ನವದೆಹಲಿ: ಭವಿಷ್ಯದ ಪೀಳಿಗೆಗಳು ಪ್ರಧಾನಿ ನರೇಂದ್ರ ಮೋದಿ ಅವರ “ಸುವರ್ಣ ಅವಧಿ” ಯನ್ನು ಅಧ್ಯಯನ ಮಾಡುತ್ತಾರೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಹೇಳಿದ್ದಾರೆ.
ಅಹಮದಾಬಾದ್‌ನ ಇನ್‌ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ (ಐಸಿಎಐ) ನಲ್ಲಿ 2023-24ರ ಕೇಂದ್ರ ಬಜೆಟ್ ಕುರಿತು ಮಾತನಾಡುವಾಗ ಮಾಂಡವಿಯಾ ಅವರು ಶನಿವಾರ ಈ ಹೇಳಿಕೆ ನೀಡಿದ್ದಾರೆ.
ಮಾಂಡವಿಯಾ ಅವರು ವಿದ್ಯಾರ್ಥಿಗಳು ಮತ್ತು ವೃತ್ತಿಪರರನ್ನು ಉದ್ದೇಶಿಸಿ ಮಾತನಾಡುತ್ತಾ, ಆರ್ಥಿಕ ಸುಧಾರಣೆಗಳು, ಕೋವಿಡ್-19 ನಿರ್ವಹಣೆ, ಗಡಿಯಾಚೆಗಿನ ಭಯೋತ್ಪಾದಕರ ಮೇಲಿನ ಸರ್ಜಿಕಲ್ ಸ್ಟ್ರೈಕ್ ಮುಂತಾದ ವಿವಿಧ ಸಾಧನೆಗಳಿಗಾಗಿ ಪ್ರಧಾನಿ ಮೋದಿ ಅವರನ್ನು ನೆನಪಿಸಿಕೊಳ್ಳಲಾಗುತ್ತದೆ ಎಂದರು.
“ನಾವು ಪ್ರಾಚೀನ ಭಾರತದ ಮೌರ್ಯ ಸಾಮ್ರಾಜ್ಯದ ಮೊದಲ ಚಕ್ರವರ್ತಿಚಂದ್ರಗುಪ್ತ ಮೌರ್ಯರ ಸುವರ್ಣಯುಗವನ್ನು ನಮ್ಮ ಇತಿಹಾಸದ ಪಠ್ಯಕ್ರಮದ ಭಾಗವಾಗಿ ಅಧ್ಯಯನ ಮಾಡುತ್ತಿದ್ದೆವು. ಇದು ಇನ್ನೂ ಶಾಲೆಗಳು ಮತ್ತು ಕಾಲೇಜುಗಳಲ್ಲಿ ಪಠ್ಯಕ್ರಮದ ಭಾಗವಾಗಿದೆ . ನಮ್ಮ ಭವಿಷ್ಯದ ಪೀಳಿಗೆಗಳು ,ಇಂದಿನಿಂದ ಮೂರನೇ ಅಥವಾ ನಾಲ್ಕನೇ ಪೀಳಿಗೆ ಭಾರತದ ರಾಜಕೀಯ ಇತಿಹಾಸವನ್ನು ಕಲಿಸಿದಾಗಲೆಲ್ಲಾ ನರೇಂದ್ರ ಮೋದಿಯವರ ಸುವರ್ಣ ಅವಧಿಯ ಬಗ್ಗೆ ಅಧ್ಯಯನ ಮಾಡುತ್ತಾರೆ”ಎಂದರು.
ನರೇಂದ್ರ ಮೋದಿಯವರ ಸುವರ್ಣ ಯುಗದಲ್ಲಿ ಯಾವ ರೀತಿಯ ಆರ್ಥಿಕ ಸುಧಾರಣೆಗಳು ನಡೆದವು ಎಂಬುದನ್ನು ಭವಿಷ್ಯದ ಪೀಳಿಗೆಗೆ ಕಲಿಸಲಾಗುವುದು ಎಂದರು.