Advertisement

ಮೂಲಭೂತ ಹಕ್ಕು, ಕರ್ತವ್ಯ ಅರಿವು ಅಗತ್ಯ

01:40 PM Oct 27, 2020 | Suhan S |

ಬಾಗೇಪಲ್ಲಿ: ಸಮಾಜದ ಪ್ರತಿಯೊಬ್ಬ ವ್ಯಕ್ತಿಗೂ ಮೂಲಭೂತ ಹಕ್ಕುಗಳನ್ನು ಸಂರಕ್ಷಣೆ ಮಾಡುವ ಹಿನ್ನೆಲೆಯಲ್ಲಿ ಭಾರತ ರತ್ನ ಡಾ.ಬಿ.ಆರ್‌.ಅಂಬೇಡ್ಕರ್‌ ಅವರು ದೇಶಕ್ಕೆ ಸಂವಿಧಾನ ರಚಿಸಿಕೊಟ್ಟರು ಎಂದು ನ್ಯಾಯಾಧೀಶ ಎಸ್‌.ಎಂ.ಅರುಟಗಿ ಪ್ರತಿಪಾದಿಸಿದರು.

Advertisement

ಪಟ್ಟಣದ ನ್ಯಾಯಾಲಯದ ಪ್ರಾಂಗಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಬಾಗೇಪಲ್ಲಿ ಆಡಳಿತ ಇಲಾಖೆ, ಪತ್ರಕರ್ತ ಸಂಘದ ಆಶ್ರಯದಲ್ಲಿ ಏರ್ಪಡಿಸಲಾಗಿದ್ದ ಸರ್ಕಾರದಿಂದ ಸಿಗುವ ಯೋಜನೆಗಳ, ಸಂವಿಧಾನ ದಿನಾಚರಣೆ ಹಾಗೂ ಮೂಲಭೂತ ಹಕ್ಕುಗಳ ಮತ್ತು ಕರ್ತವ್ಯಗಳ ಬಗ್ಗೆ ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಉಚ್ಛ ನ್ಯಾಯಾಲಯದ ನಿರ್ದೇಶನದಂತೆ ಇಂದು ಸಂವಿಧಾನ ದಿನಾಚರಣೆ ಏರ್ಪಡಿಸಲಾಗಿದ್ದು, ಸಂವಿಧಾನದಲ್ಲಿರುವ ಪ್ರತಿಯೊಬ್ಬರ ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳನ್ನು ತಿಳಿಸಬೇಕು ಎಂಬ ಉದ್ದೇಶವನ್ನು ಒಳಗೊಂಡಿದೆ. ಅದೇರೀತಿಯಲ್ಲಿ ಸರ್ಕಾರದ ವಿವಿಧ ಇಲಾಖೆಗಳಿಂದ ಜನರಿಗೆ ಸಿಗುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡುವುದಾಗಿದೆ ಎಂದರು.

ಮೂಲಭೂತ ಹಕ್ಕುಗಳಾದ ಶಿಕ್ಷಣ, ಆಹಾರ, ಬದುಕುವ, ಮಾತನಾಡುವ, ಪ್ರತಿಭಟಿಸುವ ಇತ್ಯಾದಿ ಹಕ್ಕುಗಳನ್ನು ನಮ್ಮ ಸಂಧಾನ ಕಲ್ಪಿಸಿದ್ದು, ಅದರೊಂದಿಗೆಕರ್ತವ್ಯಗಳನ್ನು ಪಾಲಿಸಬೇಕಾಗಿರುತ್ತದೆಎಂದರು. ವಕೀಲರ ಸಂಘದ ಅಧ್ಯಕ್ಷ  ನಂಜುಂಡಪ್ಪ ಮಾತನಾಡಿ, ಪ್ರತಿಯೊಂದು ಧರ್ಮಕ್ಕೂ ಒಂದೊಂದು ಧರ್ಮಗ್ರಂಥವಿರುತ್ತದೆ. ಆದರೆ ಎಲ್ಲಾ ಧರ್ಮಗಳನ್ನೊಳಗೊಂಡ ನಮ್ಮ ದೇಶಕ್ಕೆ ಒಂದೇ ಧರ್ಮಗ್ರಂಥ ಅದು ನಮ್ಮ ಸಂವಿಧಾನ ಎಂದರು.

ವಕೀಲರ ಸಂಘದ ಉಪಾಧ್ಯಕ್ಷೆ ಓ.ಎನ್‌.ಮಂಜುಳಾ, ವಕೀಲರಾದ ಫ‌ಯಾಜ್‌ಬಾಷ, ನಾಗಭೂಷಣ್‌, ನಾರಾಯಣ, ಬಾಲು, ಶಿಶು ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ಅನ್ಸೂಬಾಯಿ ಮತ್ತಿತರರು ಇದ್ದರು.

