ಮೈಸೂರು: ಇಲ್ಲಿನ ಮೈಮುಲ್ ಆಕ್ರಮ ನೇಮಕಾತಿ ವಿಚಾರದ ಕುರಿತು ಶಾಸಕ ಜಿ ಟಿ ದೇವೇಗೌಡ ಸ್ವಪಕ್ಷದ ಸಾ ರಾ ಮಹೇಶ್ ವಿರುದ್ಧ ಹರಿಹಾಯ್ದಿದ್ದಾರೆ. ಸಾ.ರಾ.ಮಹೇಶ್ ಗೆ ಎಲ್ಲಗೊತ್ತು. ಅವನಿಗಿರುವಷ್ಟು ಬುದ್ದಿವಂತಿಕೆ ನನಗೆ ಇಲ್ಲ ಎಂದಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಅವರು, ಗ್ರಾಮ ಪಂಚಾಯತ್ ತಾಲ್ಲೂಕು ಪಂಚಾಯತ್, ಜಿಲ್ಲಾ ಪಂಚಾಯತ್ ಸದಸ್ಯರು ಅವರವರ ಕೆಲಸ ಮಾಡುವುದಕ್ಕೆ ನಾನು ಬಿಡುತ್ತೀನಿ. ಆದರೆ ನಾನೇ ಎಲ್ಲವನ್ನು ಮಾಡಬೇಕು ಎನ್ನುವುದು ಸಾರಾ ಮಹೇಶ್ ಬುದ್ಧಿ. ಅವನಿಗೆ ಗೊತ್ತು ಎಲ್ಲಿ ಎನು ಆಗಿದೆ ಅಂತ. ಸಾರಾ ಮಹೇಶ್ ಎನು ಕೆಲಸ ಮಾಡುತ್ತಾನೆ ಅಂತ ಎಲ್ಲರಿಗೂ ಗೊತ್ತು ಎಂದು ಟೀಕೆ ಮಾಡಿದ್ದಾರೆ.
ಮೈಮುಲ್, ಡಿಸಿಸಿ ಬ್ಯಾಂಕ್ ಮುಂತಾದವು ಸ್ವಯತ್ತ ಸಂಸ್ಥೆಗಳು, ಆದರ ನಿರ್ವಹಣೆ ಮಾಡುವುದು ಸರ್ಕಾರದ ಜವಬ್ದಾರಿ. ಎಲ್ಲವನ್ನೂ ನಾನು ಯಾಕೆ ಮಾಡಲಿ. ನನಗ ಮಾಡೋದಕ್ಕೆ ಬೇರೆ ಕೆಲಸ ಇಲ್ವ. ಎಲ್ಲಾ ವಿಚಾರದಲ್ಲೂ ಮೂಗು ತೂರಿಸುವುದಕ್ಕೆ ನಾನು ಸಾರಾ ಮಹೇಶ್ ಅಲ್ಲ ಎಂದರು.
ಮೈಮುಲ್ ನೇಮಕಾತಿ ವಿಚಾರವಾಗಿ ಮಾತನಾಡಿದ ಸಚಿವ ಎಸ್ ಟಿ ಸೋಮಶೇಖರ್, ಸರ್ಕಾರ ಸಾ ರಾ ಮಹೇಶ್ ರನ್ನು ಕೇಳಿಕೊಂಡು ತನಿಖೆ ಮಾಡುವುದಕ್ಕೆ ಆಗುತ್ತಾ..? ಪ್ರತಿಭಟನೆಗೆ ಬ್ಲಾಕಮೇಲ್ ಗೆ ನಾವು ಬಗ್ಗೋದಿಲ್ಲ ಎಂದರು.
ಆರು ತಿಂಗಳಿನಿಂದಲೂ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ. ಈಗ ನೇಮಕಾತಿಯಾಗುತ್ತಿರುವ ಹುದ್ದೆಗಳಿಗೆ ಅನುಮೋದನೆ ತಂದವರೇ ಸಾ ರಾ ಮಹೇಶ್. ಆಗಲ್ಲ ಮೈಮುಲ್ ಯಾರ ಕೈಲಿತ್ತು ಅಂತ ಎಲ್ಲರಿಗೂ ಗೊತ್ತು. ಸಾ ರಾ ಮಹೇಶ್ ಆರೋಪ ಮಾಡ್ತಾರೆ ಅಂತ ನೇಮಕಾತಿ ಪ್ರಕ್ರಿಯೆ ನಿಲ್ಲಿಸಲು ಸಾದ್ಯವಿಲ್ಲ. ಯಾರು ಏನಾದ್ರು ಹೇಳಿಕೊಳ್ಳಲಿ ಅದಕ್ಕೆಲ್ಲಾ ನಾನು ಉತ್ತರ ಕೊಡೋದಿಲ್ಲ. ಇಲಾಖೆ ತನಿಕೆಗೆ ಆದೇಶ ಕೊಟ್ಟಿದ್ದೇವೆ. ತನಿಖೆ ವರದಿ ಬಂದ ಮೇಲೆ ಲೋಪದೋಷಗಳಿದ್ದರೆ ಸರಿಪಡಿಸುತ್ತೇವೆ. ಯಾರೋ ಆರೋಪ ಮಾಡಿದರು ಅಂತ ಇಡೀ ನೇಮಕಾತಿ ಪ್ರಕ್ರಿಯೆ ಕೈಬಿಡಲು ಸಾದ್ಯವಿಲ್ಲ ಎಂದು ಸಚಿವರು ಹೇಳಿದರು.