Advertisement

ಗ್ರಾ.ಪಂ. ಚುನಾವಣೆ : ಯುವ ಶಕ್ತಿಯಿಂದ ಗ್ರಾಮ ಸ್ವರಾಜ್ಯ

11:24 PM Dec 09, 2020 | mahesh |

ನಮ್ಮದೀಗ ಯುವ ಭಾರತ. ಯುವಜನರೇ ದೇಶವನ್ನು ಮುನ್ನಡೆಸುವ ಹೊತ್ತೂ ಸಹ. ಈ ಹಿನ್ನೆಲೆಯಲ್ಲೇ ಉದಯವಾಣಿಯು ಗ್ರಾಮ ಪಂಚಾಯತ್‌ ಚುನಾವಣೆಯಲ್ಲಿ ಯುವ ಜನರ ಪಾಲ್ಗೊಳ್ಳುವಿಕೆಗೆ ಕರೆ ನೀಡಿದೆ. ಪತ್ರಿಕೆಯು ಈ ಆಶಯಕ್ಕೆ ಪೂರಕವಾಗಿ “ಯುವ ಗ್ರಾಮ ಸುರಾಜ್ಯ’ ಅಂಕಣ ಆರಂಭಿಸಿದೆ. ಇದರಲ್ಲಿ ಸಮಾಜದ ವಿವಿಧ ಕ್ಷೇತ್ರಗಳ ಸಾಧಕರು, ಅಭಿಪ್ರಾಯ ರೂಢಕರು ಗ್ರಾಮೀಣ ಅಭಿವೃದ್ಧಿಗೆ “ಯುವ ಜನರ ಅಗತ್ಯ’ ಕುರಿತು ಪ್ರತಿಪಾದಿಸಲಿದ್ದಾರೆ. ಇಂದಿನಿಂದ ಈ ಅಂಕಣ ಪ್ರಾರಂಭ.

Advertisement

ಗ್ರಾಮದ ಕಲ್ಪನೆ ಪ್ರತಿಯೊಬ್ಬ ಗ್ರಾಮಸ್ಥ ನಿಂದ ಹುಟ್ಟುವಂಥದ್ದಾಗಿದೆ. ತಮ್ಮ ಬೇಡಿಕೆಗಳ ಈಡೇರಿಕೆ ಹಾಗೂ ಕೊರತೆಗಳನ್ನು ನೀಗಿಸಿ ಕೊಳ್ಳುವ ಮೂಲಕ ಅಭಿವೃದ್ಧಿ. ಇವು ಗ್ರಾಮ ಸ್ಥನಾದವನಲ್ಲಿ ಹುಟ್ಟುವುದು ಸಹಜ. ಇವೆಲ್ಲ ಸಾಕಾರಗೊಳ್ಳಬೇಕಾದರೆ ವಿದ್ಯಾವಂತ, ಪ್ರಜ್ಞಾವಂತ ಹಾಗೂ ಬುದ್ಧಿವಂತ ರಾದ ಯುವಜನತೆ ಗ್ರಾಮ ಪಂಚಾಯತ್‌ ಚುನಾವಣೆ ಯಲ್ಲಿ ಸಕ್ರಿಯವಾಗಿ ಭಾಗ ವಹಿಸಬೇಕು.

