Advertisement

ಜನೌಷಧ ಕೇಂದ್ರ ಇನ್ನಷ್ಟು ವಿಸ್ತರಣೆ; ಕೇಂದ್ರ ಸಚಿವ ಭಗವಂತ ಖೂಬಾ

02:39 AM Oct 30, 2021 | Team Udayavani |

ಮಂಗಳೂರು: ಜನರಿಗೆ ಕಡಿಮೆ ಬೆಲೆಯಲ್ಲಿ ಔಷಧ ಒದಗಿಸುವ ಉದ್ದೇಶದಿಂದ ಆರಂಭಿಸಿರುವ ಪ್ರಧಾನ ಮಂತ್ರಿ ಭಾರತೀಯ ಜನೌಷಧ ಕೇಂದ್ರ ಗಳನ್ನು ಇನ್ನಷ್ಟು ವಿಸ್ತರಿಸಲು ಉದ್ದೇಶಿಸಿದ್ದು ವೈದ್ಯರು, ಆಶಾ ಕಾರ್ಯ ಕರ್ತೆಯರು ಮತ್ತು ಆರೋಗ್ಯ ಕಾರ್ಯಕರ್ತರು ಸಹಕರಿಸಬೇಕು ಎಂದು ಕೇಂದ್ರ ರಾಸಾಯನಿಕ, ರಸಗೊಬ್ಬರ ಖಾತೆ ಹಾಗೂ ನವೀನ ಮತ್ತು ನವೀಕರಿಸ ಬಹುದಾದ ಇಂಧನ ಖಾತೆಯ ಸಚಿವ ಭಗವಂತ ಖೂಬಾ ಹೇಳಿದರು.

Advertisement

ಅವರು ಶುಕ್ರವಾರ ಕೊಡಿಯಾಲ ಬೈಲ್‌ನ ರಮಣ್‌ ಪೈ ಕನ್ವೆನ್ಶನ್‌ ಸೆಂಟರ್‌ನಲ್ಲಿ ಪ್ರಧಾನಮಂತ್ರಿ ಭಾರತೀಯ ಜನೌಷಧ ಕೇಂದ್ರದ ವತಿಯಿಂದ ರಾಷ್ಟ್ರೀಯ ಏಕತಾ ಸಪ್ತಾಹದ ಪ್ರಯುಕ್ತ ನಡೆದ ಜನೌಷಧ ಮಿತ್ರ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.

ಸಚಿವ ಎಸ್‌. ಅಂಗಾರ ಅವರು, ಕೇಂದ್ರ ಸರಕಾರ ಜಾರಿಗೊಳಿಸಿರುವ ಯೋಜನೆಗಳನ್ನು ಜನರಿಗೆ ತಲುಪಿಸುವ ಕೆಲಸವನ್ನು ನಾವೆಲ್ಲರೂ ಸೇರಿ ಮಾಡ ಬೇಕು ಎಂದರು.

ಕ್ರಾಂತಿಕಾರಿ ಯೋಜನೆ
ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಜನೌಷಧ ಕೇಂದ್ರ ಪರಿಕಲ್ಪನೆಯು ಕೇಂದ್ರ ಸರಕಾರದ ಕ್ರಾಂತಿಕಾರಿ ಯೋಜನೆ ಎಂದರು. ಸಂಸದ ನಳಿನ್‌ ಕುಮಾರ್‌ ಕಟೀಲು ಮಾತನಾಡಿ, ಜನೌಷಧ ಕೇಂದ್ರಗಳು ಲಾಭದಾಯಕವಲ್ಲದಿದ್ದರೂ ಸೇವಾ ಮನೋಭಾವದಿಂದ ನಡೆಸಲಾಗುತ್ತಿದೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಡಿ. ವೇದವ್ಯಾಸ ಕಾಮತ್‌, ದ.ಕ. ಜಿಲ್ಲೆಯಲ್ಲಿ ಇನ್ನಷ್ಟು ಜನೌಷಧ ಮಳಿಗೆಗಳನ್ನು ಆರಂಭಿಸಲು ಸಂಬಂಧ ಪಟ್ಟ ಎಲ್ಲರು ಸಹಕರಿಸ ಬೇಕು ಎಂದರು.

