಪಡೆದುಕೊಂಡನು. ಈ ವಿದ್ಯಾರ್ಥಿ ಮಾಡಿದ ವಿಜ್ಞಾನ ಮಾದರಿಯನ್ನು ರಾಷ್ಟ್ರಮಟ್ಟಕ್ಕೆ ಪರಿಚಯಿಸುವುದಾಗಿ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದಿನೇಶ ಬಡಗಂಡಿ ಹೇಳಿದರು.

ಸಾರೆ ತಾರೆ ಜಮೀನ ಪರ ಟ್ರಸ್ಟ್‌ನ ಅಧ್ಯಕ್ಷ ಪ್ರಭುರಾಜ ಅಪರಂಜಿ, ಟ್ರಸ್ಟನ ಮಾಜಿ ಕಾರ್ಯದರ್ಶಿ ಎ.ಸಿ. ಗೋಪಾಲ,
ಸಾರೆ ತಾರೆ ಜಮೀನ ಪರ ಟ್ರಸ್ಟ್‌ದ ಟ್ರಸ್ಟಿ ಅಜಿತ ಚೌಧರಿ, ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರು ಪಾರ್ವತಿ
ವಸ್ತ್ರದ, ಸಿದ್ಧಲಿಂಗನಗರದ ಶ್ರೀ ಬಸವೇಶ್ವರ ಪ್ರೌಢಶಾಲೆಯ ಮುಖ್ಯೊಪಾಧ್ಯಾಯರಾದ ಕೆ.ವಿ. ಕೊರಡ್ಡಿ, ಸಂಸ್ಥೆಯ ವಿಜ್ಞಾನಿಗಳಾದ ವಿಜಯಕುಮಾರ, ಶಾಲೆಯ ಸಿಬ್ಬಂದಿ, ವಿದ್ಯಾರ್ಥಿ-ವಿದ್ಯಾರ್ಥಿನಿಯರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next