Advertisement

ಗ್ರಾ.ಪಂ. ಭವಿಷ್ಯದ ಆವಶ್ಯಕತೆಗಳಿಗೆ ಪೂರಕವಾಗಿ ಯೋಜನೆ: ಕೆ.ಎಸ್‌.ಈಶ್ವರಪ್ಪ

11:13 PM Nov 11, 2021 | Team Udayavani |

ಮಂಗಳೂರು: ಕರಾವಳಿ ಭಾಗದ ಗ್ರಾಮ ಪಂಚಾಯತ್‌ಗಳು ಭವಿಷ್ಯದ ಆವಶ್ಯಕತೆಗಳನ್ನು ಗಮನದಲ್ಲಿಟ್ಟುಕೊಂಡು ಅವುಗಳಿಗೆ ಪೂರಕವಾಗಿ ಪರಿಣಾಮಕಾರಿಯಾದ ಯೋಜನೆಗಳನ್ನು ರೂಪಿಸುವುದು ಅಗತ್ಯ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ‌ ಕೆ.ಎಸ್‌. ಈಶ್ವರಪ್ಪ ಕರೆ ನೀಡಿದರು.

Advertisement

ಕರಾವಳಿ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಸಬ್‌ ಕೀ ಯೋಜನಾ ಸಬ್‌ ಕಾ ವಿಕಾಸ್‌ ಮೂಲಕ ಆರ್ಥಿಕ ಮತ್ತು ಸಾಮಾಜಿಕ ಬದಲಾವಣೆ ಕುರಿತು ಕೇಂದ್ರ ಸರಕಾರದ ಪಂಚಾಯತ್‌ ರಾಜ್‌ ಸಚಿವಾಲಯ, ಹೈದರಾಬಾದ್‌ನ ರಾಷ್ಟ್ರೀಯ ಗ್ರಾಮೀ ಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಂಸ್ಥೆ (ಎನ್‌ಐಆರಿxಪಿಆರ್‌) ಹಾಗೂ ಮೈಸೂರಿನ ಅಬ್ದುಲ್‌ ನಜೀರ್‌ ಸಾಬ್‌ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಂಸ್ಥೆಯ ಸಹಯೋಗದಲ್ಲಿ ನಗರದಲ್ಲಿ ಹಮ್ಮಿಕೊಂಡಿರುವ 2 ದಿನಗಳ ಪ್ರಾದೇಶಿಕ ಕಾರ್ಯಾಗಾರವನ್ನು ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಸಂದೇಶ ನೀಡಿದರು.

ಮಳೆಗಾಲದ ಸಮಸ್ಯೆಗಳ
ನಿವಾರಣೆಗೆ ವಿಶೇಷ ಒತ್ತು
ಕೇಂದ್ರ ಸರಕಾರದ ಪಂಚಾಯತ್‌ ರಾಜ್‌ ಕಾರ್ಯದರ್ಶಿ ಸುನಿಲ್‌ ಕುಮಾರ್‌ಮಾತನಾಡಿ, ಕರಾವಳಿ ರಾಜ್ಯಗಳ ಗ್ರಾ.ಪಂ.ಗಳು ಪ್ರತೀ ವರ್ಷವು ಹಲವು ಸಮಸ್ಯೆಗಳನ್ನು ವಿಶೇಷವಾಗಿ ಪ್ರಾಕೃತಿಕ ವಿಕೋಪಗಳನ್ನು ಎದುರಿಸುತ್ತಿವೆ. ಮುಖ್ಯವಾಗಿ ಮಾನ್ಸೂನ್‌ ಕಾಲದಲ್ಲಿನ ಸಮಸ್ಯೆಗಳು, ರೋಗ-ರುಜಿನಗಳು ನಿಯಂತ್ರಿಸುವ ನಿಟ್ಟಿನಲ್ಲಿ ಒತ್ತನ್ನು ನೀಡಬೇಕೆಂದು ತಿಳಿಸಿದರು.

ಇದನ್ನೂ ಓದಿ:ನಕಲಿ ಫೇಸ್‌ಬುಕ್‌ ಜಾಲ: ಮಂಗಳೂರಿನ ವ್ಯಕ್ತಿ ಸೌದಿಯಲ್ಲಿ ಬಂದಿ

ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್‌ ಇಲಾಖೆಯ ಪ್ರಧಾನ ಕಾರ್ಯದರ್ಶಿ ಉಮಾ ಮಹಾದೇವನ್‌, ಕೇಂದ್ರ ಸರಕಾರದ ಪಂಚಾಯತ್‌ ರಾಜ್‌ ಸಚಿವಾಲಯದ ಜಂಟಿ ಕಾರ್ಯದರ್ಶಿ ರೇಖಾ ಯಾದವ್‌, ಗ್ರಾಮೀಣಾಭಿವೃದ್ದಿ ಮತ್ತು ಪಂ. ರಾಜ್‌ಇಲಾಖೆ ಆಯುಕ್ತೆ ಶಿಲ್ಪಾನಾಗ್‌ ಮಾತನಾಡಿದ‌ರು.ಜಿ.ಪಂ. ಸಿಇಒ ಡಾ| ಕುಮಾರ್‌ ಮೊದಲಾದವರು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next