Advertisement

G20 Summit: ದೆಹಲಿಯಲ್ಲಿ ಮೂರು ದಿನ ಸ್ವಿಗ್ಗಿ, ಝೊಮ್ಯಾಟೊ, ಅಮೆಜಾನ್ ಸೇವೆ ಇಲ್ಲ

11:00 AM Sep 05, 2023 | Team Udayavani |

ನವದೆಹಲಿ: ಜಿ 20 ನಾಯಕರ ಶೃಂಗಸಭೆಯು ಸೆಪ್ಟೆಂಬರ್ 9 ಮತ್ತು 10 ರವರೆಗೆ ನವದೆಹಲಿಯ ಪ್ರಗತಿ ಮೈದಾನದಲ್ಲಿರುವ ಭಾರತ ಮಂಟಪದಲ್ಲಿ ಹೊಸದಾಗಿ ನಿರ್ಮಿಸಲಾದ ಅಂತರರಾಷ್ಟ್ರೀಯ ಸಮಾವೇಶ ಕೇಂದ್ರದಲ್ಲಿ ನಡೆಯಲಿದೆ. ಇದಕ್ಕಾಗಿ ಎಲ್ಲಾ ಸಿದ್ದತೆಗಳು ನಡೆಯುತ್ತಿದ್ದು ದೆಹಲಿ ನಗರ ಸಿಂಗಾರಗೊಳ್ಳುತ್ತಿದೆ.

Advertisement

G20 ಉನ್ನತ ಮಟ್ಟದ ಸಭೆಯಾಗಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ಎಲ್ಲಾ ಆನ್‌ಲೈನ್ ವಿತರಣೆ ಮತ್ತು ವಾಣಿಜ್ಯ ಸೇವೆಗಳನ್ನು ಸ್ಥಗಿತಗೊಳಿಸುವುದು ಸೇರಿದಂತೆ ನವದೆಹಲಿ ಜಿಲ್ಲೆಯಲ್ಲಿ ಹಲವಾರು ನಿರ್ಬಂಧಗಳನ್ನು ವಿಧಿಸಲಾಗಿದೆ.

ಮುಂಜಾಗ್ರತಾ ಕ್ರಮದ ಹಿನ್ನೆಲೆಯಲ್ಲಿ ನಗರದ ಎಲ್ಲಾ ಹೋಟೆಲ್, ವಾಣಿಜ್ಯ ಸಂಸ್ಥೆಗಳು, ಮಾರುಕಟ್ಟೆಗಳು, ಆಹಾರ ವಿತರಣೆ ಮತ್ತು ವಾಣಿಜ್ಯ ವಿತರಣಾ ಸೇವೆಗಳನ್ನು ಮೂರು ದಿನಗಳವರೆಗೆ ಮುಚ್ಚಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈ ಕುರಿತು ಹೇಳಿಕೆ ನೀಡಿದ ಪೊಲೀಸ್ ಆಯುಕ್ತರು ದೆಹಲಿಯಲ್ಲಿ ಎರಡು ದಿನಗಳ ನಡೆಯುವ ಶೃಂಗ ಸಭೆಯ ಹಿನ್ನೆಲೆಯಲ್ಲಿ ಉನ್ನತ ಅಧಿಕಾರಿಗಳು ಆಗಮಿಸುವ ನಿಟ್ಟಿನಲ್ಲಿ ಹೆಚ್ಚಿನ ಮುಂಜಾಗ್ರತಾ ಕ್ರಮಗಳನ್ನು ವಹಿಸುವುದು ಅವಶ್ಯಕವಾಗಿದೆ ಈ ನಿಟ್ಟಿನಲ್ಲಿ “ನಾವು ನಗರ ಪ್ರದೇಶಗಳಲ್ಲಿ ಆಹಾರ ವಿತರಣಾ ಸೇವೆಗಳನ್ನು ಅನುಮತಿಸಲು ಸಾಧ್ಯವಿಲ್ಲ. ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್‌ನಂತಹ ಇಂಟರ್ನೆಟ್ ವಿತರಣಾ ಕಂಪನಿಗಳು ನಿಯಂತ್ರಿತ ವಲಯದಲ್ಲಿ ಕಾರ್ಯನಿರ್ವಹಿಸಲು ಅನುಮತಿಸುವುದಿಲ್ಲ. ಔಷಧ ಮತ್ತು ಅಗತ್ಯ ವಸ್ತುಗಳನ್ನು ಹೊರತುಪಡಿಸಿ ಬೇರೆ ಯಾವುದೇ ಆನ್ ಲೈನ್ ವ್ಯವಹಾರ ಇರುವುದಿಲ್ಲ”ಎಂದು ವಿಶೇಷ ಪೊಲೀಸ್ ಆಯುಕ್ತ (ಸಂಚಾರ) ಎಸ್‌ಎಸ್ ಯಾದವ್ ಸೆಪ್ಟೆಂಬರ್ 4 ರಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಇದರ ನಡುವೆ ಲ್ಯಾಬ್ ವರದಿಗಳು ಮತ್ತು ಮಾದರಿ ಸಂಗ್ರಹಗಳು ಸೇರಿದಂತೆ ಅಗತ್ಯ ವೈದ್ಯಕೀಯ ವಸ್ತುಗಳ ವಿತರಣೆಗೆ ನಗರದಾದ್ಯಂತ ಅನುಮತಿ ನೀಡಲಾಗಿದೆ.

Advertisement

ಶೃಂಗ ಸಭೆಯ ಪರಿಣಾಮ ಮೆಟ್ರೋ ಸೇವೆಗಳಿಗೆ ಯಾವುದೇ ಪರಿಣಾಮ ಬೀರುವುದಿಲ್ಲ, ವಿಐಪಿ ಸಂಚಾರ ಮತ್ತು ಭದ್ರತಾ ನಿರ್ಬಂಧಗಳ ಕಾರಣದಿಂದಾಗಿ ನಿಲ್ದಾಣಗಳಲ್ಲಿ 10-15 ನಿಮಿಷಗಳ ಕಾಲ ಗೇಟ್‌ಗಳನ್ನು ಮುಚ್ಚುವ ಸಾಧ್ಯತೆಯಿದೆ. ಆದರೆ ಪ್ರಗತಿ ಮೈದಾನ (ಸುಪ್ರೀಂ ಕೋರ್ಟ್) ಹೊರತುಪಡಿಸಿ, ಇತರ ನಿಲ್ದಾಣಗಳಲ್ಲಿ ಮೆಟ್ರೋ ಸೇವೆಗಳಿಗೆ ಯಾವುದೇ ಪರಿಣಾಮ ಬೀರುವುದಿಲ್ಲ,” ಎಂದು ಅವರು ಹೇಳಿದರು.

ಇದನ್ನೂ ಓದಿ: Sanatana Dharma: ಉದಯನಿಧಿ ಸ್ಟಾಲಿನ್‌ ತಲೆ ಕಡಿದವರಿಗೆ 10 ಕೋ ರೂ. ನೀಡುತ್ತೇನೆ: ಸ್ವಾಮೀಜಿ

Advertisement

Udayavani is now on Telegram. Click here to join our channel and stay updated with the latest news.

Next