ರಾಮನಗರ: ಶಕ್ತಿ ಯೋಜನೆಯ ಉಚಿತ ಪ್ರಯಾಣದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಕೆಎಸ್ಆರ್ ಟಿಸಿ ಬಸ್ ಗಳು ತುಂಬಿ ತುಳುಕುತ್ತಿವೆ. ಹೀಗಾಗಿ ಬಸ್ ಇಲ್ಲದೇ ಶಾಲಾ ಮಕ್ಕಳು ಪರದಾಟ ನಡೆಸುವಂತಾಗಿದೆ.
ಮಾಗಡಿ ತಾಲೂಕಿನ ನೇತೇನಹಳ್ಳಿ ಗ್ರಾಮದಲ್ಲಿ ಜನರು ಬಸ್ ತಡೆದು ಪ್ರತಿಭಟನೆ ನಡೆಸಿದ್ದಾರೆ.
ಶಕ್ತಿ ಯೋಜನೆ ಜಾರಿಯಾದಾಗಿದ್ದಾಗಿನಿಂದ ವಿದ್ಯಾರ್ಥಿಗಳು ಬಸ್ಸಿಲ್ಲದೆ ಪರದಾಡುತ್ತಿದ್ದಾರೆ. ರಾಮನಗರ – ಏಳಗೇಹಳ್ಳಿ ಮಾರ್ಗದಲ್ಲಿ ಶಾಲಾ ಸಮಯದಲ್ಲಿ ಸಂಚರಿಸುವ ಏಕೈಕ ಬಸ್ ನಲ್ಲಿ ಇಂದು ಸಿಬ್ಬಂದಿ 120 ಕ್ಕೂ ಹೆಚ್ಚು ಜನರನ್ನು ಹತ್ತಿಸಿಕೊಂಡಿದ್ದಾರೆ. ಇದರಿಂದ ರೋಸಿಹೋದ ನೇತೇನಹಳ್ಳಿ ಗ್ರಾಮಸ್ಥರು ಕೆಎಸ್ಆರ್ ಟಿಸಿ ಸಿಬ್ಬಂದಿಗಳಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ.
ಇದನ್ನೂ ಓದಿ:Seema Haider: ಸಚಿನ್-ಸೀಮಾ ಹೈದರ್ ವಿವಾಹವಾಗಲು ನೆರವಾಗಿದ್ದ ಇಬ್ಬರನ್ನು ಬಂಧಿಸಿದ ಪೊಲೀಸರು
ಮಾಗಡಿ ಡಿಪೋ ಮ್ಯಾನೇಜನರ್, ತಹಶೀಲ್ದಾರ್ ಸ್ಥಳಕ್ಕೆ ಬರುವಂತೆ ಗ್ರಾಮಸ್ಥರು ಪಟ್ಟು ಹಿಡಿದರು. ಬಳಿಕ ದೂರವಾಣಿ ಮೂಲಕ ತಹಶೀಲ್ದಾರ್ ಅವರು ಸಮಸ್ಯೆ ಬಗೆಯರಿಸುವುದಾಗಿ ಭರವಸೆ ನೀಡಿದರು.