Advertisement

ಗ್ರಾ.ಪಂ. ಚುನಾವಣೆ ಸ್ಥಾನ ಹರಾಜು: ಕಂದಾಯ, ಪೊಲೀಸ್ ತನಿಖೆ ಆರಂಭ

02:27 PM Dec 13, 2020 | Mithun PG |

ವಿಜಯಪುರ: ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಅವಿರೋಧ ಆಯ್ಕೆಗಾಗಿ ಗ್ರಾಮಸ್ಥರು ದೇವಸ್ಥಾನ ಅಭಿವೃದ್ಧಿ ಹೆಸರಿನಲ್ಲಿ ಹಣದ ಮೂಲಕ ಸದಸ್ಯ ಸ್ಥಾನವನ್ನು ಹರಾಜು ಹಾಕಿದ ಪ್ರಕರಣ ಕುರಿತು ಜಿಲ್ಲೆಯಲ್ಲಿ ಕಂದಾಯ, ಪೊಲೀಸ್ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ.

Advertisement

ಮುದ್ದೇಬಿಹಾಳ ತಾಲೂಕಿನ ನಾಗಬೇನಾಳ ಗ್ರಾ.ಪಂ. ಚುನಾವಣೆಯಲ್ಲಿ ಸಿದ್ದಾಪುರದ 3 ವಾರ್ಡ್ ಗಳ ಸದಸ್ಯ ಸ್ಥಾನ ಅವಿರೋಧ ಆಯ್ಕೆಗೆ ಹಣದ‌ ಮೂಲಕ ಹರಾಜು ಆರೋಪ ಕೇಳ ಬಂದಿತ್ತು.

ಈ ಹಿನ್ನೆಲೆಯಲ್ಲಿ ವಿಜಯಪುರ ಕಂದಾಯ ಉಪ ವಿಭಾಗಾಧಿಕಾರಿ ರಾಮಚಂದ್ರ ಗಡಾದೆ ಇವರ ನೇತೃತ್ವದ ಅಧಿಕಾರಿಗಳ ತಂಡ ನಾಗಬೇನಾಳ ಗ್ರಾಮಕ್ಕೆ ತೆರಳು ತನಿಖೆ ಆರಂಭಿಸಿದ್ದಾರೆ.

ನಾಗಬೇನಾಳ ಗ್ರಾ.ಪಂ. ವ್ಯಾಪ್ತಿಯ ಸಿದ್ದಾಪುರ ವಾರ್ಡ್ ನ 3 ಸದಸ್ಯ ಸ್ಥಾನಗಳ ಹರಾಜು ಆರೋಪ ಹಿನ್ನಲೆ ಈ ಭೇಟಿ ನೀಡಿ ವಿಚಾರಣೆ ಆರಂಭಿಸಿದ್ದಾರೆ.

ಇದನ್ನೂ ಓದಿ: ಬಂಟ್ವಾಳ: ಗ್ರಾ.ಪಂ. ಚುನಾವಣೆಯನ್ನು ಬಹಿಷ್ಕರಿಸಿ, ರಸ್ತೆಯಲ್ಲಿ ಬ್ಯಾನರ್ ಹಾಕಿದ ಗ್ರಾಮಸ್ಥರು

Advertisement

ಚುನಾವಣೆ ಹಿನ್ನೆಲೆಯಲ್ಲಿ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದೆ. ಹೀಗಾಗಿ ಚುನಾವಣೆಯಲ್ಲಿ ನೀತಿ ಸಂಹಿತೆ ಪಾಲನೆ ನೋಡಲ್ ಅಧಿಕಾರಿ ಡಾ. ಎನ್.ಬಿ. ಹೊಸಮನಿ, ಚುನಾವಣಾಧಿಕಾರಿ ಐ.ಬಿ.ಹಿರೇಮಠ, ಸಿಪಿಐ ಆನಂದ ವಾಘ್ಮೋಡೆ, ಪಿಎಸ್ ಐ ಮಲ್ಲಪ್ಪ ಮಡ್ಡಿ ಇವರು ಗ್ರಾಮಸ್ಥರು ಮತ್ತು ಅಭ್ಯರ್ಥಿಗಳ ವಿಚಾರಣೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ದೇಶ-ವಿದೇಶಗಳಲ್ಲಿ 30,000 ಗಂಟೆ ಉಪನ್ಯಾಸ ಪ್ರವಚನಗೈದ ದಾಖಲೆ: ಬನ್ನಂಜೆ ಸಾಧನೆಯ ಹಾದಿ !

Advertisement

Udayavani is now on Telegram. Click here to join our channel and stay updated with the latest news.

Next