ಭಾಲ್ಕಿ: ಮಕ್ಕಳಿಗೆ ಪಠ್ಯದ ಜೊತೆಗೆ ಸಹ ಪಠ್ಯಚಟುವಟಿಕೆ ಮತ್ತು ಉತ್ತಮ ಸಂಸ್ಕಾರ ಮುಖ್ಯ. ಉತ್ತಮ ಸಂಸ್ಕಾರ ಕಲಿತು ಸಮಾಜದಲ್ಲಿ ಮಾದರಿ ಪ್ರಜೆಯಾಗಲು ಪಾಲಕರು ಮತ್ತು ಶಿಕ್ಷಕರ ಪಾತ್ರ ಬಹಳ ಮುಖ್ಯ ಎಂದು ಸಂಸ್ಥೆ ಅಧ್ಯಕ್ಷ ಅಕ್ಷಯ ಸೋಮನಾಥ ಮುದ್ದಾ ಅಭಿಪ್ರಾಯಪಟ್ಟರು.
ಪಟ್ಟಣದ ಸದ್ಗುರು ವಿದ್ಯಾಲಯದಲ್ಲಿ ನಡೆದ ಬೇಸಿಗೆ ಸಿಬಿರ ಸಮಾರೋಪ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಸಂಸ್ಥೆ ಆಡಳಿತಾಧಿಕಾರಿ ವೀರಣ್ಣಾ ಪರಸಣೆ ಮಾತನಾಡಿ, ವಿದ್ಯಾರ್ಥಿಗಳು ಬೇಸಿಗೆ ಶಿಬಿರದಲ್ಲಿ ವಿವಿಧ ರೀತಿಯ ಚಟುವಟಿಕೆ, ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಮಕ್ಕಳ ಮಾನಸಿಕ ಬೆಳವಣಿಗೆಯಾಗಲಿದೆ ಎಂದರು.
ದಾಡಗಿಯ ಪಶು ವೈದ್ಯಾಧಿಕಾರಿ ಸಿದ್ಧಶ್ರೀ ರಂಗನಾಥ ಕಾರ್ಯಕ್ರಮ ಉದ್ಘಾಟಿಸಿದರು. ಉದ್ಯಮಿ ಸಾಯಿನಾಥ ಪಾಟೀಲ್ ಮತ್ತು ಸಂಸ್ಥೆ ನಿರ್ದೇಶಕಿ ಅಶ್ವಿನಿ ಮುದ್ದಾ ಮಕ್ಕಳಿಗೆ ಪ್ರಶಸ್ತಿ ವಿತರಣೆ ಮಾಡಿ ಅಭಿನಂದನೆ ತಿಳಿಸಿದರು.
ಮುಖ್ಯಗುರು ರಾಜಕುಮಾರ ಮೇತ್ರೆ, ಶಾಂತಮ್ಮ, ನಾಗಜ್ಯೋತಿ, ನಾಗರಾಜ, ಉಜ್ವಲಾ ಬೆಲ್ಲಾಳೆ, ದಯಾಳಕುಮಾರ ದಂಡಿನ, ಪಾಲಕರಾದ ಬಸವರಾಜ ಬಿರಾದಾರ ಮುಂತಾದವರು ಇದ್ದರು. ಪ್ರಿಯದರ್ಶಿನಿ ಬಾಳೂರಕರ ಸ್ವಾಗತಿಸಿದರು. ಶೃತಿ ಸಜ್ಜನ್ ನಿರೂಪಿಸಿದರು. ಶಿಕ್ಷಕಿ ಕಾವೇರಿ ಸಾವಳಿಕರ ವಂದಿಸಿದರು.