Advertisement

ಸಾರ್ವಜನಿಕರಿಗೆ ದೇವರ ದರ್ಶನ ಸಮಾಪ್ತಿ; 15 ನಿಮಿಷಗಳ ಅಂತಿಮ ಮೆರವಣಿಗೆ

11:32 AM Jan 22, 2019 | Team Udayavani |

ತುಮಕೂರು: ತ್ರಿವಿಧ ದಾಸೋಹದ ಕಾಯಕ ಯೋಗಿ, ಶತಾಯುಷಿ, ಡಾ.ಶಿವಕುಮಾರಸ್ವಾಮೀಜಿಯ ಲಿಂಗ ಶರೀರದ ಸಾರ್ವಜನಿಕರ ಅಂತಿಮ ದರ್ಶನ ಮುಕ್ತಾಯಗೊಂಡಿದೆ. ಆದರೆ ಇನ್ನೂ ಸಾವಿರಾರು ಭಕ್ತರು ಅಂತಿಮ ದರ್ಶನ ಪಡೆಯಲು ಸಾಧ್ಯವಾಗಿಲ್ಲ. ಏತನ್ಮಧ್ಯೆ ರುದ್ರಾಕ್ಷಿ ರಥದಲ್ಲಿ ತ್ರಿವಿಧ ದಾಸೋಹಿ, ಡಾ.ಸಿದ್ದಗಂಗಾಶ್ರೀಗಳ ಲಿಂಗಶರೀರದ ಅಂತಿಮ ಮೆರವಣಿಗೆ ಪ್ರಾರಂಭವಾಗಿದೆ.

Advertisement

ಯಾರೂ ನೂಕುನುಗ್ಗಲು ಮಾಡದೇ ತಾಳ್ಮೆಯಿಂದ ಸಹಕರಿಸಬೇಕು ಎಂದು ಮನವಿ ಮಾಡಿಕೊಂಡ ಮಠದ ಆಡಳಿತ ಮಂಡಳಿಯವರು ಒಳಗಡೆ ಇದ್ದ ಸಾರ್ವಜನಿಕರಿಗೆ ಮಾತ್ರ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಟ್ಟು, ಶ್ರೀಗಳು ಎಲ್ಲರ ಮನದಲ್ಲಿಯೇ ನೆಲೆಸಿದ್ದಾರೆ ಎಂದು ಸಾರ್ವಜನಿಕ ದರ್ಶನ ಮುಕ್ತಾಯಗೊಳಿಸಿದ್ದಾರೆ.

ಆರು ಅಡಿ ಎತ್ತರದ ತೇರಿನಲ್ಲಿ ರುದ್ರಾಕ್ಷಿ ಪಲ್ಲಕ್ಕಿ ಒಳಗೆ ಸಿದ್ದಗಂಗಾಶ್ರೀಗಳ ಲಿಂಗಶರೀರವನ್ನು ಇಟ್ಟು ಸುಮಾರು 400 ಮೀಟರ್ ದೂರದವರೆಗೆ ಮೆರವಣಿಗೆ ಮೂಲಕ ಕ್ರಿಯಾ ಸಮಾಧಿ ಸ್ಥಳಕ್ಕೆ ತರಲಾಯಿತು. ಶಿವೈಕ್ಯ ಶರೀರದ ಮೆರವಣಿಗೆ ಮುಂದೆ ಸುಮಾರು 400ಕ್ಕೂ ಅಧಿಕ ಸ್ವಾಮೀಜಿಗಳು ಭಾಗವಹಿಸಿದ್ದರು.

ಮಠದ ಗೇಟ್ ಬಳಿ ಭಕ್ತರು, ಪೊಲೀಸರ ನಡುವೆ ವಾಗ್ವಾದ:

ಲಿಂಗೈಕ್ಯರಾದ ಡಾ.ಶಿವಕುಮಾರಸ್ವಾಮೀಜಿಗಳ ಲಿಂಗಶರೀರದ ಅಂತಿಮ ದರ್ಶನಕ್ಕೆ ಸಾರ್ವಜನಿಕರಿಗೆ 4.30ರವರೆಗೂ ಅವಕಾಶ ಮಾಡಿಕೊಡಲಾಗಿತ್ತು. ಆದರೂ ಸಹಸ್ರಾರು ಭಕ್ತರು ಇದ್ದಿದ್ದರಿಂದ ಸಾರ್ವಜನಿಕರ ದರ್ಶನ ಅವಕಾಶವನ್ನು ಅಂತ್ಯಗೊಳಿಸಲಾಗಿತ್ತು. ಈ ನಿಟ್ಟಿನಲ್ಲಿ ತಮಗೆ ಬುದ್ದಿಗಳ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಿ ಎಂದು ಮಠದ ಗೇಟ್ ಹೊರಭಾಗದಲ್ಲಿ ಜಮಾಯಿಸಿದ್ದ ಭಕ್ತರು ಪೊಲೀಸರು ಜತೆ ವಾಗ್ವಾದ ನಡೆಸಿದ ಘಟನೆ ನಡೆಯಿತು.

Advertisement

ಶ್ರೀಗಳಿಗೆ ಸರ್ಕಾರಿ ಗೌರವ ಸಲ್ಲಿಕೆ:

ಸಿದ್ದಲಿಂಗಶ್ರೀಗಳ ಲಿಂಗಶರೀರ ಗದ್ದುಗೆ ತಲುಪಿದ ಬಳಿಕ ಸಕಲ ಸರ್ಕಾರಿ ಗೌರವಗಳನ್ನು ಸಲ್ಲಿಸಲಾಯಿತು. ಶ್ರೀಗಳ ಲಿಂಗಶರೀರದ ಮೇಲೆ ರಾಷ್ಟ್ರಧ್ವಜವನ್ನು ಹೊದೆಸಿ, ರಾಷ್ಟ್ರಗೀತೆಯನ್ನು ಹಾಡುವ ಮೂಲಕ ಗೌರವ ಸಲ್ಲಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next