ಕೃಷಿ ಪ್ರಧಾನ ದೇಶವಾದ ಭಾರತದಲ್ಲಿ ನಮ್ಮ ಸುತ್ತಮು ತ್ತಲಿರುವ ನೆಲ-ಜಲ ಹಾಗೂ ಪ್ರಾಕೃತಿಕ ಸಂಪನ್ಮೂಲಗಳು ಸದ್ಬಳಕೆ ಯಾದಾಗಲೇ ದೇಶದ ಪ್ರಗತಿ ಸಾಧ್ಯವಾಗಲಿದೆ. ಆದರೆ ಅದರೆಡೆಗೆ ಚಿಂತಿಸುವ ಯುವಶಕ್ತಿ ಜಾಗೃತ ವಾಗಬೇಕಿದೆ. ಪ್ರಕೃತಿ ಮನುಷ್ಯನ ಆಸೆಗಳನ್ನೆಲ್ಲ ಈಡೇರಿಸಬಲ್ಲದು, ಆದರೆ ದುರಾಸೆಗಳನ್ನಲ್ಲ ಎಂದು ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಅಂದೇ ಎಚ್ಚರಿಕೆ ನೀಡಿದ್ದರು. ಹಾಗಾಗಿ ಹಳ್ಳಿಗಳು ಹೊಸ ರೂಪ ತಾಳುವಲ್ಲಿ ಇಂದು ಯುವ ಸಮುದಾಯಕ್ಕೆ ಎಲ್ಲ ಕ್ಷೇತ್ರಗಳಲ್ಲೂ ಅವಕಾಶ ಸಿಗಬೇಕಿದೆ. ಈ ಮೂಲಕ ಗ್ರಾಮ ಸ್ವರಾಜ್ಯದ ಚಿಂತನೆ ಸಾಕಾರಗೊಳ್ಳಬೇಕಿದೆ.

ನಮಗೆ ಈ ವಿಚಾರ ಯಾಕೆ ಬಹಳ ಇಷ್ಟ ವಾಗಿರುವುದೆಂದರೆ ಕಳೆದ 30 ವರ್ಷಗಳಲ್ಲಿ ಸಮಾಜದಲ್ಲಿ ಧ್ವನಿ ಇಲ್ಲದೆ ಇದ್ದವರು, ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ, ವರ್ಗಕ್ಕೆ ಸೇರಿದವರು ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದು ಬಿಡಿ, ಮತದಾನ ಮಾಡಲೂ ಹಿಂಜರಿಯುತ್ತಿದ್ದರು. ಆದರೆ ಪ್ರಜಾಪ್ರಭುತ್ವ ಇವರೆಲ್ಲರನ್ನೂ ಮುಖ್ಯ ವಾಹಿನಿಗೆ ತರುವಲ್ಲಿ ಸಫ‌ಲವಾಗಿದ್ದು ಹಲವಾರು ಮಹತ್ತರ ಬದಲಾವಣೆಗಳನ್ನು ತಂದಿದೆ.

ಗ್ರಾಮಗಳ ಅಭಿವೃದ್ಧಿಯ ಉದ್ದೇಶದಿಂದಲೇ ಶ್ರೀ ಕ್ಷೇತ್ರ ಧರ್ಮಸ್ಥಳದ ವತಿಯಿಂದ 1982ರಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಯನ್ನು ಪ್ರಾರಂಭಿಸಿದೆವು. ಪ್ರಾಯೋಗಿಕವಾಗಿ ನಾವು ಬೆಳ್ತಂಗಡಿ ತಾಲೂಕಿನಲ್ಲಿ ಪ್ರಾರಂಭಿಸಿದ ಗ್ರಾಮಾಭಿವೃದ್ಧಿ ಯೋಜನೆ ಇಂದು ರಾಜ್ಯದೆಲ್ಲೆಡೆ ವ್ಯಾಪಿಸಿದ್ದು, ಅಭಿವೃದ್ಧಿಯ ನೆಪದಲ್ಲಿ ಆಧುನಿಕ ವಿಜ್ಞಾನ ಮತ್ತು ತಂತ್ರಜ್ಞಾನದ ಹೆಸರಿನಲ್ಲಿ ಕೃಷಿ ಸಂಸ್ಕೃತಿ ಮತ್ತು ಋಷಿ ಸಂಸ್ಕೃತಿಯನ್ನು ಅವಗ ಣಿಸಬಾರದು ಎಂಬ ಚಿಂತನೆ ಗಾಢವಾಗಿಸಿದ ಪರಿಣಾಮ ಇಂದು ಆ ಸಮುದಾಯಗಳ ಮಂದಿ ಖುಷಿಯಿಂದ ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ.

