Advertisement
“ಸ್ವಚ್ಚ ಸರ್ವೇಕ್ಷಣ ಗ್ರಾಮೀಣ’ ಕೇಂದ್ರದ ಮಹತ್ವಾಕಾಂಕ್ಷಿ ಯೋಜನೆ ಸ್ವಚ್ಚ ಭಾರತ್ ಮಿಷನ್‌ನ ಮುಂದುವರಿದ ಭಾಗ. ಈ ಮೊದಲು ಮನೆಗಳಲ್ಲಿನ ಸ್ವಚ್ಚತೆ ಬಗ್ಗೆ ಅರಿವು ಮೂಡಿಸಲಾಗುತ್ತಿತ್ತು. ಈಗ “ಸ್ವಚ್ಚ ಸರ್ವೇಕ್ಷಣ ಗ್ರಾಮೀಣ ರಥ’ವು ಹಳ್ಳಿಗಳಲ್ಲಿನ ಸಾಮೂಹಿಕ ಸ್ವಚ್ಚತೆ ಕುರಿತು ಜಾಗೃತಿ ಮೂಡಿಸಲಿದೆ.
Related Articles
Advertisement
ಈ ಹಿನ್ನೆಲೆಯಲ್ಲಿ ಗುರುವಾರ ಚಾಲನೆ ನೀಡಲಾದ ಸ್ವಚ್ಚ ಸರ್ವೇಕ್ಷಣ ರಥವು ಜನ ಜಾಗೃತಿ ಮೂಡಿಸಲಿದೆ. ಜಿಲ್ಲೆಯಲ್ಲಿ ಒಟ್ಟು ಮೂರು ಸ್ವಚ್ಚ ರಥಗಳು ಪ್ರತಿ ಹಳ್ಳಿಗಳಲ್ಲಿ ಸಂಚರಿಸಿ, ಕರಪತ್ರಗಳು, ಧ್ವನಿವರ್ಧಕದ ಮೂಲಕ ಸ್ವಚ್ಚತೆ ಬಗ್ಗೆ ತಿಳಿವಳಿಕೆ ನೀಡಲಿದೆ.
ಇದಲ್ಲದೆ, ಗ್ರಾಪಂ ವ್ಯಾಪ್ತಿಯ ಎಲ್ಲ ಗ್ರಾಮಗಳಲ್ಲಿ ಶಾಲಾ ಮತ್ತು ಅಂಗನವಾಡಿ ಶಿಕ್ಷಕರು, ಆರೋಗ್ಯ ಅಧಿಕಾರಿಗಳ ಸಭೆ ಆಯೋಜನೆ ಮಾಡಿ, ರೇಡಿಯೊ, ದೂರದರ್ಶನದ ಮೂಲಕ ಉದ್ದೇಶಿತ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಲಿದ್ದಾರೆ.
ಸ್ವಚ್ಚ ರಥಕ್ಕೆ ಜಿಪಂ ಅಧ್ಯಕ್ಷ ಸಿ. ಮುನಿರಾಜು ಚಾಲನೆ ನೀಡಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಎಸ್. ಅರ್ಚನಾ, ಉಪಕಾರ್ಯದರ್ಶಿ ಡಾ.ಸಿದ್ದರಾಮಯ್ಯ, ಯೋಜನಾ ನಿರ್ದೇಶಕ ಎ. ಹನುಮನರಸಯ್ಯ, ಜಿಲ್ಲಾ ಸಮಾಲೋಚಕ ಎಚ್.ವಿ. ಹಾಲೇಶ್ ಉಪಸ್ಥಿತರಿದ್ದರು.
ದೇಶಾದ್ಯಂತ ಸಮೀಕ್ಷೆ: ದೇಶಾದ್ಯಂತ ಹಮ್ಮಿಕೊಂಡ ಈ ಸ್ವಚ್ಚ ಸರ್ವೇಕ್ಷಣ ಗ್ರಾಮೀಣ’ದ ಮೌಲ್ಯಮಾಪನ ಕೂಡ ನಡೆಯಲಿದೆ. ಈ ಹಿನ್ನೆಲೆಯಲ್ಲಿ ನಡೆಸಲಾಗುವ ಸಮೀಕ್ಷೆಗೆ ಒಳಪಡಲಿರುವ ಜಿಲ್ಲೆ, ಗ್ರಾಮ, ಸಾರ್ವಜನಿಕ ಸ್ಥಳಗಳ ವಿವರ ಹೀಗಿದೆ.
