Advertisement

ಗಬ್ಬರ್ ಸಿಂಗ್ ತುಳು ಸಿನಿಮಾ ಸೆನ್ಸಾರ್ ಗೆ, ಡಿಸೆಂಬರ್ ನಲ್ಲಿ ತೆರೆಗೆ

05:27 PM Jul 26, 2023 | Team Udayavani |

ಮಂಗಳೂರು: ಟೈಟಲ್, ಪೋಸ್ಟರ್ ನಿಂದಲೇ ಕುತೂಹಲ ಕೆರಳಿಸಿರೋ “ಗಬ್ಬರ್ ಸಿಂಗ್” ತುಳುಚಿತ್ರದ ಚಿತ್ರೀಕರಣ ಸಂಪೂರ್ಣಗೊಂಡಿದ್ದು, ಸಿನಿಮಾವನ್ನು ಸೆನ್ಸಾರ್ ಗೆ ಕಳುಹಿಸಲಾಗಿದೆ ಎಂದು ಚಿತ್ರದ ನಿರ್ಮಾಪಕ ಸತೀಶ್ ಪೂಜಾರಿ ಬಾರ್ಕೂರು ತಿಳಿಸಿದ್ದಾರೆ.

Advertisement

ಮುತ್ತು ಗೋಪಾಲ್ ಫಿಲ್ಮ್ಸ್ ಬಾರ್ಕೂರು ಲಾಂಛನದಲ್ಲಿ ಸತೀಶ್ ಪೂಜಾರಿ ಬಾರ್ಕೂರು ನಿರ್ಮಾಣದಲ್ಲಿ ತಯಾರಾದ ಗಬ್ಬರ್ ಸಿಂಗ್ ಸಿನಿಮಾಕ್ಕೆ ಸುರತ್ಕಲ್, ಚಿತ್ರಾಪುರ, ಬೈಕಂಪಾಡಿ ಮೊದಲಾದ ಪ್ರದೇಶಗಳಲ್ಲಿ ಸಿನಿಮಾಕ್ಕೆ ಮೂರು ಹಂತಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ನಾಯಕ ನಟನಾಗಿ ಶರಣ್ ಶೆಟ್ಟಿ ನಾಯಕಿಯಾಗಿ ವೆನ್ಸಿಟಾ ಅಭಿನಯಿಸಿದ್ದಾರೆ. ಸಮಾಜದಲ್ಲಿ ಅಶಾಂತಿ ಸೃಷ್ಟಿಯಾದಾಗ ಮತ್ತೆ ಶಾಂತಿ ನೆಲೆಸುವಂತೆ ಮಾಡುವ ಖಡಕ್ ಅಧಿಕಾರಿ ಪಾತ್ರದಲ್ಲಿ ಶರಣ್ ಶೆಟ್ಟಿ ಕಾಣಿಸಿಕೊಂಡಿದ್ದಾರೆ.

