Advertisement
ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯೌಗಲ್ ಮನ್ಹಾಸ್ ಮಾಹಿತಿ ನೀಡಿದ್ದು, 5 ಮಂದಿಯನ್ನು ಬಂಧನ ಮಾಡಿರುವುದು ದೊಡ್ಡ ಸಾಧನೆ ಎಂದಿದ್ದಾರೆ. ಕುಪ್ವಾರಾ ಜಿಲ್ಲೆಯ ಚೀರ್‌ಕೋಟ್ ನಿವಾಸಿ ಬಿಲಾಲ್ ಅಹ್ಮದ್ ದರ್ ಉಗ್ರ ಸಂಘಟನೆಗೆ ನೇಮಕ, ವಿತ್ತೀಯ ನೆರವು ಸಂಗ್ರಹಿಸುವ ಜಾಲದ ರೂವಾರಿಯಾಗಿದ್ದ. ಈ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿರುವ ಹಿನ್ನೆಲೆಯಲ್ಲಿ ಪೊಲೀಸ್ ಮತ್ತು ಸೇನೆಯ ನೆರವಿನ ಜತೆಗೆ ಕಾರ್ಯಾಚರಣೆ ನಡೆಸಲಾಯಿತು.
Related Articles
Advertisement
ಆಸ್ತಿ ವಶಜಮಾತ್-ಇ-ಇಸ್ಲಾಮಿ ಎಂಬ ನಿಷೇಧಿತ ಸಂಘಟನೆಗೆ ಸೇರಿದ 2.58 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಕೇಂದ್ರಾಡಳಿತ ಪ್ರದೇಶದ ತನಿಖಾ ಸಂಸ್ಥೆ (ಎಸ್‌ಐಎ) ವಶಪಡಿಸಿಕೊಂಡಿದೆ. ಆ ಸಂಘಟನೆ ಒಟ್ಟು 9 ಸ್ಥಳಗಳಲ್ಲಿ ಹೊಂದಿರುವ ಆಸ್ತಿ ಮುಟ್ಟುಗೋಲು ಹಾಕುವ ಬಗ್ಗೆ ಶೋಪಿಯಾನ್ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.