Advertisement
ಹೀಗೆಂದು ಸ್ವತಃ ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರ(ಎನ್‌ಎಚ್‌ಎ)ವೇ ಮಂಗಳವಾರ ಘೋಷಣೆ ಮಾಡಿದೆ.
Related Articles
Advertisement
ಆ.1, 2022ರಿಂದ ಸೆ.19, 2022ರವರೆಗೆ ಅಂದರೆ 50 ದಿನಗಳ ಅವಧಿಯಲ್ಲಿ ಯಾರು ಹೆಚ್ಚಿನ ಸಾಧನೆ ಮಾಡಿರುತ್ತಾರೋ ಅಂಥ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು, ಜಿಲ್ಲಾ ಆರೋಗ್ಯ ಕೇಂದ್ರಗಳನ್ನು ಗುರುತಿಸಲಾಗುತ್ತದೆ ಎಂದು ಎನ್‌ಎಚ್‌ಎ ಮಾಹಿತಿ ನೀಡಿದೆ.
2021ರ ಸೆಪ್ಟೆಂಬರ್‌ನಲ್ಲಿ ದೇಶವ್ಯಾಪಿ ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್ ಅನುಷ್ಠಾನಗೊಂಡ ಬಳಿಕ, ಈವರೆಗೆ 23 ಕೋಟಿ ಆರೋಗ್ಯ ಗುರುತಿನ ಚೀಟಿಗಳು, 1.14 ಲಕ್ಷ ಆರೋಗ್ಯ ಕೇಂದ್ರಗಳು ನೋಂದಣಿಯಾಗಿವೆ ಎಂದು ಎನ್‌ಎಚ್‌ಎ ತಿಳಿಸಿದೆ. ಇದಲ್ಲದೇ, ಎಚ್‌ಪಿಆರ್‌ನಲ್ಲಿ 33 ಸಾವಿರ ಆರೋಗ್ಯಸೇವಾ ವೃತ್ತಿಪರರು ನೋಂದಣಿ ಮಾಡಿಕೊಂಡಿದ್ದಾರೆ. 6.6 ಲಕ್ಷ ಎಬಿಎಚ್‌ಎ ಆ್ಯಪ್‌ಗ್ಳು ಡೌನ್‌ಲೋಡ್ ಆಗಿವೆ, 3.4 ಲಕ್ಷ ಆರೋಗ್ಯ ದಾಖಲೆಗಳು ವ್ಯಕ್ತಿಗಳ ಎಬಿಎಚ್‌ಎ ಸಂಖ್ಯೆಯೊಂದಿಗೆ ಲಿಂಕ್ ಆಗಿವೆ.
ಎಲ್ಲ ರಾಜ್ಯಗಳೂ ಕೇಂದ್ರದ ಅನುದಾನವನ್ನು ಸಮಯೋಚಿಸವಾಗಿ ಬಳಸಬೇಕು. ಆಗ ಮಾತ್ರ ಜನಕೇಂದ್ರಿತ ಆರೋಗ್ಯ ಸೇವೆಗಳನ್ನು ಬೇರುಮಟ್ಟದಲ್ಲಿ ಜಾರಿ ಮಾಡಲು ಮತ್ತು ಆರೋಗ್ಯ ಮೂಲಸೌಕರ್ಯಗಳನ್ನು ಬಲಿಷ್ಠಗೊಳಿಸಲು ಸಾಧ್ಯ.– ಮನಸುಖ ಮಾಂಡವಿಯ, ಕೇಂದ್ರ ಆರೋಗ್ಯ ಸಚಿವ ನಿಲ್ದಾಣ, ಧಾರ್ಮಿಕ ಸ್ಥಳಗಳಲ್ಲೂ ಲಸಿಕೆ ಅಭಿಯಾನ ನಡೆಸಿ
ದೇಶದಲ್ಲಿ ಕೊರೊನಾ ಮುನ್ನೆಚ್ಚರಿಕಾ ಡೋಸ್‌ಗೆ ಅರ್ಹರಾಗಿರುವವರ ಪೈಕಿ ಕೇವಲ ಶೇ.17 ಮಂದಿ ಮಾತ್ರ ಅದನ್ನು ಪಡೆದಿರುವ ಹಿನ್ನೆಲೆ ಎಲ್ಲೆಡೆ ಲಸಿಕೆ ಅಭಿಯಾನವನ್ನು ಚುರುಕುಗೊಳಿಸುವಂತೆ ಕೇಂದ್ರ ಆರೋಗ್ಯ ಸಚಿವ ಮನಸುಖ ಮಾಂಡವಿಯ ಮಂಗಳವಾರ ರಾಜ್ಯಗಳಿಗೆ ಸಲಹೆ ನೀಡಿದ್ದಾರೆ. ರೈಲ್ವೆ ನಿಲ್ದಾಣಗಳು, ಬಸ್ ನಿಲ್ದಾಣಗಳು, ವಿಮಾನ ನಿಲ್ದಾಣಗಳು ಮತ್ತು ಧಾರ್ಮಿಕ ಸ್ಥಳಗಳಲ್ಲೂ ಲಸಿಕೆ ಅಭಿಯಾನ ನಡೆಸುವಂತೆ ಅವರು ರಾಜ್ಯಗಳ ಆರೋಗ್ಯ ಸಚಿವರಿಗೆ ಸೂಚಿಸಿದ್ದಾರೆ. ಜು.14ರವರೆಗೆ ದೇಶದಲ್ಲಿ ಕೇವಲ ಶೇ.8 ಅರ್ಹರು ಮಾತ್ರವೇ ಮುನ್ನೆಚ್ಚರಿಕಾ ಡೋಸ್ ಪಡೆದಿದ್ದರು. ಅದು ಆ.15ಕ್ಕೆ ಶೇ.17ಕ್ಕೆ ಏರಿದೆ. ಆ.15ರಿಂದ ಕೇಂದ್ರ ಸರ್ಕಾರವು 75 ದಿನಗಳ ಕಾಲ ವಿಶೇಷ ಲಸಿಕೆ ಅಭಿಯಾನ ನಡೆಸುತ್ತಿದ್ದು, 18 ವರ್ಷ ಮೇಲ್ಪಟ್ಟ ಎಲ್ಲ ಅರ್ಹರಿಗೆ ಸರ್ಕಾರಿ ಕೇಂದ್ರಗಳಲ್ಲಿ ಉಚಿತವಾಗಿ ಮುನ್ನೆಚ್ಚರಿಕಾ ಡೋಸ್ ನೀಡಲಾಗುತ್ತಿದೆ.