Advertisement

ನಮ್ಮ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ದೊಡ್ಡ ಕೊಡುಗೆ ಏನೆಂದರೆ ಬುದ್ಧಿವಂತ, ಕಳಕಳಿ ಇರುವ ಶ್ರದ್ಧಾವಂತ ಸಮೂ ಹವನ್ನು ತಯಾರಿಸಿದ್ದೇವೆ. ನಮ್ಮ ಯೋಜನೆಯ ಫಲಾನು ಭವಿಗಳೇ ಹೆಚ್ಚಿನ ಕಡೆಗಳಲ್ಲಿ ಸ್ಥಳೀಯಾ ಡಳಿತ ಸಂಸ್ಥೆಗಳಲ್ಲಿ ಜನಪ್ರತಿನಿಧಿಗಳಾಗಿ ನಾಯ ಕತ್ವ ವಹಿಸಿಕೊಂಡು ಪ್ರಗತಿಯ ಪಾಲುದಾರ ರಾಗಿದ್ದಾರೆ. ಮಹಿ ಳೆಯರು ಸಾಕ್ಷರರಾಗಿ, ಜನಪ್ರತಿ ನಿಧಿಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ ಎಂಬುದು ನಮಗೆ ಸಂತೋಷ ಮತ್ತು ತೃಪ್ತಿಯನ್ನು ನೀಡಿದೆ.

ಇಂದು ಪ್ರಬುದ್ಧವಾಗಿರುವ ಯುವ ಸಮೂಹ ಚುನಾವಣ ಸ್ಪರ್ಧೆಗೆ ಧುಮುಕುತ್ತಿದೆ. ಇದು ಒಂದು ರೀತಿ ಪರಿವರ್ತನೆಯ ಸೃಷ್ಟಿಯಾಗಿದೆ. ಏಕೆಂದರೆ 50 ವರ್ಷ ಮೇಲ್ಪಟ್ಟವರು ಇಂದು ಆಧುನಿಕ ಯಂತ್ರೋಪಕರಣಗಳಾದ ಮೊಬೈಲ್‌, ಟ್ಯಾಬ್‌, ಲ್ಯಾಪ್‌ಟಾಪ್‌ ಬಳಕೆಗೆ ಒಗ್ಗಿಕೊಳ್ಳುವುದು ಕಷ್ಟಸಾಧ್ಯ. ಇದು ವಯಸ್ಸಿನ ಧರ್ಮಕ್ಕುನು ಗುಣವಾಗಿ ಸಹಜವೇ ಸರಿ. ಆದರೆ ಇಂದಿನ ಯುವ ಸಮೂಹ ಪತ್ರಿಕೆ ಓದುವುದು, ಮೊಬೈಲ್‌ ಮೂಲಕ ವಿಷಯಗಳನ್ನು ಸಂಗ್ರಹಿಸುವುದು, ಮಾಧ್ಯಮಗಳ ಮೂಲಕ ಪ್ರಾಪಂಚಿಕ ಜ್ಞಾನ ವನ್ನು ಬಹುಬೇಗನೆ ಗ್ರಹಿಸಿಕೊಳ್ಳುತ್ತದೆ. ಹಾಗಾಗಿ ಪ್ರಬುದ್ಧರಾಗಿರುವ, ಜ್ಞಾನಿಗಳಾಗಿರುವ ಉತ್ಸಾಹಿ ಯುವಕರು ಗ್ರಾಮದ ಪ್ರಗತಿಯ ರೂವಾರಿಗಳಾಗಬೇಕು. ಆಧುನಿಕ ಭಾರತ ಕಲ್ಪನೆ ಜತೆಗೆ ಜನತೆಯ ಆಶೋತ್ತರ ಈಡೇರಿಸಲು ಯುವ ಚಿಂತನೆಯ ಜ್ಞಾನಿಗಳು ಚುನಾವಣ ಸ್ಪರ್ಧೆಗೆ ನಿಲ್ಲಬೇಕು ಎಂಬುದು ನಮ್ಮ ಆಶಯವಾಗಿದೆ.

ಹಾಗಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಫಲಾನುಭವಿಗಳು, ಪ್ರಜ್ಞಾವಂತ ನಾಗರಿಕರು, ಪ್ರಬುದ್ಧರು, ಬುದ್ಧಿವಂತರು, ಸಶಕ್ತರೆಲ್ಲರೂ ಚುನಾವಣೆಯಲ್ಲಿ ಸ್ಪರ್ಧಿಸಲು ನಮ್ಮ ಸಹಮತವಿದೆ. ಆದರೆ ನಾವು ಅವರಿಗೆ ಯಾವುದೇ ಸಂದೇಶ, ಆದೇಶ, ಪ್ರೋತ್ಸಾಹವನ್ನು ನೀಡುವುದಿಲ್ಲ. ಆದರೆ ಗಾಂಧೀಜಿ ಅವರ ಗ್ರಾಮ ಸ್ವರಾಜ್ಯ ಕಲ್ಪನೆಯಂತೆ ಧರ್ಮಸ್ಥಳ ಗ್ರಾಮಾ ಭಿವೃದ್ಧಿ ಯೋಜನೆಯ ಸ್ವರಾಜ್ಯ ಕಲ್ಪನೆಯನ್ನು ಸಾಕಾರಗೊಳಿಸಲಿ ಎಂದು ನಾನು ಆಶಿಸುತ್ತೇನೆ.

ಪಂಚಾಯತ್‌ ಚುನಾವಣೆಯಲ್ಲಿ ರಾಜಕೀಯ ಇಲ್ಲದಿರುವುದೇ ಉತ್ತಮ. ರಾಜಕೀಯ ಹುಟ್ಟಿದ್ದೇ ಆದಲ್ಲಿ ಗೆದ್ದವರು, ಸೋತವರು ಎಂದು ಎರಡು ಬಣಗಳಾಗಿ ಒಡೆದು ಗ್ರಾಮದಲ್ಲಿ ಅನೇಕ ಸಮಸ್ಯೆಗಳು ಸೃಷ್ಟಿಯಾಗಿ ಹತಾಶೆಯ ಕದ ತಟ್ಟುತ್ತವೆ. ಚುನಾವಣೆ ಮುಗಿದ ಮರುಕ್ಷಣವೇ ಜಿದ್ದು, ಹಟ, ಸೋಲಿನ ಸೇಡು ಹುಟ್ಟಿ ಕೊಳ್ಳುತ್ತವೆ. ಚುನಾವಣೆಯಲ್ಲಿ ಸೋಲು- ಗೆಲುವಿನ ದ್ವೇಷದ ವಾತಾವರಣ ಬೆಳೆಸಬಾರದು. ಚುನಾವಣೆ ಪ್ರಕ್ರಿಯೆ ನಡೆದ ಬಳಿಕ ಎಲ್ಲರೂ ನಾವು ಒಂದು ಎಂಬ ನೆಲೆಯಲ್ಲಿ ಗ್ರಾಮದ ಸರ್ವತೋಮುಖ ಪ್ರಗತಿಯ ಕಲ್ಪನೆಯಲ್ಲಿ ಜತೆಯಾಗಬೇಕಿದೆ. ಇದುವೇ ಗ್ರಾಮ ಸ್ವರಾಜ್ಯದ ಗುಟ್ಟಾಗಿದೆ.
ಡಾ| ಡಿ.ವೀರೇಂದ್ರ ಹೆಗ್ಗಡೆ, ಧರ್ಮಾಧಿಕಾರಿಗಳು, ಶ್ರೀ ಕ್ಷೇತ್ರ ಧರ್ಮಸ್ಥಳ

Advertisement

Udayavani is now on Telegram. Click here to join our channel and stay updated with the latest news.

Next