Advertisement

ಉಗ್ರ ಶಿಬಿರ ನಿರ್ನಾಮಕ್ಕೆ ಸಾಮೂಹಿಕ ಕಾರ್ಯಾಚರಣೆ: ಪ್ರಧಾನಿ ಮೋದಿ ಕರೆ

04:08 PM Jul 07, 2017 | udayavani editorial |

ಹ್ಯಾಂಬರ್ಗ್‌ : ಉಗ್ರರ ಶಿಬಿರಗಳ ನಿರ್ನಾಮಕ್ಕೆ ಮತ್ತು ಉಗ್ರರಿಗೆ ನೆರವು ನೀಡುವವರ ಮತ್ತು ಭಯೋತ್ಪಾದನೆಯನ್ನು ಪ್ರವರ್ತಿಸುವವರ ವಿರುದ್ಧದ ಸಾಮೂಹಿಕ ಕಾರ್ಯಾಚರಣೆಗೆ ಎಲ್ಲರೂ ಒಗ್ಗೂಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಶುಕ್ರವಾರ ಇಲ್ಲಿ ಕರೆ ನೀಡಿದರು.

Advertisement

ಜರ್ಮನಿಯಲ್ಲಿನ  ಜಿ-20 ಶೃಂಗದ ಪಾರ್ಶ್ವದಲ್ಲಿ  ನಡೆದ ಬ್ರಿಕ್ಸ್‌ ನಾಯಕರ ಔಪಚಾರಿಕ ಸಭೆಯಲ್ಲಿ ಪ್ರಧಾನಿ ಮೋದಿ ಅವರು ಭಯೋತ್ಪಾದನೆ ಹಾಗೂ ಅದರ ಪ್ರವರ್ತಕರ ವಿರುದ್ಧ ಸಾಮೂಹಿಕ ಕಾರ್ಯಾಚರಣೆ ನಡೆಸುವ ಅಗತ್ಯವಿದೆ ಎಂದು ಕಟುವಾದ ಶಬ್ದಗಳಲ್ಲಿ ಹೇಳಿದರು. 

ಸಂರಕ್ಷಣಾವಾದ, ವಿಶೇಷವಾಗಿ ವೃತ್ತಿಪರ ಕುಶಲಿಗರನ್ನು ಕಾಪಿಡುವುದರ ವಿರುದ್ಧ ಸಾಮೂಹಿಕ ಧ್ವನಿಯನ್ನು ಮೋದಿ ಬ್ರಿಕ್ಸ್‌ ನಾಯಕರ ಸಭೆಯಲ್ಲಿ ಬೆಂಬಲಿಸಿದರು. 

ಬ್ರಿಕ್ಸ್‌ ಧ್ವನಿಯು ಶಕ್ತಿಶಾಲಿಯಾಗಿದ್ದು ಜಾಗತಿಕ ಆರ್ಥಿಕತೆ ಮತ್ತು ಭಯೋತ್ಪಾದನೆಯನ್ನು ಮಟ್ಟ ಹಾಕುವುದಕ್ಕೆ ಬ್ರಿಕ್ಸ್‌ ನಾಯಕತ್ವವನ್ನು ನೀಡಬೇಕಾಗಿದೆ ಎಂದು ಮೋದಿ ಹೇಳಿದರು. 

ಭಾರತದಲ್ಲಿ ಈ ತಿಂಗಳ 1ರಿಂದ ಜಾರಿಗೆ ತರಲಾಗಿರುವ ಐತಿಹಾಸಿಕ ಜಿಎಸ್‌ಟಿ, ದೇಶದಲ್ಲಿ  ಕಳೆದ 70 ವರ್ಷಗಳಲ್ಲೇ ಜಾರಿಗೆ ತರಲಾಗಿರುವ ಅತೀ ದೊಡ್ಡ ತೆರಿಗೆ ಸುಧಾರಣಾ ಕ್ರಮವಾಗಿದೆ ಎಂದು ಮೋದಿ ಹೇಳಿದರು. 

Advertisement

ಬ್ರಿಕ್ಸ್‌ ಔಪಚಾರಿಕ ಸಭೆಯಲ್ಲಿ ಪ್ರಧಾನಿ ಮೋದಿ ಮತ್ತು ಚೀನ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಅವರು ಉಭಯ ದೇಶಗಳ ನಡುವಿನ ಗಡಿ ಬಿಕ್ಕಟ್ಟಿನ ನಡುವೆಯೇ ಮುಖಾಮುಖೀಯಾದರು. ಈ ವರ್ಷಾಂತ್ಯ ಚೀನದಲ್ಲಿ ನಡೆಯಲಿರುವ ಐದು ದೇಶಗಳ (ಬ್ರಝಿಲ್‌, ರಶ್ಯ, ಭಾರತ, ಚೀನ ಮತ್ತು  ದಕ್ಷಿಣ ಆಫ್ರಿಕ) ಬ್ರಿಕ್ಸ್‌ ಶೃಂಗವನ್ನು ಯಶಸ್ವಿಗೊಳಿಸುವುದಕ್ಕೆ ಪೂರ್ಣ ಸಹಕಾರ ನೀಡಲು ಬ್ರಿಕ್ಸ್‌ ನಾಯಕರು ಒಪ್ಪಿಕೊಂಡರು. 

Advertisement

Udayavani is now on Telegram. Click here to join our channel and stay updated with the latest news.

Next