Advertisement

ಗ್ರಾಮೀಣ ಕ್ರೀಡಾ ಪ್ರತಿಭೆಗಳನ್ನು ಗುರುತಿಸುವುದೇ ಕಾರ್ಯಕ್ರಮದ ಉದ್ದೇಶ : ಜಿ.ಪರಮೇಶ್ವರ್

07:31 PM Mar 03, 2022 | Team Udayavani |

ಕೊರಟಗೆರೆ: ಗ್ರಾಮೀಣ ಪ್ರದೇಶದ ಯುವ ಕ್ರೀಡಾಪಟು ಗುರುತಿಸುವುದೇ ಕಬಡ್ಡಿ ಹಬ್ಬದ ಕಾರ್ಯಕ್ರಮದ ಉದ್ದೇಶ. ರಾಜ್ಯ, ರಾಷ್ಟ್ರ ಮತ್ತು ಅಂತರ ರಾಷ್ಟ್ರೀಯ ಮಟ್ಟಕ್ಕೆ ಕೊರಟಗೆರೆ ಕ್ಷೇತ್ರದ ಯುವ ಪ್ರತಿಭೆಗಳ ಅನಾವರಣಕ್ಕೆ ಪ್ರತಿವರ್ಷವು ವಿಶೇಷ ರೀತಿಯ ಕಾರ್ಯಕ್ರಮ ರೂಪಿಸುತ್ತೇನೆ ಎಂದು ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ತಿಳಿಸಿದರು.

Advertisement

ಕೊರಟಗೆರೆ ಪಟ್ಟಣದ ಪದವಿಪೂರ್ವ ಕಾಲೇಜು ಮೈದಾನದಲ್ಲಿ ಡಾ.ಜಿ.ಪರಮೇಶ್ವರ್ ಯುವಪಡೆ ಮತ್ತು ಯುವ ಕಾಂಗ್ರೇಸ್ ಘಟಕದ ವತಿಯಿಂದ ಮಹಾ ಶಿವರಾತ್ರಿ ಹಬ್ಬದ ಪ್ರಯುಕ್ತ ಮಂಗಳವಾರ ಏರ್ಪಡಿಸಲಾಗಿದ್ದ ಡಾ.ಜಿ.ಪರಮೇಶ್ವರ್ ಕಪ್ ಕಬಡ್ಡಿ ಹಬ್ಬ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಕೊರಟಗೆರೆ ಕ್ಷೇತ್ರದಲ್ಲಿ ನುಡಿಸಿರಿ ಕಾರ್ಯಕ್ರಮ, ಕಳೆದ ವರ್ಷ ಕ್ರಿಕೇಟ್ ಪಂದ್ಯಾವಳಿ, ಪ್ರಸ್ತುತ ವರ್ಷ ಕಬಡ್ಡಿ ಹಬ್ಬ ಮತ್ತು ಮುಂದಿನ ದಿನಗಳಲ್ಲಿ ಸಂಗೀತಾ ಸ್ಪರ್ದೆ ಕಾರ್ಯಕ್ರಮವು ನಡೆಯಲಿದೆ. ಗ್ರಾಮೀಣ ಪ್ರದೇಶದ ಯುವ ಪ್ರತಿಭೆಗಳನ್ನು ರಾಷ್ಟç ಮತ್ತು ಅಂತರ ರಾಷ್ಟ್ರೀಯ ಮಟ್ಟಕ್ಕೆ ಗುರುತಿಸುವುದೇ ನಮ್ಮ ಮುಖ್ಯ ಉದ್ದೇಶವಾಗಿದೆ ಎಂದು ಹೇಳಿದರು.

ಚಲನಚಿತ್ರ ನಟ ವಿನೋದ್ ಪ್ರಭಾಕರ್ ಮಾತನಾಡಿ ಕೊರಟಗೆರೆ ಕ್ಷೇತ್ರಕ್ಕೆ ನನ್ನನ್ನು ಕರೆಯಿಸಿದ ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್‌ಗೆ ತುಂಬು ಹೃದಯದ ಧನ್ಯವಾದ. ಟೈಗರ್ ಪ್ರಭಾಕರ್ ಅಭಿಮಾನಿ ದೇವರುಗಳೇ ನಿಮ್ಮ ಪಾದಗಳಿಗೆ ಮೊದಲು ನಮಿಸುತ್ತೇನೆ. ಕಬಡ್ಡಿ ಆಟವನ್ನು ಹಬ್ಬದ ರೀತಿಯಲ್ಲಿ ಆಚರಣೆ ಮಾಡುತ್ತೀರುವ ಮಾನ್ಯ ಡಿಸಿಎಂ ಸಾಹೇಬರ ಮೇಲೆ ಯುವ ಕ್ರೀಡಾಪಟುಗಳ ಸಹಕಾರ ಇರಲಿ ಎಂದು ಮನವಿ ಮಾಡಿದರು.

