Advertisement

G20 summit: ಜಗದ್ವಿಖ್ಯಾತ ಹಂಪಿಯ ಸ್ಮಾರಕಗಳು ಝಗಮಗ

09:23 PM Jul 09, 2023 | Team Udayavani |

ಹೊಸಪೇಟೆ: ಜಗದ್ವಿಖ್ಯಾತ ಹಂಪಿ ಜಿ-20 ಶೃಂಗಸಭೆ ಹಿನ್ನೆಲೆಯಲ್ಲಿ ವಿದ್ಯುದೀಪಾಲಂಕಾರದಿಂದ ಕಂಗೊಳಿಸುತ್ತಿದೆ. ಹಂಪಿಯ ಸ್ಮಾರಕಗಳಿಗೆ ವಿದ್ಯುದೀಪಾಲಂಕಾರ ಮಾಡಲಾಗಿದೆ.

Advertisement

ಜುಲೈ 9 ರಿಂದ 16 ರವರೆಗೆ ಜಿ-20 ಶೃಂಗಸಭೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಹಂಪಿಯ ಸ್ಮಾರಕಗಳಿಗೆ ವಿದ್ಯುದೀಪಾಲಂಕಾರ ಮಾಡಲಾಗಿದೆ. ಹಂಪಿಯ ವಿಜಯ ವಿಠ್ಠಲ ದೇವಾಲಯ, ಸಾಸಿವೆ ಕಾಳು ಗಣಪ ಮಂಟಪ, ಶ್ರೀವಿರೂಪಾಕ್ಷೇಶ್ವರ ದೇವಾಲಯ, ಎದುರು ಬಸವಣ್ಣ ಮಂಟಪ, ಮಾತಂಗ ಪರ್ವತ ಸೇರಿದಂತೆ ಹಂಪಿಯ ಸ್ಮಾರಕಗಳಿಗೆ ವಿದ್ಯುದೀಪಾಲಂಕಾರ ಮಾಡಲಾಗಿದೆ.

ಹಂಪಿ ಬೈ ನೈಟ್ ಯೋಜನೆಗೆ ಈಗಾಗಲೇ ಹಂಪಿ ಅಭಿವೃದ್ಧಿ ಪ್ರಾಧಿಕಾರ ಸೈ ಎಂದಿದೆ. ಹಾಗಾಗಿ ಹಂಪಿಯ ಪ್ರಮುಖ ಸ್ಮಾರಕಗಳಿಗೆ ವಿದ್ಯುದೀಪಾಲಂಕಾರ ಮಾಡಲಾಗಿದೆ. ಹಂಪಿ ಉತ್ಸವದ ಸಮಯದಲ್ಲಿ ಸ್ಮಾರಕಗಳಿಗೆ ವಿದ್ಯುದೀಪಾಲಂಕಾರ ಮಾಡಲಾಗುತ್ತಿತ್ತು. ಈಗ ಜುಲೈ 9 ರಿಂದ 16 ರವರೆಗೂ ಹಂಪಿಯ ಸ್ಮಾರಕಗಳು ಜಗಮಗಿಸಲಿವೆ. ಹಾಗಾಗಿ ಹಂಪಿಯ ಸ್ಮಾರಕಗಳು ನವವಧುವಿನಂತೇ ಶೃಂಗಾರಗೊಂಡಿವೆ.

ಹಂಪಿಯ ಸ್ಮಾರಕಗಳನ್ನು ರಾತ್ರಿ ಹೊತ್ತಿನಲ್ಲೂ ವೀಕ್ಷಣೆಗೆ ಹಂಪಿ ಬೈ ನೈಟ್ ಯೋಜನೆ ರೂಪಿಸಲಾಗಿದೆ. ಜೊತೆಗೆ ಹಂಪಿಯ ಮಹತ್ವದ ಸ್ಮಾರಕಗಳ ಬಳಿ ಧ್ವನಿ ಮತ್ತು ಬೆಳಕು ಕಾರ್ಯಕ್ರಮದ ವ್ಯವಸ್ಥೆ ಕೂಡ ಮಾಡಲಾಗುತ್ತಿದೆ. ಜಿ-20 ಶೃಂಗಸಭೆ ಹಿನ್ನೆಲೆಯಲ್ಲಿ ಎದುರು ಬಸವಣ್ಣ ಮಂಟಪ ಮತ್ತು ವಿಜಯ ವಿಠ್ಠಲ ದೇವಾಲಯದ ಬಳಿಯೂ ಧ್ವನಿ ಮತ್ತು ಬೆಳಕು ಕಾರ್ಯಕ್ರಮದ ವ್ಯವಸ್ಥೆ ಮಾಡಲಾಗಿದೆ. ಜಿ-20 ರಾಷ್ಟ್ರಗಳ ಪ್ರತಿನಿಧಿಗಳು ಈ ಕಾರ್ಯಕ್ರಮ ವೀಕ್ಷಣೆ ಮಾಡಲಿದ್ದಾರೆ. ಪ್ರವಾಸೋದ್ಯಮ, ಪುರಾತತ್ವ ಇಲಾಖೆಗಳು, ಹಂಪಿ ಅಭಿವೃದ್ಧಿ ಪ್ರಾಧಿಕಾರ ಹಾಗು ಜಿಲ್ಲಾಡಳಿತ ಹಂಪಿ ಸ್ಮಾರಕಗಳಿಗೆ ವಿದ್ಯುದೀಪಾಲಂಕಾರ ಮಾಡಿದ್ದು, ದೇಶ-ವಿದೇಶಿ ಪ್ರವಾಸಿಗರ ಗಮನ ಕೂಡ ಸೆಳೆಯುತ್ತಿದೆ.

