Advertisement
ಜಿ7ಸರಿಯಾಗಿ 50 ವರ್ಷಗಳ ಹಿಂದೆ ಜಗತ್ತೇ ತೈಲ ಸಮಸ್ಯೆ ಎದುರಿಸುವಾಗ ಶುರುವಾಗಿದ್ದೇ ಈ ಜಿ7 ಅಥವಾ ಜಿ8 ಒಕ್ಕೂಟ. ಅಂದರೆ ಅಮೆರಿಕ, ಕೆನಡಾ, ಇಂಗ್ಲೆಂಡ್, ಫ್ರಾನ್ಸ್, ಜರ್ಮನಿ, ಇಟಲಿ, ಜಪಾನ್ ಮತ್ತು ರಷ್ಯಾ ದೇಶಗಳು ಸೇರಿ ಈ ಜಿ8 ಒಕ್ಕೂಟ ಶುರುವಾಗಿತ್ತು. ವಿಶೇಷವೆಂದರೆ ಈ ಎಲ್ಲ ದೇಶಗಳು ಆಗಿನ ಕಾಲಕ್ಕೇ ಅಭಿವೃದ್ದಿ ಹೊಂದಿದ ಮತ್ತು ಜಗತ್ತಿನ ಶಕ್ತಿಶಾಲಿ ದೇಶಗಳಾಗಿದ್ದವು. 2014ರಲ್ಲಿ ರಷ್ಯಾವನ್ನು ಈ ಗುಂಪಿನಿಂದ ತೆಗೆದುಹಾಕಲಾಗಿತ್ತು. ಅಲ್ಲಿಂದ ಇದು ಜಿ7 ಎಂದೇ ಪ್ರಸಿದ್ಧಿಯಾಗಿದೆ.
2006ರಲ್ಲಿ ಶುರುವಾದ ಒಕ್ಕೂಟ ಇದು. ಜಗತ್ತಿನ ಪ್ರಮುಖ ಅಭಿವೃದ್ಧಿಶೀಲ ದೇಶಗಳು ಸೇರಿ ಮಾಡಿಕೊಂಡ ಕೂಟ. ಅಲ್ಲದೆ ಜಿ7 ಒಕ್ಕೂಟಕ್ಕೆ ಪ್ರತಿಯಾಗಿಯೇ ಮಾಡಿಕೊಂಡಿದ್ದು ಎಂದು ಹೇಳಿದರೆ ತಪ್ಪಾಗಲಾರದು. ಆರಂಭದಲ್ಲಿ ಈ ಕೂಟದಲ್ಲಿ ಬ್ರೆಜಿಲ್, ರಷ್ಯಾ, ಭಾರತ ಮತ್ತು ಚೀನ ಮಾತ್ರ ಇದ್ದವು. ಅಂದರೆ ಇದರ ಹೆಸರು ಬ್ರಿಕ್ ಎಂದೇ ಇತ್ತು. ಬಳಿಕ ದಕ್ಷಿಣ ಆಫ್ರಿಕಾ ದೇಶ 2010ರಲ್ಲಿ ಸೇರ್ಪಡೆಯಾಯಿತು. ಬಳಿಕ ಬ್ರಿಕ್ಸ್ ಎಂಬ ಹೆಸರಿನಿಂದಲೇ ಪ್ರಸಿದ್ಧವಾಯಿತು.
ಅಭಿವೃದ್ಧಿಶೀಲ ದೇಶಗಳು ಎದುರಿಸುತ್ತಿರುವ ಸಾಮಾ ನ್ಯ ಸಮಸ್ಯೆಗಳನ್ನು ಗಮನದಲ್ಲಿರಿಸಿಕೊಂಡು ಈ ಬ್ರಿಕ್ಸ್ ಅನ್ನು ಸ್ಥಾಪಿಸಲಾಗಿದ್ದು, ಸದಸ್ಯ ದೇಶಗಳ ನಡುವೆ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಸಹಕಾರವು ಇದೆ. ವಿಸ್ತರಣೆಗೆ ಸಿದ್ಧವಾದ ಬ್ರಿಕ್ಸ್
ಇತ್ತೀಚಿನ ವರ್ಷಗಳಲ್ಲಿ ಬ್ರಿಕ್ಸ್ ಜಾಗತಿಕ ಮಟ್ಟದಲ್ಲೇ ತನ್ನದೇ ಆದ ಪ್ರಭಾವ ಹೊಂದಿದೆ. ಇದಕ್ಕೆ ಪ್ರಮುಖ ಕಾರಣ ಚೀನ ಮತ್ತು ಭಾರತ. ಈ ಎರಡೂ ದೇಶಗಳ ಆರ್ಥಿಕತೆಯು ಭರಪೂರ ವೇಗದಲ್ಲಿ ಬೆಳೆಯುತ್ತಿದ್ದು, ಸದ್ಯದಲ್ಲೇ ಅಮೆರಿಕವನ್ನೂ ಮೀರಿಸುವ ಶಕ್ತಿ ಹೊಂದಿದೆ. ಅಲ್ಲದೆ ಈಗಾಗಲೇ ಚೀನ ಎರಡನೇ ಸ್ಥಾನದಲ್ಲಿದ್ದು, ಭಾರತ 5ನೇ ಸ್ಥಾನದಲ್ಲಿದೆ. ಜಿ7 ಗುಂಪಿನಲ್ಲಿರುವ ಇಟಲಿ, ಫ್ರಾನ್ಸ್, ಇಂಗ್ಲೆಂಡ್ ಅನ್ನೂ ಭಾರತ ಮೀರಿಸಿದೆ. ಸದ್ಯ ಜರ್ಮನಿ ಮತ್ತು ಜಪಾನ್ ದೇಶಗಳು ಮಾತ್ರ ಭಾರತಕ್ಕಿಂತ ಮುಂದಿವೆ.