-698 ಜಿಲ್ಲೆಗಳು-6,980 ಗ್ರಾಮಗಳು
-34,900 ಸಾರ್ವಜನಿಕ ಸ್ಥಳಗಳು
-50 ಲಕ್ಷ ನಾಗರಿಕರ ಪ್ರತಿಕ್ರಿಯೆಗಳ ಸಂಗ್ರಹ ಶೇ. 90ರಷ್ಟು ದಂಡಕ್ಕೆ ಅರ್ಹ!: ಮಾಹಿತಿ ಹಕ್ಕು ಆಯೋಗಕ್ಕೆ ಬರುವ ಪ್ರಕರಣಗಳಲ್ಲಿ ಶೇ. 90ರಷ್ಟು ದಂಡಕ್ಕೆ ಅರ್ಹ ಆಗಿರುತ್ತವೆ ಎಂದು ರಾಜ್ಯ ಮಾಹಿತಿ ಆಯೋಗದ ಆಯುಕ್ತ ಕೆ.ಎಂ. ಚಂದ್ರೇಗೌಡ ಬೇಸರ ವ್ಯಕ್ತಪಡಿಸಿದರು. ಬೆಂಗಳೂರು ನಗರ ಜಿ.ಪಂ.ಯಲ್ಲಿ ಗುರುವಾರ ಗ್ರಾಮಿಣ ಅಭಿವೃದ್ಧಿ ಅಧಿಕಾರಿಗಳಿಗಾಗಿ ಹಮ್ಮಿಕೊಂಡಿದ್ದ ಮಾಹಿತಿ ಹಕ್ಕು ಕಾಯ್ದೆ ಕುರಿತ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. “ನೀವು (ವಿವಿಧ ಇಲಾಖೆಗಳ ಅಧಿಕಾರಿಗಳು) ಸರಿಯಾಗಿ ಮಾಹಿತಿ ಕೊಡುವುದಿಲ್ಲ. ಹಾಗಾಗಿ, ಅವರು ಆಯೋಗದ ಮೊರೆಹೋಗುತ್ತಾರೆ. ಇಂತಹ ಪ್ರಕರಣಗಳಲ್ಲಿ ಶೇ. 90ರಷ್ಟು ದಂಡ ಪ್ರಯೋಗಕ್ಕೆ ಅರ್ಹ ಆಗಿರುತ್ತವೆ ಎಂದ ಕೆ.ಎಂ. ಚಂದ್ರೇಗೌಡ, ಇದೆಲ್ಲಕ್ಕಿಂತ ಹೆಚ್ಚಾಗಿ ಕಡತಗಳು ಮತ್ತು ಅರ್ಜಿಗಳನ್ನು ಸರಿಯಾಗಿ ಓದುವುದನ್ನು ಕಲಿಯಿರಿ ಎಂದು ಸೂಚ್ಯವಾಗಿ ಹೇಳಿದರು. ಆರ್‌ಟಿಐ ಕಾರ್ಯಕರ್ತರು ಬ್ಲ್ಯಾಕ್‌ವೆುಲ್ ಮಾಡುತ್ತಾರೆ ಎಂದು ಅಧಿಕಾರಿಯೊಬ್ಬರು ಗಮನಸೆಳೆದರು. ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅರ್ಚನಾ, “ನೀವು ಮೊದಲು ಸರಿಯಾಗಿರಬೇಕು. ನಿಮ್ಮಲ್ಲಿನ ಲೋಪವೇ ಮತ್ತೂಬ್ಬರಿಗೆ ಅಸ್ತ್ರ ಆಗುತ್ತದೆ. ನೀವು ಸರಿಯಾಗಿದ್ದರೆ, ಆರ್‌ಟಿಐ ಕಾರ್ಯಕರ್ತರಿಗೆ ಹೆದರುವ ಅವಶ್ಯಕತೆ ಇಲ್ಲ’ ಎಂದರು.