ಇದನ್ನೂ ಓದಿ : ಕೋವಿಡ್ ಹರಡಿದ್ದು, ಟ್ರಾಫಿಕ್ ಜಾಮ್ ಮಾಡಿದ್ದು ಪಾದಯಾತ್ರೆ ಸಾಧನೆ: ಕಾರಜೋಳ ವ್ಯಂಗ್ಯ

Advertisement

ಕೊರಟಗೆರೆ ವಿಧಾನಸಭಾ ಕ್ಷೇತ್ರದ ಪುರವಾರ-2, ಹೊಳವನಹಳ್ಳಿ-2, ಕೋಳಾಲ-2, ಚನ್ನರಾಯನದುರ್ಗ-2, ಕೋರಾ-2, ಕಸಬಾ-2 ಮತ್ತು ಪಟ್ಟಣ-3, ವೈಟ್‌ಕಾರ್ಡ್-2 ಸೇರಿದಂತೆ 17 ತಂಡಗಳು ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಮಾ.1, 2 ಮತ್ತು 3ರಂದು 3 ದಿನಗಳ ಕಾಲ ಪಟ್ಟಣದ ಪದವಿಪೂರ್ವ ಕಾಲೇಜು ಮೈದಾನದಲ್ಲಿ ಹೊನಳು ಬೆಳಕಿನ ಕಬಡ್ಡಿ ಪಂದ್ಯಾವಳಿ ನಡೆಯಲಿದೆ.

ಕಾರ್ಯಕ್ರಮದಲ್ಲಿ ಹಬ್ಬಳ್ಳಿ ಕಾಂಗ್ರೇಸ್ ಜಿಲ್ಲಾಧ್ಯಕ್ಷ ಅನಿಲ್‌ಪಾಟೀಲ್, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಅರಕೆರೆಶಂಕರ್, ಅಶ್ವತ್ಥನಾರಾಯಣ್, ಯುವಧ್ಯಕ್ಷ ವಿನಯ್, ಡಿವೈಎಸ್ಪಿ ಚಂದ್ರಶೇಖರ್, ತಾಪಂ ಮಾಜಿ ಉಪಾಧ್ಯಕ್ಷ ವೆಂಕಟಪ್ಪ, ಪಪಂ ಸದಸ್ಯ ಓಬಳರಾಜು, ನಾಗರಾಜು, ಮಂಜುನಾಥ, ನಂದೀಶ್, ಮುಖಂಡರಾದ ಮೀನುಮಂಜಣ್ಣ, ರವಿಕುಮಾರ್, ಅರವಿಂದ್, ಮಕ್ತಿಯಾರ್, ಜಯರಾಮ್ ಸೇರಿದಂತೆ ಇತರರು ಇದ್ದರು.

ಪ್ರಭಾಕರ್ ಡೈಲಾಗ್ ಹೊಡೆದ ವಿನೋದ್..
ಕಬಡ್ಡಿ ಹಬ್ಬ ಕಾರ್ಯಕ್ರಮಕ್ಕೆ ಆಗಮಿಸಿದ ತಮ್ಮ ಅಭಿಮಾನಿಗಳ ಒತ್ತಾಯ ಮೇರೆಗೆ ರಾಬರ್ಟ್, ನವಗ್ರಹ ಮತ್ತು ಟೈಗರ್ ಪ್ರಭಾಕರ್ ನಟನೆಯ ಹಲವು ಡೈಲಾಗ್ ಹೇಳುವ ಮೂಲಕ ವಿನೋದ್ ಪ್ರಭಾಕರ್ ಅಭಿಮಾನಿಗಳ ಜೊತೆ ಬೆರೆತು ಸಂತಷಪಟ್ಟರು. ಉದ್ಘಾಟನಾ ವೇಳೆ ಮಾತನಾಡಿದ ಅವರು ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ ಅಣ್ಣನ ಸಮಾನರು ಅವರ ಮೇಲೆ ನಿಮ್ಮೇಲ್ಲರ ಆರ್ಶಿವಾದ ಇರಲಿ ಎಂದು ಯುವ ಕ್ರೀಡಾಪಟುಗಳಿಗೆ ಮನವಿ ಮಾಡಿದರು.

ಭಾರತೀಯರ ರಕ್ಷಣೆ ಕೇಂದ್ರದ ಹೊಣೆ..
ಉಕ್ರೇನ್ ದೇಶದಲ್ಲಿ ಕರ್ನಾಟಕದ ಹಾವೇರಿ ಜಿಲ್ಲೆಯ ಮೂಲದ ವಿದ್ಯಾರ್ಥಿಯ ಸಾವು ದುರ್ದೈವ. ಉಕ್ರೇನ್ ದೇಶದಲ್ಲಿ ಯುದ್ದದ ಕಾರ್ಮೋಡದಿಂದ ಕಳೆದ ೧೫ದಿನಗಳಿಂದ ಭಾರತೀಯರು ಬಹಳ ಕಷ್ಟದ ಜೀವನ ನಡೆಸುತ್ತೀದ್ದಾರೆ. ಏರ್‌ಪೋರ್ಟ್ ಶೆಲ್ಲಿಂಗ್ ಸೇರಿದಂತೆ ಸಾಕಷ್ಟು ಸಮಸ್ಯೆ ಕಾಡುತ್ತೀದೆ. ಭಾರತೀಯ ಪ್ರಜೆಗಳನ್ನು ಆದಷ್ಟು ಬೇಗಾ ಕೇಂದ್ರ ಸರಕಾರ ಬಹಳ ಎಚ್ಚರಿಕೆಯಿಂದ ಕರೆತರುವ ಪ್ರಯತ್ನ ಮಾಡಬೇಕಿದೆ ಎಂದು ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ಆಗ್ರಹ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next