ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಕೋವಿಡ್ ಸೋಂಕು ನಿಯಂತ್ರಿಸಲು ಜಿಲ್ಲಾಡಳಿತ ಒಂದಡೆ ಬಿಗಿ ಕ್ರಮ ಕೈಗೊಳ್ಳುತ್ತಿದ್ದರೇ ಮತ್ತೊಂದಡೆ ಪ್ರವಾಸಿಗರು ಕೋವಿಡ್ ಸೋಂಕು ನಿಯಂತ್ರಿಸಲು ಹೊರಡಿಸಿರುವ ಮಾರ್ಗಸೂಚನೆಗಳನ್ನು ಗಾಳಿಗೆ ತೂರಿ ಮೋಜು ಮಸ್ತಿಯಲ್ಲಿ ತೊಡಗಿದ್ದಾರೆ.
ಹೌದು ಚಿಕ್ಕಬಳ್ಳಾಪುರ ಜಿಲ್ಲೆ ಹೇಳಿ ಕೇಳಿ ಬರಪೀಡಿತ ಜಿಲ್ಲೆ ಇಲ್ಲಿ ಇತ್ತೀಚಿಗೆ ಸುರಿದ ಅಲ್ಪಪ್ರಮಾಣದ ಮಳೆಯಿಂದ ಕೆಲವೊಂದು ಕೆರೆಗಳು ತುಂಬಿ ತುಳಕಾಡಿ ಕೋಡಿ ಹರಿಯುತ್ತಿದೆ ಈ ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆ ಮಾತ್ರವಲ್ಲದೆ ಹೊರ ಜಿಲ್ಲೆಗಳ ಪ್ರವಾಸಿಗರು ಸಹಸ್ರಾರು ಸಂಖ್ಯೆಯಲ್ಲಿ ತುಂಬಿ ಕೋಡಿ ಹರಿಯುತ್ತಿರುವ ಕೆರೆಗಳು ಮತ್ತು ಡ್ಯಾಂಗಳತ್ತ ಮುಖ ಮಾಡಿದ್ದು ಪೋಲಿಸ್ ಇಲಾಖೆಯ ಅಧಿಕಾರಿಗಳು ಪ್ರವಾಸಿಗರನ್ನು ನಿಯಂತ್ರಿಸಲು ಹರಸಾಹಸ ಮಾಡುವಂತಾಗಿದೆ.
ಜಿಲ್ಲೆಯಲ್ಲಿ ಕುಡಿಯುವ ನೀರು ಸರಬರಾಜು ಮಾಡುವ ಶ್ರೀನಿವಾಸ್ ಸಾಗರ ಕೆರೆ ತುಂಬಿ ತುಳಕಾಡುತ್ತಿದೆ ಇಲ್ಲಿ ಸುಮಾರು 80 ಅಡಿಯಿಂದ ನೀರು ಧುಮುಕುತ್ತಿದ್ದು ಒಂದು ರೀತಿಯ ಜಲಪಾತದ ಅನುಭವವಾಗುತಿದ್ದು ಇದನ್ನು ನೋಡಲು ಜಿಲ್ಲೆಯ ನಾನಾ ಭಾಗಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಪ್ರವಾಸಿಗರು ಬಂದು ಆನಂದ ಮತ್ತು ಸಂಭ್ರಮದಲ್ಲಿ ತೇಲುವ ಭರದಲ್ಲಿ ಸಾಮಾಜಿಕ ಅಂತರವನ್ನು ಮರೆತು ಕೊರೊನಾ ಸೋಂಕು ಹರಡುವ ಕೇಂದ್ರವಾಗಿ ಪರಿವರ್ತನೆಗೊಂಡಿದೆ.
