Advertisement

ಕೊರಟಗೆರೆ: ಅಭಿಮಾನಿಯ ಅಭಿಮಾನಕ್ಕೆ ಕಣ್ಣೀರಿಟ್ಟ ಮಾಜಿ ಡಿಸಿಎಂ

08:51 PM Feb 09, 2023 | Team Udayavani |

ಕೊರಟಗೆರೆ: ಕರ್ನಾಟಕದ ಡಿಸಿಎಂ ಮತ್ತು ಕೊರಟಗೆರೆಯ ಶಾಸಕನಾಗಿ 5 ವರ್ಷವೂ ಜನರ ಒಡನಾಡಿಯಾಗಿ ಪ್ರತಿ ಹಳ್ಳಿಯಲ್ಲೂ ಅಭಿವೃದ್ದಿಯ ಕೆಲಸ ಮಾಡಿದ್ದೇನೆ.. ಆದರೇ ನಾನು ಜನರ ಕೈಗೆ ಸೀಗೋದೇ ಇಲ್ಲವೆಂದು ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ನಾಯಕರು ಆರೋಪ ಮಾಡ್ತಾರೇ ಎಂದು ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ ಆಕ್ರೋಶ ವ್ಯಕ್ತಪಡಿಸಿದರು.

Advertisement

ಕೊರಟಗೆರೆ ಪಟ್ಟಣದ ಮಾರುತಿ ಕಲ್ಯಾಣ ಮಂಟಪದಲ್ಲಿ ಗುರುವಾರ ಏರ್ಪಡಿಸಲಾಗಿದ್ದ ಯಾದವ ಸಮುದಾಯದ ಬೃಹತ್ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.

ಕೊರಟಗೆರೆ ಕ್ಷೇತ್ರದ ಜನತೆಯ ಆರ್ಶಿವಾದದಿಂದ ನನಗೇ ಕೆಪಿಸಿಸಿ ಅಧ್ಯಕ್ಷ, ಗೃಹ ಸಚಿವ, ಡಿಸಿಎಂ ಹುದ್ದೆ ದೊರೆತಿದೆ. ಭಾರತದ ಯಾವುದೇ ರಾಜ್ಯಕ್ಕೆ ಹೋದ್ರು ಅಲ್ಲಿ ಕೊರಟಗೆರೆ ಅಂದ್ರೇ ಡಾ.ಜಿ.ಪರಮೇಶ್ವರ ಅಂತಾರೇ. ಕೊರಟಗೆರೆ ಕ್ಷೇತ್ರಕ್ಕೆ ಕಳೆದ 5 ವರ್ಷದಲ್ಲಿ 2500 ಕೋಟಿ ಅನುದಾನ ತಂದು ಮತದಾರರ ಋಣ ತೀರಿಸುವ ಕೆಲಸ ಮಾಡಿದ್ದೇನೆ. ಅಂಕಿಅಂಶದ ದಾಖಲೆಯ ಪುಸ್ತಕ ನೀಡಿ 2023ರ ಚುನಾವಣೆಗೆ ಹೋಗ್ತಿದ್ದೇನೆ ಎಂದು ತಿಳಿಸಿದರು.

ತುಮಕೂರು ನೌಕರರ ಸಂಘದ ಮಾಜಿ ಜಿಲ್ಲಾಧ್ಯಕ್ಷ ಸಣ್ಣಮುದ್ದಯ್ಯ ಮಾತನಾಡಿ 2023ಕ್ಕೆ ಕೊರಟಗೆರೆ ಕ್ಷೇತ್ರದಿಂದ ಡಾ.ಜಿ.ಪರಮೇಶ್ವರ ಮತ್ತೇ ಶಾಸಕರಾದ್ರೇ ಕರ್ನಾಟಕ ರಾಜ್ಯದ ಸಿಎಂ ಆಗ್ತಾರೇ. ಗೊಲ್ಲ ನುಡಿದ ಮಾತು ಎಂದಿಗೂ ಸುಳ್ಳಾಗಲ್ಲ. ಬ್ರೋಕರ್ ಮತ್ತು ದಳ್ಳಾಳಿಗಳ ಮಾತಿಗೆ ಯಾರು ಬೆಲೆ ಕೋಡಬೇಡಿ. ತುಮಕೂರು ಜಿಲ್ಲೆಯ ಗೊಲ್ಲ ಸಮುದಾಯದ ಪ್ರತಿನಿಧಿ ಒಬ್ಬರೇ ಅವರೇ ಪರಮೇಶ್ವರ. ಪರಮೇಶ್ವರ ಸಿಎಂ ಆಗ್ಬೇಕು ಗೊಲ್ಲರು ಎಂಎಲ್‌ಸಿ ಆಗ್ಬೇಕು ಅದೇ ನಮ್ಮೇಲ್ಲರ ಪ್ರತಿಜ್ಞೆ ಎಂದು ತಿಳಿಸಿದರು.

