100ರ ಗೆರೆ ಮುಟ್ಟುವವರೆಗೂ ಬಿಪಿ, ಶುಗರನ್ನೂ ಹತ್ತಿರ ಬಿಟ್ಟುಕೊಳ್ಳದ ಅವರ ಶತಕದ ಗುಟ್ಟಿನಲ್ಲಿ ಹಲವು ಶಿಸ್ತುಗಳ ಬೆರಕೆಯಿತ್ತು.
Advertisement
ಅದ್ಭುತ ಚೆಸ್ ಆಟಗಾರವೆಂಕಟಸುಬ್ಬಯ್ಯ ಅವರೊಳಗೊಬ್ಬ ಅದ್ಭುತ ಚೆಸ್ ಆಟಗಾರನಿದ್ದ. ಆತನಿಗೆ ಸೋತು ಗೊತ್ತಿಲ್ಲ. ಎದುರು ಮನೆಯಲ್ಲಿದ್ದ ಜಗನ್ನಾಥ ಎಂಬವರ ಜತೆಗೆ, ನಿತ್ಯ ಆಟ. ಚೆಸ್ಸೇ ಜಿ.ವಿ. ಒಳಗಿನ ಕೌನ್ಸೆಲಿಂಗ್. ಹೀಗಾಗಿ ಎಂದಿಗೂ ಅವರಿಗೆ ಖನ್ನತೆ ಬಾಧಿಸಿರಲಿಲ್ಲ.
ಪ್ರೀತಿ- ಗೀತಿಯ ಫಜೀತಿಗೆ ಜಿ.ವಿ. ಎಂದೂ ಸಿಲುಕಿದವರಲ್ಲ. ಎಂ.ಎ. ಓದುತ್ತಿದ್ದ ದಿನಗಳಲ್ಲಿ ಕಮಲಾ ಎಂಬ ಸುಂದರಿ ಇದ್ದಳಂತೆ. ಆಕೆ ಮಾತಾಡಿಸಲು ಬಂದರೆ, ಜಿ.ವಿ. ನಾಚುತ್ತಿದ್ದರಂತೆ. “ಪದವಿ ಮುಗಿಯವರೆಗೂ ನಾನು ಆಕೆಯನ್ನು ಕಣ್ಣೆತ್ತಿ ನೋಡುವ ಧೈರ್ಯವನ್ನೇ ತೋರಿರಲಿಲ್ಲ’ ಎಂದು ಒಮ್ಮೆ ಜಿ.ವಿ.ಯೇ ಹೇಳಿಕೊಂಡಿದ್ದರು. ಕೋಪ ಮಾಡಿಕೊಂಡವರಲ್ಲ
ಜಿ.ವಿ. ಅವರ ಬದುಕಿನಲ್ಲಿ ಸಿಟ್ಟು ಉಕ್ಕಿಸುವ ಪ್ರಸಂಗಗಳು ಹಲವು ಬಾರಿ ಎದುರಾಗಿವೆ. “ಕೋಪ ಬಂದಾಗಲೆಲ್ಲ ಒಂದು ದೀರ್ಘ ನಿಟ್ಟುಸಿರುಬಿಟ್ಟು, ಸಿಟ್ಟನ್ನು ತಣಿಸಿಕೊಂಡು, ನಿಷ್ಕಲ್ಮಷವಾಗಿ ನಗುತ್ತಿದ್ದೆ’ ಎನ್ನುತ್ತಿದ್ದರು, ಜಿ.ವಿ.
Related Articles
ಜಿ.ವಿ., ರಾಜಕಾರಣವನ್ನೂ ಬದುಕಿನಿಂದ ದೂರ ಇಟ್ಟಿದ್ದರು. ರಾಜಕಾರಣಿಗಳು ಸಿಕ್ಕಾಗ, ಕನ್ನಡದ ವಿಚಾರಗಳನ್ನಷ್ಟೇ ಮಾತಾಡುತ್ತಿದ್ದರು. ಹಾಗಾದರೆ, ಜಿ.ವಿ. ಅವರಿಗೆ ಯಾವುದೇ ವ್ಯಸನಗಳೇ ಇರಲಿ ಲ್ಲವೇ? ಇತ್ತು! ಚಕ್ಕುಲಿ, ಕೋಡುಬಳೆಯನ್ನು ಕಡಿಯುವ ಕಸರತ್ತನ್ನು ಅವರು ನೂರು ದಾಟಿದ ಮೇಲೂ ನಿರಂತರವಾಗಿ ಮಾಡುತ್ತಿದ್ದರು. ಹಲ್ಲುಗಳು ಅಷ್ಟು ಗಟ್ಟಿಮುಟ್ಟಾಗಿದ್ದವು. ಕಣ್ಣಿಗೆ ಕನ್ನಡಕವೂ ಬೇಡ ವಾಗಿತ್ತು. ಬದುಕಿಡೀ ಪಾಠ ಹೇಳಿ, ಕೂಗಿ ಕೂಗಿಯೇ ನಮ್ಮ ಆಯುಸ್ಸು ಕಮ್ಮಿ ಆಗುತ್ತೆ ಎನ್ನುವ ಮೇಷ್ಟ್ರುಗಳ ನಡುವೆ, ಪಾಠ ಹೇಳುತ್ತಲೇ ಆಯುಸ್ಸನ್ನು ಹೆಚ್ಚಿಸಿ ಕೊಂಡವರು ಜಿ.ವಿ. ಒಬ್ಬ ಮನುಷ್ಯ, ಇಷ್ಟೆಲ್ಲ ಸಭ್ಯತೆ ರೂಢಿಸಿಕೊಂಡರೆ, ಶತಾಯುಷಿ ಆಗ್ತಾನಾ? ಎಂಬ ಪ್ರಶ್ನೆಗೆ, ಜಿ.ವಿ., ಒಂದು ವಿಸ್ಮಯದ ಉತ್ತರವಷ್ಟೇ.
Advertisement
ಸಿನೆಮಾ ನೋಡೋರಲ್ಲ…ಜಿ.ವಿ. ಅವರು ಡಾ| ರಾಜ್ ಅವರಂಥ ಹತ್ತಾರು ನಟರನ್ನು ಬಲ್ಲರು. ಆದರೆ ಸಿನೆಮಾದ ರುಚಿ ಜಿ.ವಿ.ಗೆ ಹತ್ತಿರಲಿಲ್ಲ. ವಿದ್ಯಾರ್ಥಿಯಾಗಿದ್ದಾಗ ಎಂದೋ ಮೈಸೂರಿನ ಒಪೇರಾ ಟಾಕೀಸಿನಲ್ಲಿ ಜರಾಸಂಧನ ಕುರಿತ ಚಿತ್ರ ನೋಡಿದ ನೆನಪು, ಅವರೊಳಗೆ ಮಸುಕು ಮಸುಕಾಗಿತ್ತು. ಸಾಕ್ಷ್ಯಚಿತ್ರ
ಜಿ.ವಿ. ಅವರ ಬದುಕು- ಸಾಧನೆ ಕುರಿತು, ಧರ್ಮಸ್ಥಳದ ಧರ್ಮಾಧಿಕಾರಿ ಡಾ| ವೀರೇಂದ್ರ ಹೆಗ್ಗಡೆ ಅವರ ಪ್ರಾಯೋಜಕತ್ವದಲ್ಲಿ ಸಾಕ್ಷ್ಯಚಿತ್ರವನ್ನೂ ನಿರ್ಮಿಸಲಾಗಿದೆ.