Advertisement

ಇದನ್ನೂ ಓದಿ:ಟಿ20 ವಿಶ್ವಕಪ್‌: ಪಾಕಿಸ್ಥಾನ ಗೆಲುವಿನ ಹ್ಯಾಟ್ರಿಕ್‌

ಮೇಯರ್‌ ಪ್ರೇಮಾನಂದ ಶೆಟ್ಟಿ, ಶಾಸಕ ಉಮಾನಾಥ ಕೋಟ್ಯಾನ್‌, ವಿಧಾನ ಪರಿಷತ್‌ ಸದಸ್ಯ ಪ್ರತಾಪಸಿಂಹ ನಾಯಕ್‌, ಮುಡಾ ಅಧ್ಯಕ್ಷ ರವಿಶಂಕರ ಮಿಜಾರು, ವಿವಿಧ ನಿಗಮಗಳ ಅಧ್ಯಕ್ಷ ರಾದ ನಿತಿನ್‌ ಕುಮಾರ್‌, ಸಂತೋಷ್‌ ಕುಮಾರ್‌ ಶೆಟ್ಟಿ ಬೋಳಿಯಾರ್‌, ರವೀಂದ್ರ ಶೆಟ್ಟಿ ಉಳಿದೊಟ್ಟು, ಡಿಎಚ್‌ಒ ಡಾ| ಕಿಶೋರ್‌ ಕುಮಾರ್‌, ಉಡುಪಿ ಎಡಿಸಿ ಡಾ| ಸದಾಶಿವ ಪ್ರಭು, ಉಡುಪಿ ಡಿಎಚ್‌ಒ ಡಾ| ನಾಗಭೂಷಣ್‌ ಉಡುಪ, ಗಣ್ಯರಾದ ಪ್ರೊ| ಸಿ.ಎಸ್‌. ಶಾಸ್ತ್ರಿ, ಡಾ| ನವೀನ್‌ ಕುಮಾರ್‌ ಬಿ.ಸಿ., ಡಾ| ರಾಘವೇಂದ್ರ ಪ್ರಸಾದ್‌ ಬಂಗಾರಡ್ಕ, ಜಿಎಂ ರವಿಕಾಂತ್‌ ತಿವಾರಿ, ಡಿಜಿಎಂ ಕುಂದನ್‌ ಸಿಂಗ್‌, ಡಾ| ಅನಿಲ ವೇದಿಕೆಯಲ್ಲಿದ್ದರು. ಹಿರಿಯ ಪತ್ರಕರ್ತ ಮನೋಹರ ಪ್ರಸಾದ್‌ ಕಾರ್ಯಕ್ರಮ ನಿರ್ವಹಿಸಿದರು.

ಪ್ಲಾಸ್ಟಿಕ್‌ ಪಾರ್ಕ್‌ ಶೀಘ್ರ ಬರಲಿದೆ
ಮಂಗಳೂರು ಸಮೀಪದ ಗಂಜೀಮಠದಲ್ಲಿ ಪ್ಲಾಸ್ಟಿಕ್‌ ಪಾರ್ಕ್‌ ನಿರ್ಮಾಣ ಬಗ್ಗೆ ಅನುಮಾನ ಬೇಡ. ಸ್ಥಳ ಪರಿಶೀಲನೆ ನಡೆಸಿದ್ದು, ಈ ಯೋಜನೆ ಶೀಘ್ರ ಕಾರ್ಯಗತ ಮಾಡಲು ಬೇಕಾದ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಖೂಬಾ ತಿಳಿಸಿದರು.

ಆ್ಯಪ್‌ ಮೂಲಕ ಮಾಹಿತಿ
ಜನೌಷಧ ಕೇಂದ್ರಗಳು ಎಲ್ಲೆಲ್ಲಿ ಇವೆ ಮತ್ತು ಅಲ್ಲಿರುವ ಔಷಧಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಲು ಪ್ರತ್ಯೇಕ ಆ್ಯಪ್‌ ತಯಾರಿಸುವ ಚಿಂತನೆ ನಡೆದಿದೆ. ಔಷಧಗಳು ಮುಗಿದಾಗ ಆನ್‌ಲೈನ್‌ ಮೂಲಕ ಪೂರೈಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಭಗವಂತ ಖೂಬಾ ಹೇಳಿದರು.

 

Advertisement

Udayavani is now on Telegram. Click here to join our channel and stay updated with the latest news.

Next