Advertisement

ಮುಂದಿನ ಸಾಂಕ್ರಾಮಿಕಕ್ಕೇ ಶಿಲೀಂಧ್ರವೇ ಮೂಲ? ರೋಗಕಾರಕ ಶಿಲೀಂಧ್ರಗಳಿಂದ ವಿವಿಧ ಸೋಂಕು ಸಾಧ್ಯತೆ

09:16 PM Apr 06, 2022 | Team Udayavani |

ಬೀಜಿಂಗ್‌/ನವದೆಹಲಿ: ಕೊರೊನಾ ವೈರಸ್‌ ಎಂಬ ಮಾಯೆಯು ಜಗತ್ತಿನಾದ್ಯಂತ ತಲ್ಲಣ ಸೃಷ್ಟಿಸಿಯಾಯ್ತು. ಇನ್ನು ಮುಂದೆ ಜಗತ್ತನ್ನು ಕಾಡಲಿರುವುದು ವೈರಸ್‌ ಅಲ್ಲ, ಬದಲಿಗೆ ಶಿಲೀಂಧ್ರಗಳು!

Advertisement

ಮುಂದಿನ ಸಾಂಕ್ರಾಮಿಕದ ಮೂಲ ಶಿಲೀಂಧ್ರಗಳಾಗಿರುತ್ತವೆ ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ.

2021ರ ಮಧ್ಯಭಾಗದಲ್ಲಿ ಭಾರತ ಸೇರಿದಂತೆ ಹಲವು ದೇಶಗಳಲ್ಲಿ ಕೊರೊನಾ ಸೋಂಕಿನಿಂದ ಗುಣಮುಖರಾದವರಲ್ಲಿ “ಮ್ಯುಕೋರ್ಮಿಕಾಸಿಸ್‌’ ಎಂಬ ಫಂಗಲ್ ಇನ್‌ಫೆಕ್ಷನ್‌ ಕಂಡುಬಂದಿದ್ದು ನೆನಪಿರಬಹುದು. ಇಂಥದ್ದೇ ರೋಗಕಾರಕ ಶಿಲೀಂಧ್ರಗಳು ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದ ಸಾಂಕ್ರಾಮಿಕ ಮೂಲಗಳಾಗಬಹುದು ಎಂದು ಅಂದಾಜಿಸಲಾಗಿದೆ.

ಅಮೆರಿಕದಲ್ಲಿ ವ್ಯಾಲಿ ಫಿವರ್‌, ಕಾಕ್ಸಿಡಿಯೋಮೈಕೋಸಿಸ್‌ ಮುಂತಾದ ರೋಗಗಳಿಗೆ ಕಾರಣವಾಗುವ ಶಿಲೀಂಧ್ರ ರೋಗಕಾರಕವು ಮಣ್ಣಿನಲ್ಲೇ ಇರುವ ಕಾರಣ ಮಾನವನಿಗೆ ಅಪಾಯಕಾರಿ ಎಂದು ಪರಿಗಣಿಸಲ್ಪಟ್ಟಿದೆ. ಹವಾಮಾನ ವೈಪರೀತ್ಯವು ಇಂಥ ಶಿಲೀಂಧ್ರಗಳ ಬೆಳವಣಿಗೆಗೆ ಪೂರಕವಾಗಿ ಕೆಲಸ ಮಾಡುತ್ತಿವೆ.

ಸಾಮೂಹಿಕ ಪರೀಕ್ಷೆಗೆ ಸಿದ್ಧತೆ:
ಚೀನದ ಅತಿದೊಡ್ಡ ನಗರ ಶಾಂಘೈನಲ್ಲಿ ಸತತ 5ನೇ ದಿನವೂ 17,007 ಕೊರೊನಾ ಪ್ರಕರಣಗಳು ದೃಢಪಟ್ಟಿದ್ದು, ನಗರದಾದ್ಯಂತ ಮತ್ತೊಂದು ಸುತ್ತಿನ ಸಾಮೂಹಿಕ ಪರೀಕ್ಷೆಗೆ ಸಿದ್ಧತೆ ಆರಂಭವಾಗಿದೆ.

Advertisement

ಮಾ.1ರಿಂದೀಚೆಗೆ ಕೊರೊನಾ ಸೋಂಕಿತರ ಸಂಖ್ಯೆ 94 ಸಾವಿರ ದಾಟಿದ್ದು, 2.60 ಕೋಟಿ ಜನಸಂಖ್ಯೆಯಿರುವ ನಗರದಲ್ಲಿ ಎಲ್ಲರನ್ನೂ ಪರೀಕ್ಷೆಗೆ ಒಳಪಡಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.

ಮೊದಲ ಬಾರಿಗೆ ಸೋಂಕು ಪತ್ತೆಯಾದ ವುಹಾನ್‌ ನಗರದಲ್ಲಿ ಒಂದೇ ದಿನದಲ್ಲಿ ಗರಿಷ್ಠವೆಂದರೆ 13,436 ಮಂದಿಗೆ ಸೋಂಕು ತಗುಲಿತ್ತು. ಚೀನಾದ ನಗರದಲ್ಲಿ ದಾಖಲಾದ ಗರಿಷ್ಠ ಸೋಂಕು ಪ್ರಕರಣ ಇದಾಗಿತ್ತು. ಆದರೆ, ಈಗ ಶಾಂಘೈನಲ್ಲಿ ಒಂದೇ ದಿನ 17 ಸಾವಿರಕ್ಕೂ ಹೆಚ್ಚು ಮಂದಿಗೆ ಸೋಂಕು ತಗಲುವ ಮೂಲಕ, ವುಹಾನ್‌ನ ದಾಖಲೆಯೂ ಸರಿಗಟ್ಟಿದಂತಾಗಿದೆ. ಲಾಕ್‌ಡೌನ್‌ ಹಿನ್ನೆಲೆ ಸತತ 2 ವಾರಗಳಿಂದ ನಗರದ ಜನ ಮನೆಯೊಳಗೆ ಬಂಧಿಯಾಗಿದ್ದಾರೆ.

ಭಾರತದಲ್ಲಿ ಎಷ್ಟು?:
ಈ ನಡುವೆ, ಭಾರತದಲ್ಲಿ ಮಂಗಳವಾರದಿಂದ ಬುಧವಾರಕ್ಕೆ 24 ಗಂಟೆಗಳಲ್ಲಿ 1086 ಕೊರೊನಾ ಪ್ರಕರಣ ಪತ್ತೆಯಾಗಿದ್ದು, 71 ಮಂದಿ ಸಾವಿಗೀಡಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next