ವೀಕೆಂಡ್ ನಿರ್ಭಂಧ ಸಡಿಲ: ಜಿಲ್ಲೆಯಲ್ಲಿ ಬಹುತೇಕ ಪ್ರಮುಖ ಕೆರೆಗಳು ಮತ್ತು ಡ್ಯಾಂಗಳು ತುಂಬಿದ್ದು ಭದ್ರತಾ ದೃಷ್ಠಿಯಿಂದ ಮತ್ತು ಕೊರೊನಾ ಸೋಂಕು ನಿಯಂತ್ರಿಸಲು ಪೋಲಿಸ್ ಇಲಾಖೆಯ ಅಧಿಕಾರಿಗಳು ಪ್ರವಾಸಿಗರಿಗೆ ಪ್ರವೇಶವನ್ನು ನಿರ್ಬಧಿಸಿದರು ಆದರೇ ಪ್ರವಾಸಿಗರು ಪೋಲಿಸರ ಕಣ್ಣುತಪ್ಪಿಸಿ ಕೆರೆಗಳು ಮತ್ತು ಡ್ಯಾಂಗಳತ್ತ ಸಾಗಿ ಧುಮುಕುವ ನೀರಿನ ಆನಂದ ಪಡೆಯುವ ಭರದಲ್ಲಿ ಎಲ್ಲಾ ನಿಯಮಗಳನ್ನು ಗಾಲಿಗೆ ತೂರಿ ಜಿಲ್ಲೆಯಲ್ಲಿ ಕೋವಿಡ್ ಸೋಂಕು ಮತ್ತೊಮೆ ಭುಗಲೆದ್ದುವ ಆತಂಕ ಮನೆ ಮಾಡಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿಗಿರಿಧಾಮಕ್ಕೆ ವೀಕೆಂಡ್‍ನಲ್ಲಿ 15 ಸಾವಿರ ಪ್ರವಾಸಿಗರು ಬಂದಿದ್ದಾರೆ ಜೊತೆಗೆ ತುಂಬಿರುವ ಕೆರೆ ಕುಂಟೆಗಳ ಜನಸಂದಣಿ ಹೆಚ್ಚಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿದ್ದೇವೆ ಮಾಸ್ಕ್ ಧರಿಸಿ ಸಾಮಾಜಿಕ ಅಂತರವನ್ನು ಕಾಯ್ದಕೊಳ್ಳದ ಪ್ರವಾಸಿಗರಿಂದ ದಂಡ ವಸೂಲಿ ಮಾಡಿದ್ದೇವೆ ಆದರೂ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ ಕೊರೊನಾ ಸೋಂಕು ನಿಯಂತ್ರಿಸಲು ಮತ್ತಷ್ಟು ಕಠಿಣ ಕ್ರಮಗಳನ್ನು ಕೈಗೊಳ್ಳುತ್ತೇವೆ.
ಆರ್.ಲತಾ ಜಿಲ್ಲಾಧಿಕಾರಿ
ಜಿಲ್ಲೆಯಲ್ಲಿ ಕೋವಿಡ್ ಸೋಂಕು ನಿಯಂತ್ರಿಸಲು ಎಲ್ಲಾ ಇಲಾಖೆಯ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ ಕೆರೆ-ಕುಂಟೆಗಳು ಮತ್ತು ಡ್ಯಾಂಗಳ ಬಳಿ ಬ್ಯಾರೇಕೇಡ್ ಹಾಕಿ ಪ್ರವಾಸಿಗರನ್ನು ನಿಯಂತ್ರಿಸಲು ಕೆಲಸವನ್ನು ಮಾಡಿದ್ದೇವೆ ಸರ್ಕಾರದ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಲು ನಿರ್ದೇಶನ ನೀಡಿದ್ದೇನೆ ಜೊತೆಗೆ ನಾಗರಿಕರಲ್ಲಿ ಅರಿವು ಮತ್ತು ಜಾಗೃತಿ ಮೂಡಿಸಿದ್ದೇವೆ ನಾಗರಿಕರು ಸಹಕರಿಬೇಕಾಗಿದೆ.
ಮಿಥುನ್‍ಕುಮಾರ್ ಎಸ್ಪಿ ಚಿಕ್ಕಬಳ್ಳಾಪುರ
ಜಿಲ್ಲೆಯಲ್ಲಿ ಶ್ರೀನಿವಾಸ್‍ಸಾಗರ ಕೆರೆ ಸೇರಿದಂತೆ ಸುಮಾರು 30 ಕೆರೆ ತುಂಬಿದೆ ಸಾಮಾನ್ಯವಾಗಿ ತುಂಬಿ ಕೋಡಿ ಹರಿಯುತ್ತಿರುವ ಕೆರೆಗಳನ್ನು ನೋಡಲು ಸ್ಥಳೀಯ ಹೋಗುತ್ತಿದ್ದಾರೆ ಆದರೂ ಸಹ ಜಿಲ್ಲಾಡಳಿತ,ಪೋಲಿಸ್ ಇಲಾಖೆ ಭದ್ರತಾ ವ್ಯವಸ್ಥೆಯನ್ನು ಮಾಡಿದೆ ಸಾರ್ವಜನಿಕರು ಸಹ ತಮ್ಮ ಆರೋಗ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಜಿಲ್ಲಾಡಳಿತದೊಂದಿಗೆ ಸಹಕರಿಸಬೇಕು
ನರೇಂದ್ರ ಕಾರ್ಯಪಾಲಕ ಅಭಿಯಂತರ ಸಣ್ಣ ನೀರಾವರಿ ಇಲಾಖೆ