Related Articles
Advertisement
ಆದರೆ ಜಿ7 ಅನ್ನು ವಿಸ್ತರಿಸಬೇಕು ಎಂಬ ಮಾತುಗಳು ಕೇಳಿಬಂದಿದ್ದರೂ, ಇನ್ನೂ ಈ ದೇಶಗಳ ಗುಂಪು ಚಿಂತನೆ ಮಾಡಿಲ್ಲ. ಅಲ್ಲದೇ 50 ವರ್ಷಗಳ ಹಿಂದೆ ಮೇಜರ್ ಆರ್ಥಿಕತೆಗಳಾಗಿದ್ದ ದೇಶಗಳೀಗ ಕೆಳಗೆ ಇಳಿದು ಹೋಗಿವೆ. ಆಗ ಕೆಳಗೆ ಇದ್ದ ದೇಶಗಳು ಮೇಲಕ್ಕೇರಿವೆ. ಆರ್ಥಿಕತೆಯನ್ನು ಮಾನದಂಡವಾಗಿ ಇರಿಸಿಕೊಂಡು ಹೇಳುವುದಾದರೆ ಜಿ7 ವಿಸ್ತರಣೆಯಾಗಬೇಕು.
ಜಾಗತಿಕ ಮಟ್ಟದಲ್ಲಿ ಯಾರು ನಿರ್ಣಾಯಕ? ಹಿಂದಿನ ವರ್ಷಗಳಲ್ಲಿ ಜಗತ್ತಿನಲ್ಲಿ ಏನೇ ಆದರೂ, ಜಿ7 ದೇಶಗಳು ಪರಿಹಾರ ಕಂಡುಕೊಳ್ಳುತ್ತಿದ್ದವು. ಇತ್ತೀ ಚಿನ ದಿನಗಳಲ್ಲಿ ಇದು ಬದಲಾಗುತ್ತಿದೆ. ಇದಕ್ಕೆ ಸಾಕ್ಷಿ ಉಕ್ರೇನ್ ಮೇಲಿನ ಯುದ್ಧ. ಈ ಯುದ್ದ ಸಾರಿದ ರಷ್ಯಾ ಮೇಲೆ ಐರೋಪ್ಯ ದೇಶಗಳು ಮತ್ತು ಜಿ7 ದೇಶಗಳು ದಿಗ್ಬಂಧನ ಹೇರಿವೆ. ಬ್ರಿಕ್ಸ್ ದೇಶಗಳು ಈ ವಿಚಾರದಲ್ಲಿ ತಟಸ್ಥ ನಿಲುವು ತಳೆದಿವೆ. ಅಂದರೆ ಚೀನ ಅಥವಾ ಭಾರತ, ಐರೋಪ್ಯ ದೇಶಗಳು, ಜಿ7 ದೇಶಗಳ ರಷ್ಯಾ ನಿಲುವನ್ನು ಒಪ್ಪಿಕೊಂಡಿಲ್ಲ. ಯುದ್ಧ ಆರಂಭ ವಾದಾಗಿನಿಂದಲೂ ಈ ಎರಡೂ ದೇಶಗಳು ರಷ್ಯಾ ಜತೆಗೆ ತಮ್ಮದೇ ಕರೆನ್ಸಿಯಲ್ಲೇ ವ್ಯಾಪಾರ ವ್ಯವಹಾರ ಮಾಡುತ್ತಿವೆ. ಹೀಗಾಗಿ ಶ್ರೀಮಂತ ದೇಶಗಳ ನಿರ್ಧಾ ರವನ್ನು ಒಪ್ಪಬೇಕಾಗಿಲ್ಲ ಎಂಬುದನ್ನು ಈ ಗುಂಪು ಪರೋಕ್ಷವಾಗಿ ಹೇಳುತ್ತಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ. ಖರೀದಿ ಶಕ್ತಿಯಲ್ಲಿ
ಬ್ರಿಕ್ಸ್ ಮುಂದು: ವಿಶೇಷ ವೆಂದರೆ ಜಿ7 ದೇಶಗಳಿಗೆ ಹೋಲಿಕೆ ಮಾಡಿದರೆ, ಖರೀದಿ ಸಾಮರ್ಥ್ಯ ಹೋಲಿಕೆಯಲ್ಲಿ ಬ್ರಿಕ್ಸ್ ದೇಶಗಳೇ ಮುಂದಿವೆ. ಸಾಮಾನ್ಯವಾಗಿ ಇದನ್ನು ಆ ದೇಶಗಳ ಕರೆನ್ಸಿ ಶಕ್ತಿ ಮತ್ತು ವಸ್ತುಗಳ ಖರೀದಿಗೆ ನೀಡುವ ಹಣದ ಮೇಲೆ ನಿರ್ಧಾರವಾಗುತ್ತದೆ. ಅಲ್ಲದೆ ಇದು ಕರೆನ್ಸಿ ವಿನಿಮಯದಡಿ ಲೆಕ್ಕಾಚಾರ ಹಾಕಲಾಗುತ್ತದೆ.