Advertisement

6 ವರ್ಷ ಮತದಾರರ ಸಮಸ್ಯೆಗೆ ಸ್ಪಂದನೆ :

ಚಿಂತಾಮಣಿ: ಆರು ವರ್ಷಗಳ ಅವಧಿಯಲ್ಲಿ ನನ್ನ ಕಚೇರಿಗೆ ಒಂದು ದಿನವೂ ಕೂಡ ರಜೆ ಇಲ್ಲದೇಪದವೀಧರರ, ಸಾಮಾನ್ಯಜನರ ಹಾಗೂ ಮತದಾರರ ಸಮಸ್ಯೆಗಳಿಗೆ ಸ್ಪಂದಿಸಿ ಅವರ ಸಮಸ್ಯೆಗಳನ್ನು ಬಗೆಹರಿಸಿದ್ದು,ಈ ಬಾರಿಯ ವಿಧಾನ ಪರಿಷತ್‌ ಚುನಾವಣೆಯಲ್ಲಿಯೂ ಕೂಡ ಪದವೀಧರರು ತನ್ನ ಕೈ ಹಿಡಿಯಲಿದ್ದಾರೆ ಎಂದು ಆಗ್ನೇಯ ಪದವೀಧರರ ಕ್ಷೇತ್ರದ ಅಭ್ಯರ್ಥಿ ತೂಪಲ್ಲಿ ಚೌಡರೆಡ್ಡಿ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನಗರದ ತಮ್ಮ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬಂದಿರುವ ಅನುದಾನವನ್ನು ಎಲ್ಲಾ ತಾಲೂಕುಗಳಿಗೆ ಸಮವಾಗಿ ಹಂಚಿಕೆ ಮಾಡಿದ್ದು, ಚಿಂತಾಮಣಿ ತಾಲೂಕಿನಲ್ಲಿಯೂ ಹಂಚಿಕೆ ಮಾಡಿದ್ದೇನೆ ಎಂದರು.

ಎಚ್‌.ಡಿ.ಕುಮಾರಸ್ವಾಮಿಯವರು ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ 48 ಸಾವಿರ ಶಿಕ್ಷಕರನ್ನು ನೇಮಿಸಲಾಯಿತು. ಶಿಕ್ಷಕರ, ಉಪನ್ಯಾಸಕರ, ಅತಿಥಿ ಉಪನ್ಯಾಸಕರ ಸಮಸ್ಯೆಗಳಿಗೆ ಸ್ಪಂದಿಸಿದ್ದು, ಅ ಮೂಲಕ ಎಲ್ಲಾ ಶಿಕ್ಷಕರ ಸಮಸ್ಯೆಗಳನ್ನುಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡಿರುವುದಾಗಿ ತಿಳಿಸಿದರು.

ಪತ್ರಕರ್ತರ ಪ್ರಶ್ನೆಗೆ ಉತ್ತರಿಸುತ್ತಾ, ಈ ಚುನಾವಣೆಯಲ್ಲಿ ಜೆಡಿಎಸ್‌ಗೆ ಪ್ರತಿ ಸ್ಪರ್ಧಿ ಬಿಜೆಪಿಯಾಗಿದ್ದು, ಟಿಕೆಟ್‌ ವಿಚಾರದಲ್ಲಿ ಗೊಂದಲ ಸೃಷ್ಟಿಯಾಗಿ ಬಂಡಾಯ ಅಭ್ಯರ್ಥಿ ಸ್ಪರ್ಧೆಯಲ್ಲಿದ್ದು, ಇದರಿಂದ ನನಗೆ ನೆರವಾಗಲಿದೆ ಎಂದರು.

ಈ ಸಂದರ್ಭದಲ್ಲಿ ಉಪನ್ಯಾಸಕ ಆರ್‌.ಮಣಿ, ಕರುಣಾಕರ ರೆಡ್ಡಿ, ಕೆಂಚಾರ‌್ಲಹಳ್ಳಿ ಸರಸ್ವತಿ ಶಾಲೆ ನಾರಾಯಣಸ್ವಾಮಿ, ಬಾಗೇಪ್ಪಲ್ಲಿ ವರದಾದ್ರಿ ಉಪನ್ಯಾಸಕ ಸುರೇಶ್‌, ಕಾಗತಿ ವೆಂಕಟೇಶ್‌, ಕರಿಯಪ್ಪಲ್ಲಿ ವೆಂಕಟೇಶ್ವರ ಶಾಲೆಯ ಎನ್‌. ರಮೇಶ್‌ ಕುಮಾರ್‌, ಊಲವಾಡಿ ಆದಿತ್ಯ ಶಾಲೆಯ ರಾಜಣ್ಣ, ಕಾಗತಿ ಮಂಜುನಾಥ್‌ ಸೇರಿದಂತೆ ಪದವೀಧರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next