Advertisement
ಅವಧಿ ಮುಗಿದ ಗ್ರಾಮ ಪಂಚಾಯತ್‌ಗಳಿಗೆ ಚುನಾವಣೆ ನಡೆಸುವಂತೆ ಸರಕಾರ ಹಾಗೂ ಚುನಾವಣ ಅಯೋಗಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿ ವಿಧಾನಪರಿಷತ್ ಕಾಂಗ್ರೆಸ್ ಸದಸ್ಯ ಕೆ.ಸಿ. ಕೊಂಡಯ್ಯ ಮತ್ತಿತರರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸಂಬಂಧಿಸಿದ ಸರಕಾರವು ಚುನಾವಣ ಆಯೋಗದ ಪರ ವಾದ-ಪ್ರತಿವಾದ ಆಲಿಸಿದ ಬಳಿಕ ಮುಖ್ಯ ನ್ಯಾ| ಎ.ಎಸ್. ಓಕ್ ಹಾಗೂ ನ್ಯಾ. ಅಶೋಕ್ ಎಸ್. ಕಿಣಗಿ ಅವರಿದ್ದ ವಿಭಾಗೀಯ ನ್ಯಾಯಪೀಠ ತೀರ್ಪು ಕಾಯ್ದಿರಿಸಿತು. ಅರ್ಜಿ ಬಗ್ಗೆ ಆಕ್ಷೇಪಣೆಗಳಿದ್ದ ಅದನ್ನು ಅ.29ರೊಳಗೆ ಲಿಖೀತ ರೂಪದಲ್ಲಿ ಸಲ್ಲಿಸಬೇಕು ಎಂದು ಸರಕಾರ, ಆಯೋಗ ಹಾಗೂ ಅರ್ಜಿದಾರರಿಗೆ ಸೂಚನೆ ನೀಡಿತು.
ಗ್ರಾ.ಪಂ. ಚುನಾವಣೆ ಮುಂದೂಡ ಬೇಕು ಎಂಬ ಸರಕಾರದ ನಿಲುವು ಒಪ್ಪುವಂಥದ್ದಲ್ಲ. ಬಿಹಾರದಲ್ಲಿ ವಿಧಾನ ಸಭೆ ಚುನಾವಣೆ ನಡೆಯು ತ್ತಿದೆ. ಕರ್ನಾಟಕದಲ್ಲಿ ಎರಡು ಕ್ಷೇತ್ರಗಳ ಚುನಾವಣೆ ನಡೆಯುತ್ತಿದೆ. ಎಸೆಸೆಲ್ಸಿ, ಸಿಇಟಿ ಪರೀಕ್ಷೆಗಳನ್ನು ನಡೆಸಲಾಗಿದೆ. ಹೀಗಿರುವಾಗ ಹಂತ-ಹಂತವಾಗಿ ಚುನಾವಣೆ ನಡೆಸಲು ಸರಕಾರ ಮುಂದೆ ಬರಬೇಕಿತ್ತು. ಆದರೆ, ಅನಿರ್ದಿ ಷ್ಟಾವಧಿಗೆ ಚುನಾವಣೆ ಮುಂದೂ ಡಬೇಕು ಎಂದು ಸರಕಾರ ಕೇಳುತ್ತಿರುವುದು ಸರಿಯಲ್ಲ. ಸರಕಾರದ ವಾದ
ಸರಕಾರದ ಪರ ವಾದ ಮಂಡಿಸಿದ ಅಡ್ವೊಕೇಟ್ ಜನರಲ್ ಪ್ರಭುಲಿಂಗ ಕೆ. ನಾವದಗಿ ಅವರು, ಚುನಾವಣೆ ಬೇಡ ಎಂದು ಸರಕಾರ ಹೇಳುತ್ತಿಲ್ಲ. ಚುನಾವಣ ಆಯೋಗದ ಸ್ವಾಯತ್ತತೆ ಪ್ರಶ್ನೆ ಮಾಡಬಾರದು, ಸರಕಾರದ ಹಸ್ತಕ್ಷೇಪ ಇರಬಾರದು ಎಂಬುದು ಸರಿ. ಆದರೆ, ಈಗ ಕೊರೊನಾ ಸಾಂಕ್ರಾಮಿಕ ರಾಷ್ಟ್ರೀಯ ವಿಪತ್ತು ಎಂದು ಆರೋಗ್ಯ ತುರ್ತು ಪರಿಸ್ಥಿತಿ ಎಂದು ಘೋಷಿಸಲಾಗಿದೆ. ಸಾರ್ವ ಜನಿಕರ ಆರೋಗ್ಯದ ದೃಷ್ಟಿಯಿಂದ ಸ್ವಲ್ಪ ಕಾಲಾವಕಾಶ ಕೇಳುತ್ತಿದ್ದೇವೆ.
