Advertisement
ಎಪಿಎಂಸಿ ಆವರಣದ ಬಂಡೀಪಾಳ್ಯ ಹಣ್ಣು ಮತ್ತು ತರಕಾರಿ ಮಾರುಕಟ್ಟೆ ಆವರಣದಲ್ಲಿ ಗುರುವಾರ ಆಯೋಜಿಸಿದ್ದ ತಮ್ಮ ಪುತ್ರನ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿದ್ದ ವೇಳೆ ಕಾರ್ಯದರ್ಶಿ ವಿರುದ್ಧ ಹರಿಹಾಯ್ದರು. ಚುನಾವಣೆ ವಿಚಾರದಲ್ಲಿ ಏನೇ ಇದ್ದರೂ ಅಭಿವೃದ್ಧಿ ಕಾರ್ಯಗಳಲ್ಲಿ ಒಂದಾಗಿ ಕೆಲಸ ಮಾಡಬೇಕು. ನನ್ನ ಹೋರಾಟದ ಫಲವಾಗಿ ಎಪಿಎಂಸಿ ಇಂದು ದೊಟ್ಟ ಮಟ್ಟ ದಲ್ಲಿ ಬೆಳೆಯಲು ಕಾರಣವಾಗಿದೆ. ಎಪಿಎಂಸಿಗೆ ಏನು ಬೇಕು, ಏನು ಬೇಡ ಎಂದು ಒಂದು ದಿನ ನನ್ನೊಂದಿಗೆ ಚರ್ಚಿಸಿಲ್ಲ. ನಾನು ನಿಮ್ಮನ್ನು ತರಲು ಎಷ್ಟು ಹೋರಾಟ ಮಾಡಿದ್ದೇನೆ ಎಂದು ನನಗೆ ಗೊತ್ತು. ಆದರೆ, ಇಲ್ಲಿ ನಡೆಯುತ್ತಿರುವುದು ಬೇರೆ. ನಾನು ಮನಸ್ಸು ಮಾಡಿದರೆ ನಿಮ್ಮದು ಏನೂ ನಡೆಯಲ್ಲ. ನಾನು ಮುಕ್ತ ವಾಗಿ ಬಿಟ್ಟಿದ್ದೇನೆ ಎಂದು ನನ್ನನ್ನು ಬಿಟ್ಟು ಏನೂ ಮಾಡಲು ಸಾಧ್ಯವಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
Related Articles
Advertisement
ಉತ್ತಮ ಬೆಲೆ ನೀಡಿ: ರೈತರು ಶ್ರಮಪಟ್ಟು ಬೆಳೆದ ಫಸಲನ್ನು ಮಾರುಕಟ್ಟೆಗೆ ತಂದಾಗ ಉತ್ತಮ ಬೆಲೆ ಸಿಗಬೇಕೇ ಹೊರತು ಅನ್ಯಾಯವಾಗಬಾರದು. ರೈತರ ಬೆಳೆಗಳಿಂದ ಮಾರುಕಟ್ಟೆ ಅಭಿವೃದ್ಧಿ ಹೊಂದುವ ಜತೆಗೆ ಸಾವಿರಾರು ಕುಟುಂಬಗಳಿಗೆ ಆಧಾರವಾಗಿದೆ. ರೈತರ ಶ್ರಮದ ಫಲವಾಗಿ ಇಂದು ಸಾವಿರಾರು ಕುಟುಂಬಗಳ ಬದುಕು ಸಾಗುತ್ತಿದೆ. ಆಟೋ, ಟ್ಯಾಕ್ಸಿ, ಕೂಲಿಕಾರ್ಮಿಕರು, ವರ್ತಕರು ಸೇರಿ ಎಲ್ಲರ ಜೀವನಕ್ಕೂ ಆಧಾರವಾಗಿದೆ. ಇದು ಮುಂದಿನ ದಿನಗಳಲ್ಲಿ ಮತ್ತಷ್ಟು ಅಭಿವೃದ್ಧಿ ಹೊಂದಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಎಪಿಎಂಸಿ ಅಧ್ಯಕ್ಷ ಬಸವರಾಜು,ಮಾಜಿ ಅಧ್ಯಕ್ಷ ಎಚ್.ಎಸ್.ನಾಗರಾಜು, ಮಾಜಿ ಉಪಾಧ್ಯಕ್ಷ ಜವರಪ್ಪ, ಎಪಿಎಂಸಿ ವರ್ತಕರ ಪ್ರತಿನಿಧಿ ಎಸ್. ಆರ್.ಎಸ್.ಪ್ರಕಾಶ್, ಬಾಲಾಜಿ ವೆಜಿಟೇಬಲ್ ಮಾಲೀಕ ಬಂಡೀಪಾಳ್ಯ ವೆಂಕಟೇಶ್, ಜಿಪಂ ಸದಸ್ಯ ಎಸ್. ಮಾದೇಗೌಡ, ಮುಖಂಡರಾದ ಜಾಕೀರ್ ಹುಸೇನ್, ಸೋಮಣ್ಣ, ಕಾರ್ತಿಕ್, ಕೃಷ್ಣಮೂರ್ತಿ, ಸಂದೀಪ್ ಮಹದೇವು, ಅಮೀರ್‌ಜಾನ್ ಇತರರಿದ್ದರು.