ತುಮಕೂರು ಡಿಸಿಸಿ ಬ್ಯಾಂಕು ಉಪಾಧ್ಯಕ್ಷ ಜಿ.ಜೆ.ರಾಜಣ್ಣ ಮಾತನಾಡಿ ಡಾ.ಜಿ.ಪರಮೇಶ್ವರ ಜೊತೆ ಗೊಲ್ಲ ಸಮುದಾಯ ೩೦ವರ್ಷದಿಂದ ಇದ್ದೀವಿ. 2023ಕ್ಕೆ ಪರಮೇಶ್ವರ ಕಡೆಯ ಚುನಾವಣೆ ಆಗಲಿದೆ. ಜೇಬುಗಳ್ಳರ ಬಗ್ಗೆ ಎಚ್ಚರ ಅಗತ್ಯ. ಯಾರು ಒತ್ತಡಕ್ಕೆ ಒಳಗಾಗದೇ ಒಂದಾಗಿ. ಶ್ರೀಕೃಷ್ಣ ಪರಮಾತ್ಮನ ಹೆಸರಲ್ಲಿ ನಾವು ಘೋಷಣೆ ಮಾಡ್ತೀವಿ. ನಾವೇಲ್ಲರೂ ಮತ್ತೇ ಪರಮೇಶ್ವರ್‌ಗೆ ಆರ್ಶಿವಾದ ಮಾಡಬೇಕಿದೆ ಎಂದು ಹೇಳಿದರು.

Advertisement

ಕಾರ್ಯಕ್ರಮದಲ್ಲಿ ಕೆಪಿಸಿಸಿ ಕಾರ್ಯದರ್ಶಿ ವೇಣುಗೋಪಾಲ್, ಓಬಿಸಿ ಜಿಲ್ಲಾಧ್ಯಕ್ಷ ಪುಟ್ಟರಾಜು, ಕೊರಟಗೆರೆ ಅಧ್ಯಕ್ಷ ಆನಂದ್, ಮಾಜಿ ತಾಪಂ ಅಧ್ಯಕ್ಷ ಟಿ.ಸಿ.ರಾಮಯ್ಯ, ಸದಸ್ಯ ವೀರಣ್ಣ, ಗ್ರಾಪಂ ಅಧ್ಯಕ್ಷರಾದ ರಾಮಕೃಷ್ಣಯ್ಯ, ಪಾವರ್ತಮ್ಮ, ಶಿವರಾಮಯ್ಯ, ಯಾದವ ಮುಖಂಡರಾದ ರಂಗನಾಥ, ಪುಟ್ಟಣ್ಣ, ವೆಂಕಟೇಶ್, ಕೃಷ್ಣಯ್ಯ, ಚಂದ್ರು, ಲಕ್ಷ್ಮೀನರಸಪ್ಪ ನರೇಂದ್ರ, ಮುತ್ತುರಾಜು, ಶಿವರಾಮು, ಬಸವರಾಜು, ಕಾಂತರಾಜು, ನರಸಿಂಹರಾಜು, ನಾಗರಾಜು ಸೇರಿದಂತೆ ಇತರರು ಇದ್ದರು.

ಅಭಿಮಾನಕ್ಕೆ ಕಣ್ಣೀರಿಟ್ಟ ಮಾಜಿ ಡಿಸಿಎಂ..

ಡಾ.ಜಿ.ಪರಮೇಶ್ವರ ಸಿಎಂ ಆಗಲೆಂದು ಮಧುಗಿರಿ ತಾಲೂಕು ಹುಣಸೇಮರದಟ್ಟಿಯ ಗೌಡಮುದ್ದಯ್ಯ ಕಳೆದ ೨೫ ವರ್ಷದಿಂದ ಗಡ್ಡ ಬಿಟ್ಟಿದ್ದಾರೆ. ನಾನು ಆತನಿಗೇ ಏನು ಸಹಾಯ ಮಾಡಿಲ್ಲ. ಅವನ ಅಭಿಮಾನಕ್ಕೆ ನಾನು ಏನು ಕೋಡಲು ಸಾಧ್ಯವಿಲ್ಲ. ಯಾದವ ಸಮಾಜದ ಗೌಡಮುದ್ದಯ್ಯನ ಅಭಿಮಾನಕ್ಕೆ ನಾನೇಂದು ಚಿರಋಣಿ ಆಗಿದ್ದೇನೆ.

