Advertisement
ಹೀಗೆಂದು ಹೇಳಿರು ವುದು ವಿದೇಶಾಂಗ ಸಚಿವ ಎಸ್. ಜೈಶಂಕರ್. ಜಿ20 ರಾಷ್ಟ್ರಗಳ ಶೃಂಗಸಭೆಗೆ 3 ದಿನಗಳ ಬಾಕಿಯಿರು ವಂತೆಯೇ ಸುದ್ದಿಸಂಸ್ಥೆಯೊಂದಕ್ಕೆ ಸಂದರ್ಶನ ನೀಡಿ ರುವ ಸಚಿವ ಜೈಶಂಕರ್, “ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಭಾರತದ ವರ್ಚಸ್ಸು ಬದಲಾಗಲು, ರಾಜತಾಂತ್ರಿಕ ಮಟ್ಟದಲ್ಲಿ ಭಾರತ ಉನ್ನತ ಸ್ಥಾನ ಪಡೆಯಲು ಪ್ರಧಾನಿ ನರೇಂದ್ರ ಮೋದಿಯವರೇ ಕಾರಣ’ ಎಂದಿದ್ದಾರೆ.
ಸಮ್ಮೇಳನದ ಹಿನ್ನೆಲೆಯಲ್ಲಿ ಹೊಸದಿಲ್ಲಿಯಲ್ಲಿ ಬಹುಸ್ತರದ ಭದ್ರತೆ ಕೈಗೊಳ್ಳಲಾಗಿದೆ. ವಿಶೇಷವಾಗಿ 19 ಮಂದಿ ಮಹಿಳಾ ಶಾರ್ಪ್ ಶೂಟರ್‌ಗಳನ್ನು ನೇಮಿಸಲಾಗಿದೆ. ವಿಶೇಷ ಮಹಿಳಾ ಪೊಲೀಸ್ ಆಯುಕ್ತರ ದರ್ಜೆಯ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. 50 ಸಾವಿರ ಮಂದಿ ಸಿಬಂದಿ, ಕೆ9 ಶ್ವಾನದಳವನ್ನೂ ನಿಯೋಜಿ ಸಲಾಗಿದೆ. ಅವರಿಗೆ ಪೂರಕವಾಗಿ ಕೇಂದ್ರೀಯ ಅರೆಸೇನಾ ಪಡೆ, ಎನ್‌ಎಸ್‌ಜಿ, ಐಎಎಫ್ ಯೋಧರೂ ಭದ್ರತೆಗೆ ನೆರವು ನೀಡಲಿದ್ದಾರೆ.
Related Articles
ಜಿ20 ಶೃಂಗದಲ್ಲಿ ಚೀನ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರ ಅನುಪಸ್ಥಿತಿಯು ಅಸಹಜವೇನೂ ಅಲ್ಲ. ಸಭೆಯಲ್ಲಿ ಸರ್ವ ಸಮ್ಮತದ ನಿರ್ಣಯ ಕೈಗೊಳ್ಳುವುದರ ಮೇಲೂ ಇದು ಪರಿಣಾಮ ಬೀರುವುದಿಲ್ಲ. ಜಿ20 ಸದಸ್ಯ ರಾಷ್ಟ್ರಗಳ ಶೆರ್ಪಾಗಳು ಅಂದರೆ ದೇಶದ ಪ್ರತಿನಿಧಿಗಳು ಶೃಂಗದ ನಿರ್ಣಯದಲ್ಲಿ ಒಮ್ಮತ ಮೂಡಿಸುವ ನಿಟ್ಟಿನಲ್ಲಿ ಮಾತುಕತೆ ನಡೆಸುತ್ತಿದ್ದಾರೆ. ಜಿ20 ಎನ್ನುವುದು ಎಲ್ಲರ ಸಹಭಾಗಿತ್ವದ ವೇದಿಕೆಯಾಗಿದೆಯೇ ಹೊರತು ಅದು ಪವರ್ ಪಾಲಿಟಿಕ್ಸ್‌ನ ಸ್ಥಳವಾಗಬಾರದು ಎಂದೂ ಜೈಶಂಕರ್ ಹೇಳಿದ್ದಾರೆ.
Advertisement
ಸಂಪುಟ ಸದಸ್ಯರಿಗೆ ಪಾಠ ಶೃಂಗ ಸಮ್ಮೇಳನದ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿಯವರು ಬುಧವಾರ ನಡೆದ ಸಂಪುಟ ಸಭೆಯಲ್ಲಿ ಸಚಿವರಿಗೆ ಹೇಗೆ ವರ್ತಿಸಬೇಕು ಎಂಬ ಬಗ್ಗೆ ವಿವರಣೆ ನೀಡಿದ್ದಾರೆ. ಸಮ್ಮೇಳನ ನಡೆಯುವ ಸ್ಥಳಕ್ಕೆ ತೆರಳಲು ಸಾರ್ವಜನಿಕ ಸಾರಿಗೆ ಬಳಕೆ ಮಾಡಬೇಕು, ಜಿ20 ಇಂಡಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಬೇಕು. ಜತೆಗೆ ವಿವಿಧ ರಾಷ್ಟ್ರಗಳ ನಿಯೋಗದ ಸದಸ್ಯರ ಜತೆಗೆ ಮಾತುಕತೆ ನಡೆಸುವಾಗ ಅದರ ಮೂಲಕವೇ ಸಂವಹನ ನಡೆಸಬೇಕು ಎಂದು ಸೂಚಿಸಿದ್ದಾರೆ. ಅದರಲ್ಲಿ ದೇಶದ ಎಲ್ಲ ಭಾಷೆಗಳೂ, ಜಿ20 ರಾಷ್ಟ್ರಗಳ ಒಕ್ಕೂಟಗಳ ರಾಷ್ಟ್ರಗಳ ಭಾಷೆಗಳನ್ನು ಅಳವಡಿಸಲಾಗಿದೆ. ಜಿ20 ಸಮ್ಮೇಳನದಲ್ಲಿ ಯಾವ ರೀತಿ ಭಾಗವಹಿಸಬೇಕು ಎನ್ನುವುದು ಆ ದೇಶಕ್ಕೆ ಬಿಟ್ಟ ವಿಚಾರ. ಸಮ್ಮೇಳನದ ಉದ್ದೇಶ ಹಾಳು ಮಾಡಬೇಕು ಎಂಬ ಉದ್ದೇಶ ಹೊಂದಿದ್ದರೆ ಅದಕ್ಕೂ ಅವಕಾಶ ಇದೆ.
ಜ್ಯಾಕ್ ಸಲ್ಲಿವನ್, ಅಮೆರಿಕದ ಭದ್ರತಾ ಸಲಹೆಗಾರ