ಮುಂಡಾಜೆ: ಚಾರ್ಮಾಡಿ, ಕೊಟ್ಟಿಗೆಹಾರ ಚೆಕ್‌ಪೋಸ್ಟ್ ಗಳಲ್ಲಿ ಮತ್ತಷ್ಟು ಬಿಗು ತಪಾಸಣೆ ಮುಂದುವರಿದಿದೆ. ಮೇ 10ರಿಂದ ಕೊಟ್ಟಿಗೆಹಾರ ಚೆಕ್‌ಪೋಸ್ಟ್‌ನಲ್ಲಿ ಸಂಜೆ 7ರಿಂದ ಬೆಳಗ್ಗೆ 7ರ ತನಕ ಹೊರಹೋಗುವ, ಒಳ ಬರುವ ಪ್ರಯಾಣಿಕರ ವಾಹನಗಳಿಗೆ ಪ್ರವೇಶ ನೀಡುತ್ತಿಲ್ಲ.
ಈ ಮಾಹಿತಿ ಇಲ್ಲದೆ ಚಾರ್ಮಾಡಿ ಚೆಕ್‌ಪೋಸ್ಟ್‌ನಲ್ಲಿ ಪ್ರವೇಶ ನೀಡಲಾಗಿದ್ದ ಹಲವು ವಾಹನಗಳು ಕೊಟ್ಟಿಗೆಹಾರದಿಂದ ರಾತ್ರಿ ವಾಪಸಾಗಿರುವ ಪ್ರಕರಣಗಳು ವರದಿಯಾಗಿವೆ. ದಿನಸಿ, ಅಗತ್ಯ ವಸ್ತು ಸಾಗಾಟದ ವಾಹನಗಳಿಗೆ ಸಂಜೆ 7ರ ಬಳಿಕವೂ ಸಂಚಾರಕ್ಕೆ ಅವಕಾಶ ನೀಡಲಾಗಿದೆ.
ಮೇ 11ರಂದು ಕೇರಳ ಕಡೆಯಿಂದ ತೋಟತ್ತಾಡಿ ಪ್ರದೇಶಕ್ಕೆ ಬಂದ ಸರಕು ಸಾಗಣೆಯ ಲಾರಿ ಚಾಲಕನ ಕೈಗೆ ಕ್ವಾರಂಟೈನ್ ಸೀಲ್ ಹಾಕಲಾಗಿದೆ, ಆದರೂ ಆತನಿಗೆ ಹೇಗೆ ಪ್ರವೇಶ ಸಿಕ್ಕಿತು ಎಂಬ ವದಂತಿ ಹಬ್ಬಿದ್ದು, ಸ್ಥಳೀಯ ಕೆಲವರು ಇದನ್ನು ಪರಿಶೀಲಿಸಿದಾಗ, ಅದು ಆತ ಕೈಗೆ ಹಚ್ಚೆ ಹಾಕಿಸಿ ಕೊಂಡಿದ್ದ ಎಂದು ತಿಳಿದು ಬಂತು.
ವಿಲ್ಲಿಂಗ್‌ನೆಸ್
ಆಗದವರಿಗೂ ಅಕ್ಕಿ ಲಭ್ಯ
ವಿಲ್ಲಿಂಗ್‌ನೆಸ್ ಆಗದ ಎ.ಪಿ.ಎಲ್. ಕಾರ್ಡುದಾರರಿಗೂ ಗರಿಷ್ಠ 10 ಕೆ.ಜಿ. ಅಕ್ಕಿ ತಲಾ 15 ರೂ.ಗೆ ಲಭ್ಯವಿದೆ ಎಂದು ಸ್ಥಳೀಯ ಪಡಿತರ ವಿತರಣಾ ಕೇಂದ್ರಗಳು ಪ್ರಕಟನೆಯಲ್ಲಿ ತಿಳಿಸಿವೆ.