ಹುಬ್ಬಳ್ಳಿ: ಕೋವಿಡ್-ಲಾಕ್‌ಡೌನ್‌ನಿಂದ ಕುಂಠಿತಗೊಂಡಿದ್ದಇಲ್ಲಿನ ಮಂಟೂರ ರಸ್ತೆಯಲ್ಲಿ ನಿರ್ಮಾಣಗೊಳ್ಳಲಿರುವ ಸಮೂಹವಸತಿಯ ಜಿ+2 ಅಪಾರ್ಟ್‌ಮೆಂಟ್ ಯೋಜನೆ ಕಾಮಗಾರಿಗೆ ವೇಗ ದೊರೆತಿದ್ದು, ಮುಂದಿನ ಎಪ್ರಿಲ್ ವೇಳೆಗೆಸಿದ್ಧಗೊಳ್ಳಲಿದೆ ಎಂದು ಅಂದಾಜಿಸಲಾಗುತ್ತಿದೆ.
ಕೊರೊನಾ ಸೋಂಕುಹಾಗೂ ಲಾಕ್‌ಡೌನ್‌ಪರಿಣಾಮ ನಗರದಲ್ಲಿನಡೆಯುತ್ತಿರುವ ಬಹುತೇಕ ಕಾಮಗಾರಿಗಳಿಗೆ ಕಳೆದ18 ತಿಂಗಳಿಂದಗರಬಡಿದಂತಾಗಿದೆ. 2018ರಲ್ಲಿ ಆರಂಭಗೊಂಡು ಇಷ್ಟೊತ್ತಿಗಾಗಲೇ ಪೂರ್ಣಗೊಳ್ಳಬೇಕಿದ್ದ ಸಮೂಹ ವಸತಿ ಯೋಜನೆಯಡಿಯ ಜಿ+2 ಆಶ್ರಯ ಮನೆಗಳ ನಿರ್ಮಾಣ ಕಾಮಾಗಾರಿಯೂ ಇವುಗಳಸಾಲಿನಲ್ಲಿಯೇ ಇದೆ.ಕಟ್ಟಡ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದ ಬಹುತೇಕಕಾರ್ಮಿಕರು ಪರ ರಾಜ್ಯದವರಾಗಿದ್ದರು. ಉತ್ತರ ಪ್ರದೇಶ,ಬಿಹಾರ, ಓಡಿಶಾ ಸೇರಿದಂತೆ ವಿವಿಧ ರಾಜ್ಯಗಳ ಕಾರ್ಮಿಕರು ಕೆಲಸ ಮಾಡುತ್ತಿದ್ದರು.
ಮೊದಲ ಲಾಕ್‌ಡೌನ್ ವೇಳೆ ಅನೇಕರುತವರಿಗೆ ತೆರಳಿದ್ದರಿಂದ ಕಾಮಗಾರಿ ಕುಂಠಿತವಾಗಿತ್ತು. 2ನೇ ಲಾಕ್‌ಡೌನ್ ಸಂದರ್ಭದಲ್ಲೂ ಮತ್ತೆ ತವರಿಗೆ ತೆರಳಿದ್ದರಿಂದ ಯೋಜನೆಗೆಹಿನ್ನಡೆಯಾಗಿತ್ತು. ಇದೀಗ ನಿಧಾನವಾಗಿ ಮರಳುತ್ತಿದ್ದು,ಕಾಮಗಾರಿ ವೇಗ ಪಡೆದುಕೊಳ್ಳುತ್ತಿದೆ.
ಸಮೂಹ ವಸತಿ ಯೋಜನೆಯಡಿಬೆಂಗಳೂರು ಹಾಗೂ ತುಮಕೂರು ನಂತರಹುಬ್ಬಳ್ಳಿಯಲ್ಲಿ ಸಮೂಹ ವಸತಿ ಯೋಜನೆಅನುಷ್ಠಾನಗೊಳಿಸಲಾಗುತ್ತಿದೆ. ಬಡ ಜನರಿಗೆ ಅತಿಕಡಿಮೆ ಹಣದಲ್ಲಿ ಆಶ್ರಯ ಅಪಾರ್ಟ್‌ಮೆಂಟ್‌ನೀಡುವುದು ವಸತಿ ಯೋಜನೆ ಉದ್ದೇಶವಾಗಿದೆ.ಆಯ್ದ ಬಡಜನರಿಗೆ ನಗರದ ಹೊರವಲಯದಲ್ಲಿ ವಸತಿ ವ್ಯವಸ್ಥೆಮಾಡಲು ಉದ್ದೇಶಿಸಲಾಗಿದೆ. ಆಶ್ರಯ ಕಾಲೋನಿಗಳಲ್ಲಿಹೆಚ್ಚು ಜನರಿಗೆ ವಸತಿ ಕಲ್ಪಿಸಲು ಸಾಧ್ಯವಾಗದ್ದರಿಂದ ಈನೂತನ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ.ನಗರ ಬೆಳೆದಂತೆ ಕೊಳಗೇರಿಗಳಲ್ಲಿನ ಜನವಸತಿ ಕೂಡಹೆಚ್ಚಾಗುತ್ತಿದೆ. ಸರಕಾರದಿಂದ ಅಪಾರ್ಟ್‌ಮೆಂಟ್‌ನಿರ್ಮಿಸಿದರೆ ವ್ಯವಸ್ಥಿತ ವಸತಿ ಸೌಲಭ್ಯ ಒದಗಿಸಲುಸಾಧ್ಯವಾಗುತ್ತದೆ.
ಬಸವರಾಜ ಹೂಗಾರ