Advertisement

ಬಿಜೆಪಿಯಿಂದ ಪೂರ್ಣಾವಧಿ ಆಡಳಿತ

09:47 PM Sep 21, 2019 | Team Udayavani |

ಕೊಳ್ಳೇಗಾಲ: ಬಿ.ಎಸ್‌.ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರ ತನ್ನ ಅವಧಿಯನ್ನು ಪೂರೈಸಿ ಉತ್ತಮ ಆಡಳಿತವನ್ನು ನೀಡಲಿದೆ ಎಂದು ಸಂಸದ ವಿ.ಶ್ರೀನಿವಾಸ್‌ ಪ್ರಸಾದ್‌ ಶನಿವಾರ ಹೇಳಿದರು.

Advertisement

ಪಟ್ಟಣದ ಲೋಕೋಪಯೋಗಿ ಇಲಾಖೆಯ ವಸತಿ ಗೃಹದಲ್ಲಿ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ನೆನ್ನೆಯಷ್ಟೆ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿರವರು ಶ್ರೀಘ್ರದಲ್ಲಿ ವಿಧಾನಸಭಾ ಚುನಾವಣೆ ಬರಲಿದೆ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ಮಾಜಿ ಮುಖ್ಯಮಂತ್ರಿಗಳಿಗೆ ಕನಸು ಬಿದ್ದಿರಬೇಕು. ಅದಕ್ಕಾಗಿ ಆ ರೀತಿ ಹೇಳಿದ್ದಾರೆಂದು ಲೇವಡಿ ಮಾಡಿದರು.

ರಾಜ್ಯದಲ್ಲಿ ಹಲವಾರು ಶಾಸಕರು ರಾಜೀನಾಮೆ ನೀಡಿ ಅವರ ಪ್ರಕರಣವು ಸುಪ್ರೀಂಕೋರ್ಟ್‌ನಲ್ಲಿ ನಡೆಯುತ್ತಿದೆ. ಅವರ ತೀರ್ಪು ಹೊರ ಬೀಳುತ್ತಿದ್ದಂತೆ ಮುಖ್ಯಮಂತ್ರಿ ಯಡಿಯೂರಪ್ಪರವರು ಮತ್ತಷ್ಟು ಯೋಜನೆಗಳನ್ನು ರೂಪಿಸಿ ಜನರಿಗೆ ಸೌಕರ್ಯ ಕಲ್ಪಿಸಿಕೊಡುತ್ತಾರೆ ಎಂದರು.

ಇತ್ತೀಚೆಗೆ ಪಟ್ಟಣದ ಬೀರೇಶ್ವರ ಸಮುದಾಯ ಭವನ ನಿರ್ಮಾಣಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯರವರು ಆಗಮಿಸಿದ್ದ ವೇಳೆ ರಾಜ್ಯದಲ್ಲಿ ನೆರೆ ಹಾವಳಿಯಲ್ಲಿ ನೊಂದವರಿಗೆ ಕೇಂದ್ರ ಸರ್ಕಾರದಿಂದ ಪರಿಹಾರವನ್ನು ತಂದುಕೊಡುವಲ್ಲಿ ರಾಜ್ಯದ ಬಿಜೆಪಿ 25 ಸಂಸದರು ವಿಫ‌ಲರಾಗಿದ್ದಾರೆಂದು ದೂರಿನ ಬಗ್ಗೆ ಪ್ರಶ್ನಿಸಿದಾಗ ಮಾತನಾಡಿದ ಅವರು ಈಗಾಗಲೇ ಮುಖ್ಯಮಂತ್ರಿಗಳು ನೆರೆ ಹಾವಳಿಯಿಂದ 58 ಸಾವಿರ ಕೋಟಿ ನಷ್ಟವಾಗಿರುವ ಬಗ್ಗೆ ಅಂದಾಜು ವೆಚ್ಚ ತಯಾರಿಸಿ ನೀಡಿದ್ದಾರೆ.

ಅವರ ಜತೆಯಲ್ಲಿ ಕೃಷಿ ಸಚಿವರು ತೆರಳಿ ಪರಿಹಾರ ಕೇಳುತ್ತಾರೆ. ಪ್ರಧಾನಿ ನರೇಂದ್ರ ಮೋದಿಯವರು ಸಂಸದರ ಸಭೆ ಕರೆದ ಪಕ್ಷದಲ್ಲಿ ನಾವು ಕೇಳುತ್ತೇವೆಂದು ಪ್ರತಿಕ್ರಿಯಿಸಿದರು. ಮಾಜಿ ಶಾಸಕರಾದ ಜಿ.ಎನ್‌.ನಂಜುಂಡಸ್ವಾಮಿ, ಗುರುಸ್ವಾಮಿ, ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸದಸ್ಯ ಮಾಂಬಳ್ಳಿ ನಂಜುಂಡಸ್ವಾಮಿ, ಮಾನಸ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ. ದತ್ತೇಶ್‌, ಜಿಪಂ ಸದಸ್ಯ ನಾಗರಾಜು, ನಗರಸಭಾ ಸದಸ್ಯರಾದ ಕವಿತಾ, ಜಿ.ಪಿ.ಶಿವಕುಮಾರ್‌, ನಾಗೇಂದ್ರ, ಇತರರು ಇದ್ದರು.

Advertisement

ಸಾಂಪ್ರದಾಯಿಕ ದಸರಾಗೆ ಮನವಿ: ನೆರೆ ಹಾವಳಿಯಿಂದ ಸುಮಾರು 22 ಜಿಲ್ಲೆಗಳಲ್ಲಿ ಅಪಾರ ಆಸ್ತಿಪಾಸ್ತಿಗಳು ನಷ್ಟ ಉಂಟಾಗಿದೆ. ಇದರಿಂದ ರಾಜ್ಯದ ಜನರು ನೊಂದಿದ್ದಾರೆ. ಅವರಿಗೆ ಸೂಕ್ತ ಪರಿಹಾರ ಸಿಗಬೇಕು. ಅಪಾರ ಜನರು ತೊಂದರೆಗೆ ಒಳಗಾಗಿರುವ ಹಿನ್ನಲೆಯಲ್ಲಿ ದಸರಾ ಹಬ್ಬವನ್ನು ಸರಳವಾಗಿ ಆಚರಿಸಬೇಕು ಮತ್ತು ಸಂಪ್ರದಾಯಿಕ ದಸರಾ ನಡೆಸುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿರುವುದಾಗಿ ಹೇಳಿದರು.

ದಸರಾ ಉಸ್ತುವಾರಿಯನ್ನು ಸಚಿವ ವಿ.ಸೋಮಣ್ಣರವರಿಗೆ ವಹಿಸಲಾಗಿದ್ದು, ಅವರು ಯಾರನ್ನು ಕಡೆಗಣಿಸದೆ ಕೆಲಸ ನಿರ್ವಹಿಸುತ್ತಿದ್ದು, ಈ ಬಾರಿಯ ದಸರಾ ಅತ್ಯಂತ ಅದ್ಧೂರಿಯಿಂದ ಮಾಡದೆ ಸಂಪ್ರದಾಯಿಕ ದಸರಾ ಜರುಗಲಿದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next