Advertisement

8 ತಿಂಗಳಲ್ಲಿ 12 ಹೈ ಸ್ಪೀಡ್‌ ಕಾರಿಡಾರ್‌ ಪೂರ್ಣ

01:37 PM May 27, 2021 | Team Udayavani |

ಬೆಂಗಳೂರು: ನಗರದಲ್ಲಿ ವಾಹನ ಸಂಚಾರದಟ್ಟಣೆ ನಿಯಂತ್ರಿಸಲು 12 ಹೈಸ್ಪೀಡ್‌ ಕಾರಿಡಾರ್‌ಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದು,ಮುಂದಿನ ಎಂಟು ತಿಂಗಳ ಅವಧಿಯಲ್ಲಿ ಈಕೆಲಸ ಪೂರ್ಣಗೊಳ್ಳಲಿದೆ ಎಂದು ಗೃಹ ಸಚಿವಬಸವರಾಜ ಬೊಮ್ಮಾಯಿ ಹೇಳಿದರು.

Advertisement

ನಗರ ಸಂಚಾರ ಪೊಲೀಸ್‌ ವಿಭಾಗ ಬುಧವಾರಖಾಸಗಿ ಕಂಪೆನಿಗಳ ಸಹಯೋಗದಲ್ಲಿ ನಗರದಟೌನ್‌ ಹಾಲ್‌ ನಲ್ಲಿ ಹಮ್ಮಿಕೊಂಡಿದ್ದ ಸಂಚಾರಪೊಲೀಸರಿಗೆ ರೈನ್‌ ಕೋಟ್‌ ,ಮಾಸ್ಕ್, ಫೇಸ್‌ಶೀಲ್ಡ್  ವಿತರಣೆ ಹಾಗೂ ಮೊಬೈಲ್‌ ವೇರಿಯಬಲ್‌ ಮೆಸೇಜಿಂಗ್‌ ಸಿಸ್ಟಂಗಳನ್ನುವಿತರಿಸಿ ಮಾತನಾಡಿದರು.

ಠಾಣೆಗಳ ಆಧುನೀಕರಣ: ನಗರ ಪೊಲೀಸ್‌ಆಯುಕ್ತ ಕಮಲ್‌ಪಂತ್‌ ನೇತೃತ್ವದಲ್ಲಿಬೆಂಗಳೂರಿನ ಪೊಲೀಸ್‌ ಠಾಣೆಗಳ ಆಧುನಿಕರಣಕೆಲಸ ನಡೆಯುತ್ತಿದೆ. ಪೊಲೀಸ್‌ ಠಾಣೆಗಳಪುನಾರಚನೆಗೆ ಸಂಬಂಧ ವರದಿ ನೀಡುವಂತೆನಗರ ಪೊಲೀಸ್‌ ಆಯುಕ್ತರಿಗೆ ಸೂಚಿಸಲಾಗಿದೆ.ವರದಿ ಬಂದ ಬಳಿಕ ಸೇರ್ಪಡೆಯಾಗಿರುವಪ್ರದೇಶಗಳನ್ನು ಗುರುತಿಸಿ ಸಂಬಂಧಿಸಿದಪೊಲೀಸ್‌ ಠಾಣೆಗಳಿಗೆ ಸೇರಿಸಿ ಪುನಾರಚಿಸಲಾಗುವುದು ಎಂದರು.

ಬಿಎಂಆರ್‌ ಸಿಎಲ್‌ ವ್ಯವಸ್ಥಾಪಕ ನಿರ್ದೇಶಕರಾಕೇಶ್‌ ಸಿಂಗ್‌, ಬೆಂಗಳೂರು ನಗರ ಪೊಲೀಸ್‌ಆಯುಕ್ತ ಕಮಲ್‌ ಪಂತ್‌, ನಗರ ಸಂಚಾರ ವಿಭಾಗದಜಂಟಿ ಪೊಲೀಸ್‌ ಆಯುಕ್ತ ಡಾ. ಬಿ.ಆರ್‌.ರವಿಕಾಂತೇಗೌಡ, ಎಂಬೆಸ್ಸಿ ಕಂಪನಿಯ ವೆಂಕಟೇಶ್‌,ಆಕr… ಇಂಟರ್‌ ನೆಟ್‌ ಕಂಪನಿಯ ಸಿಇಓ ಬಾಲಮಲ್ಲಾಡಿ ಹಾಗೂ ಸಂಚಾರ ವಿಭಾಗದ ಹಿರಿಯಪೊಲೀಸ್‌ ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next