Advertisement

ಕುಷ್ಟಗಿ: ಕಂಡಕ್ಟರ್‌ ನನ್ನೇ ಬಸ್‌ ನಿಲ್ದಾಣದಲ್ಲಿ ಮರೆತು ಬಸ್‌ ಚಲಾಯಿಸಿಕೊಂಡು ಬಂದ ಚಾಲಕ!

02:07 PM Jul 12, 2022 | Team Udayavani |

ಕುಷ್ಟಗಿ: ಬಸ್‌ ಕಂಡಕ್ಟರ್‌ ನನ್ನು ಚಾಲಕನೊಬ್ಬ ಮರೆತು ಬಸ್‌ ನಿಲ್ದಾಣದಲ್ಲೇ ಬಿಟ್ಟು ಮುಂದೆ ಬಂದಿರುವ ಘಟನೆ ನಡೆದಿದೆ.

Advertisement

ಕೆಎ-37, ಎಫ್-0678 ಸಂಖ್ಯೆಯ ಈ ಬಸ್ ಕುಷ್ಟಗಿ-ಕೊಪ್ಪಳ ಬಸ್ ಕೊಪ್ಪಳ ಕೇಂದ್ರ ನಿಲ್ದಾಣದಿಂದ ಮಧ್ಯಾಹ್ನ 1 ಗಂಟೆಗೆ ನಿರ್ಗಮಿಸಿದೆ. ಸುಮಾರು 5 ಕಿ.ಮೀ. ಅಂತರದಲ್ಲಿ ಓಜನಹಳ್ಳಿ ಸಮೀಪಿಸುತ್ತಿದ್ದ ಹಾಗೆ ಪ್ರಯಾಣಿಕರು ಟಿಕೆಟ್ ನೀಡುವ ಕಂಡಕ್ಟರ್ ಎಲ್ಲಿಯೆಂದು ಹುಡುಕಾಡಿದಾಗ ಕಂಡಕ್ಟರ್ ಇಲ್ಲದಿರುವುದು ಗೊತ್ತಾಗಿದೆ.

ಬಸ್ ಚಾಲಕ , ಕಂಡಕ್ಟರ್ ನನ್ನು ಮರೆತು ಬಸ್ ಚಲಾಯಿಸಿಕೊಂಡು ಬಂದಿರುವ ಎಡವಟ್ಟು  ಅರಿವಿಗೆ ಬಂದಿದೆ. ಕೂಡಲೇ ಬಸ್ ನ್ನು ಓಜನಹಳ್ಳಿ ಕ್ರಾಸ್ ಬಳಿ ಬಸ್‌ ನಿಲ್ಲಿಸಿ ಕಂಡಕ್ಟರ್ ಗಾಗಿ ಕೆಲವು ನಿಮಿಷ ಕಾಯಬೇಕಾಯಿತು. ಕಂಡಕ್ಟರ್ ನನ್ನು ಬಿಟ್ಟು ಬಂದಿರುವ ಚಾಲಕನಿಗೆ ಪ್ರಯಾಣಿಕರಿಂದ ಮುಜಗುರಕ್ಕೀಡಾಗಿರುವುದು ಕಂಡು ಬಂತು.

ಕಂಡಕ್ಟರ್ ಬಸ್ ಹತ್ತಬೇಕಾಗಿತ್ತು ಹತ್ತಲಿಕ್ಕ ಅಂದ್ರ ನಾನೇನು ಮಾಡಲಿ? ಎಂದು ಸಮರ್ಥಿಸಿಕೊಂಡರು. ನಂತರ ಕಂಡಕ್ಟರ್ ಇನ್ನೊಂದು ಬಸ್ ನಲ್ಲಿ ಬಂದು ಕುಷ್ಟಗಿ ಪಟ್ಟಣಕ್ಕೆ ತಲುಪಿಸಿತು. ಕುಷ್ಟಗಿಯಿಂದ ಕೊಪ್ಪಳ ಕ್ಕೆ ನಿತ್ಯ ಸಂಚರಿಸುವ ಈ ಬಸ್ಸಿ‌ನಲ್ಲಿ ಕಂಡಕ್ಟರ್ ಬಿಟ್ಟು  ಬಂದಿರುವುದು ಪ್ರಯಾಣಿಕರಿಗೆ ಸಿಟ್ಟು ಹಾಗೂ ಲಘು ಹಾಸ್ಯ  ಪ್ರಸಂಗ ನಡೆದಂತಾಯಿತು.

Advertisement

Udayavani is now on Telegram. Click here to join our channel and stay updated with the latest news.

Next