Advertisement

ವಾಟ್ಸಾಪ್‌ ಮೂಲಕ  ಚಿಕಿತ್ಸೆಗೆ ಹಣ ಸಂಗ್ರಹ

01:00 AM Mar 19, 2019 | Harsha Rao |

ಹಿರಿಯಡಕ :ಹೆಬ್ರಿಯ ಹುತ್ತುರ್ಕೆ ಹುಯ್ನಾಲುಜಡ್ಡು ಎಂಬಲ್ಲಿ ಕಡು ಬಡತನದಿಂದ ಹರಕಲು ಗುಡಿಸಲಿನಲ್ಲಿ ವಾಸವಾಗಿದ್ದ ಲಕ್ಷ್ಮಣ ನಾಯ್ಕ ಜಯಂತಿ ನಾಯ್ಕ  ದಂಪತಿಯ ಮಗಳು ವಿದ್ಯಾಶ್ರೀ ಅನಾರೋಗ್ಯದಿಂದ ಬಳಲುತಿದ್ದು, ಆಕೆಯ ಸಹಪಾಠಿಗಳು ಸ್ಪಂದಿಸಿ ಇತರಿಗೆ ಮಾದರಿಯಾಗಿದ್ದಾರೆ

Advertisement

ಇಲ್ಲಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಲಿಯುತ್ತಿದ್ದ ವಿದ್ಯಾ ಸಂಧಿವಾತದಿಂದ ಬಳಲುತಿದ್ದು, ಚಿಕಿತ್ಸೆಗಾಗಿ ಈಗಾಗಲೇ 2 ಲಕ್ಷ ರೂ. ಗಳಷ್ಟು ಖರ್ಚಾಗಿದೆ.  ತಮ್ಮೊಂದಿಗೆ ಕಲಿತ ಸಹಪಾಠಿ ಕಷ್ಟದಲ್ಲಿರುವುದನ್ನು 
ಮನಗಂಡ ಕಾಲೇಜಿನ ಹಳೆ ವಿದ್ಯಾರ್ಥಿಗಳು ಒಟ್ಟುಗೂಡಿ 50ಸಾವಿರ ರೂ. ಸಂಗ್ರಹಿಸಿ ಚಿಕಿತ್ಸೆಗೆ ನೆರವಾಗಿದ್ದಾರೆ.

ವಾಟ್ಸಾಪ್‌ ಮೂಲಕ ಸಂಪರ್ಕ
ಕಾಲೇಜಿನ ವಿದ್ಯಾರ್ಥಿಗಳ ವಾಟ್ಸಾಪ್‌ ಗ್ರೂಪ್‌ ಒಂದರಲ್ಲಿ ಕೃಷ್ಣಾನಂದ ಪೈ ಎನ್ನುವವರು ವಿದ್ಯಾಶ್ರೀ ಅವರ ಕಷ್ಟವನ್ನು ಅರಿತು ಸುಮಾರು 120 ಹಳೆ ವಿದ್ಯಾರ್ಥಿಗಳನ್ನು ಸಂಪರ್ಕಿಸಿ ಹಣ ಸಂಗ್ರಹಿಸಿದ್ದಾರೆ. ಸುಮಾರು 50 ಸಾವಿರ ರೂ. ಗಳನ್ನು ಆಕೆಗೆ ನೀಡುವ ಮೂಲಕ ಸಾಮಾಜಿಕ ಜಾಲ ತಾಣದ ಸದುಪಯೋಗವನ್ನು  ಹೀಗೂ ಮಾಡಬಹುದು ಎಂಬುದನ್ನು ತೋರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next