ನಾನು ಸಿಎಂ ಆಗೇ ಆಗ್ತೀನಿ ಅನ್ನುವ ವಿಶ್ವಾಸ ನನಗಿಂತ ಹೆಚ್ಚು ಆತನಿಗಿದೆ. ಯಾದವ ಸಮುದಾಯ ನನ್ನನ್ನು ಸಾಕಿ ಬೆಳೆಸಿದೆ ಎಂಬುದಕ್ಕೆ ಈತನೇ ಪ್ರಮುಖ ಸಾಕ್ಷಿ ಎಂದು ಯಾದವ ಸಮುದಾಯದ ವೇದಿಕೆಯಲ್ಲೇ ಕಣ್ಣೀರಿಟ್ಟ ಘಟನೆ ನಡೆದಿದೆ.

ಕೊರಟಗೆರೆ ಕ್ಷೇತ್ರ ಸೇರಿ ರಾಜ್ಯದ 160 ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಗೆಲ್ಲಲಿದೆ. ಡಾ.ಜಿ.ಪರಮೇಶ್ವರ್ ಕೆಪಿಸಿಸಿ ಅಧ್ಯಕ್ಷ, ಗೃಹ ಸಚಿವ, ಡಿಸಿಎಂ ಆಗಿದ್ದಾರೆ. ಸಿಎಂ ಸೀಟಿಗೆ ಇನ್ನೊಂದೇ ಮೆಟ್ಟಿಲು ಬಾಕಿಯಿದೆ. ಕೊರಟಗೆರೆಯಲ್ಲಿ ಮಾಜಿ ಶಾಸಕ ಮತ್ತೇ ಮಾಜಿ ನೇ ಆಗ್ತಾರೇ. ಬಿಜೆಪಿ ಪಕ್ಷದ ಅಭ್ಯರ್ಥಿ ಪರಮೇಶ್ವರಗೆ ಯಾವತ್ತು ಸಮವಿಲ್ಲ. ಪರಮೇಶ್ವರ ಅವರೇ ನಮ್ಮ ಮುಂದಿನ ಸಿಎಂ.

– ಚಂದ್ರಶೇಖರ ಗೌಡ. ಜಿಲ್ಲಾಧ್ಯಕ್ಷ. ತುಮಕೂರು

ಮಧುಗಿರಿ ನನ್ನ ತವರು ಕ್ಷೇತ್ರ. ಗೊಲ್ಲ ಸಮುದಾಯ ನನ್ನ ಕೈ ಹಿಡಿದಿದೆ. ಕೊರಟಗೆರೆ ಕ್ಷೇತ್ರವು ನನಗೇ ಕರ್ನಾಟಕದ ಎರಡನೇ ಪ್ರಮುಖ ಸ್ಥಾನ ನೀಡಿದೆ. ದೆಹಲಿಗೆ ಹೋಗಿ ಕೊರಟಗೆರೆ ಅಂದ್ರೇ ಪರಮೇಶ್ವರ ಅಂತಾರೇ. ನಾನು ನಿಮ್ಮ ಶಾಸಕ ಆಗೋದಕ್ಕೆ ನನಗೇ ಅರ್ಹತೆ ಇದೇ ಅಲ್ವಾ. ಮತದಾರರ ಆರ್ಶಿವಾದಕ್ಕೆ ಪ್ರತಿಯಾಗಿ ನಾನು ಅಭಿವೃದ್ದಿಯ ಋಣ ತೀರಿಸಿದ್ದೇನೆ.

– ಡಾ.ಜಿ.ಪರಮೇಶ್ವರ ಮಾಜಿ ಡಿಸಿಎಂ. ಕೊರಟಗೆರೆ

ಇದನ್ನೂ ಓದಿ: ದಾವಣಗೆರೆ ಬಳಿ ಭೀಕರ ರಸ್ತೆ ಅಪಘಾತ: ಇಬ್ಬರು ಸ್ಥಳದಲ್ಲೇ ಸಾವು, ಓರ್ವನ ಸ್ಥಿತಿ ಗಂಭೀರ

Advertisement

Udayavani is now on Telegram. Click here to join our channel and stay updated with the latest news.

Next