“ಗಬ್ಬರ್ ಸಿಂಗ್” ಆಕ್ಷನ್ ಥ್ರಿಲ್ಲರ್ ಫ್ಯಾಮಿಲಿ ಓರಿಯೆಂಟೆಡ್ ಫಿಲ್ಮ್ ಆಗಿದೆ. ಮುಂದಿನ ಡಿಸೆಂಬರ್ ಹೊತ್ತಿಗೆ ತುಳುವರ ಮುಂದೆ ಹಾಜರಾಗುವ ಇರಾದೆ ಚಿತ್ರತಂಡಕ್ಕಿದೆ. ಸಿನಿಮಾಕ್ಕೆ ಕತೆ, ಚಿತ್ರಕತೆ, ನಿರ್ದೇಶನದ ಜವಾಬ್ದಾರಿಯನ್ನು ಪ್ರದೀಪ್ ಬೈಕಾಡಿ ವಹಿಸಿದ್ದಾರೆ. ಮಧು ಸುರತ್ಕಲ್ ಸಂಭಾಷಣೆ ರಚಿಸಿದ್ದಾರೆ. ಮುಖ್ಯ ಪಾತ್ರದಲ್ಲಿ ನವೀನ್ ಡಿ ಪಡೀಲ್, ಅರವಿಂದ ಬೋಳಾರ್, ಭೋಜರಾಜ ವಾಮಂಜೂರು, ಪ್ರಸನ್ನ ಶೆಟ್ಟಿ ಬೈಲೂರು, ಉಮೇಶ್ ಮಿಜಾರ್, ರವಿರಾಮ ಕುಂಜ, ಗಿರೀಶ್ ಎಂ. ಶೆಟ್ಟಿ ಕಟೀಲ್, ಪ್ರಜ್ವಲ್ ಪ್ರಕಾಶ್, ಉದಯ ಆಳ್ವ ಇಡ್ಯಾ, ಶಶಿ ಬೆಳ್ಳಾಯರು, ಚಂದ್ರಹಾಸ ಶೆಟ್ಟಿ ಮಾಣಿ, ಸಂಪತ್ ಲೋಬೋ, ಆಶಾ ಶೆಟ್ಟಿ ಶಿಬರೂರು, ಭವ್ಯಾ ಶೆಟ್ಟಿ, ಲಹರಿ ಶೆಟ್ಟಿ ಪಡ್ರೆ, ವೀಣಾ ಶೆಟ್ಟಿ, ಶಿಲ್ಪಾ ಶೆಟ್ಟಿ, ಸಂತೋಷ್ ಮೊದಲಾದವರಿದ್ದಾರೆ.

ಛಾಯಾಗ್ರಹಣ: ರವಿ ಸುವರ್ಣ, ಸಂಕಲನ: ಪ್ರಜ್ವಲ್ ಸುವರ್ಣ, ಸಂಗೀತ: ಡೊಲ್ವಿನ್ ಕೊಳಲಗಿರಿ. ಸಾಹಸ: ಅಲ್ಟಿಮೆಟ್ ಶಿವ್ ನೃತ್ಯ: ಅವಿನಾಶ್ ಬಂಗೇರ, ಶುಭಕಿರಣ್ ಮಾಣಿ, ಕಲೆ: ವೆಂಕಟೇಶ್, ಮೇಕಪ್ ಪ್ರದೀಪ್, ವಸ್ತ್ರಾಲಂಕಾರ : ಶರತ್ ಬರ್ಕೆ, ಸಹ ನಿರ್ದೇಶನ: ಪುಷ್ಪರಾಜ ರೈ, ಜಯರಾಜ್, ಸಹಾಯ: ಭಾಗ್ಯರಾಜ್. ಸಿನಿಮಾಕ್ಕೆ ಶಶಿರಾಜ್ ಕಾವೂರು, ಪ್ರಶಾಂತ್ ಸಿ.ಕೆ, ಅರುಣ್ ಲೀವಿಸ್, ಉಮೇಶ್ ಮಿಜಾರ್ ಗೀತ ಸಾಹಿತ್ಯ ಒದಗಿಸಿದ್ದಾರೆ.

Advertisement

ಡಿಸೆಂಬರ್ ನಲ್ಲಿ ತೆರೆಗೆ
ಗಬ್ಬರ್ ಸಿಂಗ್ ತುಳು ಸಿನಿಮಾ ವಿಭಿನ್ನ ಕತೆಯನ್ನೊಳಗೊಂಡಿದ್ದು, ಪ್ರೇಕ್ಷಕರಿಗೆ ಇಷ್ಟವಾಗುವ ರೀತಿಯಲ್ಲಿ ಕತೆಯನ್ನು ಹೆಣೆಯಲಾಗಿದೆ. ಉತ್ತಮ ಕತೆ, ನವಿರಾದ ಹಾಸ್ಯದೊಂದಿಗೆ ಸಿನಿಮಾ ಚೆನ್ನಾಗಿ ಮೂಡಿ ಬಂದಿದೆ. ಸಿನಿಮಾ ಡಿಸೆಂಬರ್ ನಲ್ಲಿ ಕರಾವಳಿ ಜಿಲ್ಲೆಯಾದ್ಯಂತ ತೆರೆ ಕಾಣಲಿದೆ ಎಂದು ಚಿತ್ರದ ನಿರ್ಮಾಪಕ ಬಾರ್ಕೂರು ಸತೀಶ್ ಪೂಜಾರಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next