Advertisement

ಭಾರತದಲ್ಲಿ ಲಂಕಾ ಸರಣಿ

06:40 AM Oct 03, 2017 | Team Udayavani |

ಹೊಸದಿಲ್ಲಿ: ವರ್ಷಾಂತ್ಯ ಭಾರತಕ್ಕೆ ಪ್ರವಾಸ ಕೈಗೊಳ್ಳಲಿರುವ ಶ್ರೀಲಂಕಾ ಕ್ರಿಕೆಟ್‌ ತಂಡ ಪೂರ್ಣ ಪ್ರಮಾಣದ ಸರಣಿಯಲ್ಲಿ ಪಾಲ್ಗೊಳ್ಳಲಿದೆ. ಸರಣಿಯಲ್ಲಿ 3 ಟೆಸ್ಟ್‌, 3 ಏಕದಿನ ಹಾಗೂ 3 ಟಿ-20 ಪಂದ್ಯಗಳನ್ನು ಆಡಲಾಗುವುದು. ಬಿಸಿಸಿಐ ಈ ವೇಳಾಪಟ್ಟಿಯನ್ನು ಅಂತಿಮಗೊಳಿಸಿದರೂ ಇದನ್ನು ಅಧಿಕೃತವಾಗಿ ಪ್ರಕಟಿಸಿಲ್ಲ.

Advertisement

ಸರಣಿಯ 3 ಟೆಸ್ಟ್‌ ಪಂದ್ಯಗಳನ್ನು ಕೋಲ್ಕತಾ (ನ. 16-20), ನಾಗ್ಪುರ (ನ. 24-28) ಮತ್ತು ಹೊಸದಿಲ್ಲಿಯಲ್ಲಿ (ಡಿ. 2-6) ಆಡಲಾಗುವುದು. ಅನಂತರ ಧರ್ಮಶಾಲಾ (ಡಿ. 10), ಮೊಹಾಲಿ (ಡಿ. 13) ಮತ್ತು ವಿಶಾಖಪಟ್ಟಣದಲ್ಲಿ (ಡಿ. 17) ಏಕದಿನ ಪಂದ್ಯಗಳು ನಡೆಯಲಿವೆ. ಕಟಕ್‌ (ಡಿ. 20), ಇಂದೋರ್‌ (ಡಿ. 22) ಮತ್ತು ಮುಂಬಯಿಗೆ (ಡಿ. 24) ಟಿ-20 ಪಂದ್ಯಗಳ ಆತಿಥ್ಯ ಲಭಿಸಿದೆ ಎಂದು ಮೂಲವೊಂದರಿಂದ ತಿಳಿದು ಬಂದಿದೆ.

ಇದು ಭಾರತ-ಶ್ರೀಲಂಕಾ ನಡುವೆ ಕೆಲವೇ ತಿಂಗಳ ಅಂತರದಲ್ಲಿ ನಡೆಯಲಿರುವ 2ನೇ ದ್ವಿಪಕ್ಷೀಯ ಕ್ರಿಕೆಟ್‌ ಸರಣಿ ಆಗಿದೆ. ಜುಲೈ-ಆಗಸ್ಟ್‌ನಲ್ಲಿ ಲಂಕೆಗೆ ತೆರಳಿದ್ದ ಭಾರತ 9- 0 ಕ್ಲೀನ್‌ಸ್ವೀಪ್‌ ಸಾಧನೆಗೈದಿತ್ತು.

Advertisement

Udayavani is now on Telegram. Click here to join our channel and stay updated with the latest news.

Next