Related Articles
ಚು. ಆಯೋಗದ ಪರ ಕೆ.ಎನ್.ಫಣೀಂದ್ರ ಅವರು ವಾದ ಮಂಡಿಸಿ, ಸರಕಾರವನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಎಂಬುದು ಸರಿ ಯಲ್ಲ. ಸರಕಾರದ ಜತೆ ಹಲವು ಸುತ್ತಿನ ಮಾತುಕತೆ ನಡೆಸಲಾಗಿದೆ. ಜೂನ್ ತಿಂಗಳಲ್ಲೇ ಜಿಲ್ಲಾಧಿಕಾರಿಗಳು, ಇನ್ನುಳಿದ ಅಧಿಕಾರಿಗಳ ಜತೆ ಸಮಾಲೋಚಿಸಲಾಗಿದೆ. ನವೆಂಬರ್, ಡಿಸೆಂಬರ್‌ನಲ್ಲಿ ಚುನಾವಣೆ ನಡೆಸಲು ಸಿದ್ಧ ಎಂದು ಎಲ್ಲ 30 ಜಿಲ್ಲಾಧಿಕಾರಿಗಳು ಹೇಳಿದ್ದಾರೆ. ಪೊಲೀಸ್ ಇಲಾಖೆ ಕೂಡ ಚುನಾವಣೆ ನಡೆಸಲು ಹಸಿರು ನಿಶಾನೆ ತೋರಿಸಿತ್ತು.
Advertisement
ಅರ್ಜಿದಾರರ ವಾದಅರ್ಜಿದಾರರ ಪರ ಪ್ರೊ| ರವಿವರ್ಮ ಕುಮಾರ್ ವಾದ ಮಂಡಿಸಿ, ರಾಜಕೀಯ ಹಸ್ತಕ್ಷೇಪ ಆಗುತ್ತದೆ ಎಂಬ ಕಾರಣಕ್ಕಾಗಿಯೇ ಮುಕ್ತವಾಗಿ ಮತ್ತು ನಿಗದಿತ ಅವಧಿಯಲ್ಲಿ ಚುನಾವಣೆ ನಡೆಯಬೇಕು ಎಂಬ ಉದ್ದೇಶದಿಂದಲೇ ಸಂವಿಧಾನದ 73ನೇ ತಿದ್ದುಪಡಿ ತರಲಾಯಿತು. ಈಗ ಬಹುತೇಕ ಎಲ್ಲ ಚಟುವಟಿಕೆಗಳಿಗೂ ಅವಕಾಶ ನೀಡಲಾಗಿದೆ. ಅಷ್ಟಕ್ಕೂ, ಈ ವಿಚಾರದಲ್ಲಿ ಹಸ್ತಕ್ಷೇಪ ಮಾಡುವ ಅಥವಾ ಮಧ್ಯಪ್ರವೇಶಿಸಲು ಸರಕಾರಕ್ಕೆ ಯಾವುದೇ ಹಕ್ಕು ಇಲ್ಲ.