Advertisement

ಅಗಲಿದ ಮಣಿಪಾಲದ ಹಿರಿಯ ಚೇತನ ಟಿ.ಮೋಹನದಾಸ್ ಪೈ ಪಂಚಭೂತಗಳಲ್ಲಿ ಲೀನ

12:21 PM Aug 01, 2022 | Team Udayavani |

ಮಣಿಪಾಲ: ಮಾಧ್ಯಮ ಮತ್ತು ಮುದ್ರಣ ಕ್ಷೇತ್ರದಲ್ಲಿ ಮಣಿಪಾಲವನ್ನು ಜಾಗತಿಕ ಮಟ್ಟದಲ್ಲಿ ಹೆಸರುವಾಸಿಯಾಗುವಂತೆ ಮಾಡಿದ ತೋನ್ಸೆ ಮೋಹನದಾಸ ಪೈ ಅವರ ಪಾರ್ಥೀವ ಶರೀರ ಪಂಚಭೂತಗಳಲ್ಲಿ ಲೀನವಾಯಿತು.

Advertisement

ಮಣಿಪಾಲ ಪೈ ಕುಟುಂಬದ ಹಿರಿಯರು, ಉದಯವಾಣಿ ದಿನಪತ್ರಿಕೆಯ ಸಂಸ್ಥಾಪಕ, ನಾವೀನ್ಯದ ಹರಿಕಾರ ತೋನ್ಸೆ ಮೋಹನದಾಸ ಪೈ ಅವರು ರವಿವಾರ ಸಂಜೆ ಮೃತರಾಗಿದ್ದರು. ಮಣಿಪಾಲದ ಧೀಮಂತ ಮೋಹನದಾಸ್ ಪೈ ಅವರ  ಅಂತ್ಯಕ್ರಿಯೆ ಉಡುಪಿ ಬೀಡಿನಗುಡ್ಡೆ ಹಿಂದೂ ರುದ್ರಭೂಮಿಯಲ್ಲಿ ಸೋಮವಾರ ನೆರವೇರಿತು.

ಸಹೋದರರಾದ ನಾರಾಯಣ ಪೈ ಹಾಗೂ ಅಶೋಕ್ ಪೈ ನೇತೃತ್ವದಲ್ಲಿ ಅಂತಿಮ ವಿಧಿ ವಿಧಾನಗಳು ನಡೆದವು.

ಎಂಜಿಎಂ ಕಾಲೇಜಿನ ನೂತನ ರವೀಂದ್ರ ಕಲಾ ಮಂಟಪದಲ್ಲಿ ಸಾರ್ವಜನಿಕ ಅಂತಿಮ ದರ್ಶನದ ವ್ಯವಸ್ಥೆ ಮಾಡಲಾಗಿತ್ತು.

ಕಾರ್ಯ ನಿರ್ವಾಹಕ ಅಧ್ಯಕ್ಷ ಟಿ.ಸತೀಶ್ ಪೈ, ತರಂಗ ವ್ಯವಸ್ಥಾಪಕ ಸಂಪಾದಕಿ ಡಾ| ಸಂಧ್ಯಾ ಪೈ, ಕಾರ್ಯ ನಿರ್ವಾಹಕ ನಿರ್ದೇಶಕ ಗೌತಮ್ ಪೈ, ವನಿತಾ ಪೈ, ಸಹೋದರಿಯರಾದ ಡಾ| ಇಂಧುಮತಿ ಪೈ, ಡಾ|ಆಶಾ ಪೈ, ರಂಜನ್ ಪೈ, ಮಾಹೆ ಸಹ ಕುಲಾಧಿಪತಿ ಡಾ.ಎಚ್.ಎಸ್.ಬಲ್ಲಾಳ್, ಮಾಹೆ ವಿವಿ ಕುಲಪತಿ ಲೆ|ಜ| ಡಾ.ಎಂ.ಡಿ.ವೆಂಕಟೇಶ್, ಮಣಿಪಾಲ್ ಮೀಡಿಯಾ ನೆಟ್ ವರ್ಕ್ ಲಿ. ನ ಸಿಇಒ ಮತ್ತು ಎಂಡಿ ವಿನೋದ್ ಕುಮಾರ್ ಉಪಸ್ಥಿತರಿದ್ದರು.

Advertisement

ಸಚಿವರಾದ ವಿ.ಸುನಿಲ್ ಕುಮಾರ್, ಎಸ್.ಅಂಗಾರ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಮಾಜಿ ಸಚಿವರಾದ ವಿನಯ ಕುಮಾರ್ ಸೊರಕೆ, ಅಭಯಚಂದ್ರ ಜ್ಯೆನ್, ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಡಾ.ಮೋಹನ್ ಆಳ್ವ, ಜಿಲ್ಲಾಧಿಕಾರಿ ಕೂರ್ಮಾರಾವ್, ಎಂಜಿಎಂ ಕಾಲೇಜು ಪ್ರಾಂಶುಪಾಲ ಡಾ|ದೇವಿದಾಸ್ ನಾಯ್ಕ್ ಸಹಿತ ಮಣಿಪಾಲದ ವಿವಿಧ ಸಂಸ್ಥೆಗಳ ಮುಖ್ಯಸ್ಥರು, ಸಿಬಂದಿ ಸಹಿತ ಸಾರ್ವಜನಿಕರು ಅಂತಿಮ ದರ್ಶನ ಪಡೆದರು.

Advertisement

Udayavani is now on Telegram. Click here to join our channel and stay updated with the latest news.

Next