ಹಂಪಿಯ ರಸ್ತೆಗಳಲ್ಲಿ ಜಿ-20 ಶೃಂಗಸಭೆಗೆ ಆಗಮಿಸುವ ಪ್ರತಿನಿಧಿಗಳಿಗೆ ಸ್ವಾಗತಿಸಲು ರಂಗೋಲಿ ಚಿತ್ತಾರಗಳನ್ನು ಬಿಡಿಸಲಾಗಿದೆ. ಕಮಲಾಪುರ ಪುರಸಭೆ ವತಿಯಿಂದ ಈ ಚಿತ್ತಾರಗಳನ್ನು ಬಿಡಿಸಲಾಗಿದೆ. ಹಂಪಿ, ಕಮಲಾಪುರ ಗೋಡೆಗಳ ಮೇಲೂ ಕಲಾವಿದರು ಹಂಪಿಯ ಸ್ಮಾರಕಗಳನ್ನು ಕುಂಚದಲ್ಲಿ ಅರಳಿಸಿದ್ದಾರೆ. ಇಡೀ ಹಂಪಿ ಶೃಂಗಾರಗೊಂಡಿದೆ.

Advertisement

ಜಿ-20 ಶೃಂಗಸಭೆ ಹಿನ್ನೆಲೆಯಲ್ಲಿ ಹಂಪಿಯ ಸ್ಮಾರಕಗಳ ಬಳಿ ದೇಶದ ವಿವಿಧ ಕಲೆಗಳ ಪ್ರದರ್ಶನ ಕೂಡ ನಡೆಯಲಿದೆ. ಈಗಾಗಲೇ ಕಲಾವಿದರು ಆಗಮಿಸಿದ್ದು, 52 ಪ್ರತಿನಿಧಿಗಳಿಗೆ ಭಾರತೀಯ ಕಲೆಯನ್ನು ಉಣಬಡಿಸಲಿದ್ದಾರೆ.

ಹಂಪಿಯ ಇವೋಲ್ ಬ್ಯಾಕ್ ಹೋಟೆಲ್‌ಗೆ ಆಗಮಿಸಿದ ಜಿ-20 ರಾಷ್ಟ್ರಗಳ ಪ್ರತಿನಿಧಿಗಳನ್ನು ಸ್ಥಳೀಯ ಹಗಲು ವೇಷ ಕಲಾವಿದರ ತಂಡ ಬರಮಾಡಿಕೊಂಡಿತು. ಹಂಪಿ ನೆಲದ ಕಲೆಯೊಂದಿಗೆ ಸ್ವಾಗತ ಮಾಡಿದ ಕಲಾವಿದರು, ಹಂಪಿಯ ಗತ ವೈಭವ ಸಾರುವ ಕಾರ್ಯ ಮಾಡಿದರು.

ಹಂಪಿಯಲ್ಲಿ ಜಿ-20 ಶೃಂಗಸಭೆ ಹಿನ್ನೆಲೆಯಲ್ಲಿ ಪ್ರವಾಸಿಗರಲ್ಲಿ ಇಳಿಮುಖವಾಗಿದೆ. ಪ್ರವಾಸಿಗರಿಗೆ ನಿರ್ಬಂಧ ಹೇರದಿದ್ದರೂ ಪ್ರವಾಸಿಗರು ಈ ವೀಕೆಂಡ್‌ನಲ್ಲಿ ಭಾರಿ ಪ್ರಮಾಣದಲ್ಲಿ ಸುಳಿಯಲಿಲ್ಲ. ಕಳೆದ ಭಾನುವಾರ 8 ಸಾವಿರಕ್ಕೂ ಅಧಿಕ ಪ್ರವಾಸಿಗರು ಹಂಪಿಗೆ ಆಗಮಿಸಿದ್ದರು. ಹಂಪಿಯಲ್ಲಿ 1076 ಪೊಲೀಸರನ್ನು ಭದ್ರತೆಗೆ ನಿಯೋಜನೆ ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next