Advertisement

ಹೊಟ್ಟೆ ತುಂಬ ಊಟ, ಬೇಗ ಹೋದೋರಿಗೆ ಮಾತ್ರ!

03:59 PM Jan 07, 2017 | |

ಚಾಮರಾಜಪೇಟೆಯ 2ನೇ ಮೇಯ್ನ ಹೀಗಂದರೆ ಅಡ್ರಸ್‌ ಹುಡುಕೋದು ಕಷ್ಟವಾಗಬಹುದು. ಅದೇ ಗೂಡ್‌ಷೆಡ್‌ ರೋಡಲ್ಲಿ ಬಾಟಾ ಷೋ ರೂಂ ಎದುರು ರಸ್ತೆ ಅಂತನ್ನಿ. ನಿಮಗೆ ಗೊತ್ತಿಲ್ಲದೇ ಹೆಜ್ಜೆ ಹಾಕುತ್ತಿರುತ್ತೀರಿ. ಅದೇ ದಾರಿಯಲ್ಲಿ ಹಾಗೇ ಹೋಗುತ್ತಿದ್ದರೆ ಎಡಭಾಗದಲ್ಲಿ ಶ್ರೇಯಸ್‌Õ ಪಾಲಿ ಕ್ಲೀನಿಕ್‌ ಸಿಗುತ್ತದೆ. ಚೂರು ಮುಂದೆ ಹೋದರೆ ಒಂದಷ್ಟು ತಲೆ ತಗ್ಗಿಸಿಕೊಂಡ ಏನೋ ತಿನ್ನುತ್ತಿರುವ ಗುಂಪು ನೋಡುತ್ತೀರಿ. ನಿಜ, ಅದೇ ಮೆಸ್‌. ರೊಟ್ಟಿ ಮನೆ ಅಂತ. ಹಾಗಂತ ಇಲ್ಲಿ ಬೋರ್ಡ್‌ ಎಲ್ಲಿದೆ ಅಂತ ಹುಡುಕಬೇಡಿ. ಹಸರು ಬಿಲ್ಡಿಂಗ್‌ ಮೇಲಿಲ್ಲ. ಇಲ್ಲಿನ ಸುತ್ತಮುತ್ತ ಜನರ ಮನಸ್ಸಿನಲ್ಲಿದೆ.  ಬೋರ್ಡಿಲ್ಲವಾದ್ದರಿಂದ ಹೊಸದಾಗಿ ಬಂದೋರಿಗೆ ಹುಡುಕೋದು ಕಷ್ಟ. ಮಧ್ಯಾಹ್ನ 12ರ ನಂತರ ಬೇಗ ಹುಡುಕಬಹುದು. ಏಕೆಂದರೆ ಮೆಸ್‌ ತೆರೆಯುವುದು ಆಗಲೇ. 12ರಿಂದ 3.30ರತನಕ ಮೆಸ್‌ ಚಾಲೂ ಇರುತ್ತದೆ.  “ಬಿಡ್ರೀ.. ಮೂರೂವರೆ ತನಕ ಟೈಂ ಇದೆಯಲ್ಲಾ ‘ ಅಂತ ಕಾಲ ಕಳೆಯುವ ಹಾಗಿಲ್ಲ. ಮೆಸ್‌ನ ಮೆಹನತ್ತೇ ಅದು.  ಊಟ ಕಾಲಿಯಾದರೆ ಮತ್ತೆ ಇಲ್ಲಿ ಅಡುಗೆ ಮಾಡಿ ಬಡಿಸೋಲ್ಲ. ಮಾಡಿದ್ದು ಒಂದೇ ಸಾಲ. ಮಾರೋದು ಒಂದೇ ಸಲ. ಪದೇ ಪದೇ ಮಾಡೋದು, ಇಲ್ಲವೇ ಉಳಿದ ಸಾರಿಗೆ ಇನ್ನೊಂದಷ್ಟು ನೀರು, ಮೆಣಸಿನಪುಡಿ ಬೆರಸಿ ಮತ್ತೂಂದಷ್ಟು ಜನಕ್ಕೆ ಊಟಕ್ಕೆ ಹಾಕಿ ದುಡ್ಡು ಮಾಡೋದು ಇಲ್ಲಿ ಇಲ್ಲವೇ ಇಲ್ಲ.  ಫ‌ಸ್ಟ್‌ ಕಮ್‌ ಫ‌ುಲ್‌ ಫ‌ುಡ್‌ ಅನ್ನೋದು ಮೆಸ್‌ನ ತತ್ವ. ಅದಕ್ಕೆ ಲೇಟು ಮಾಡದೇ ಬೇಗ ಹೋದರೆ ಭರ್ತಿ ಊಟ ನಿಮ್ಮದಾಗುತ್ತದೆ.

Advertisement

ಅನ್ನ ತಿಳಿಸಾರು, ಹುಳಿ, ಅದಕ್ಕೆ ಬಜ್ಜಿ ಅಥವಾ ಬೊಂಡಾ.. ಹುಳಿ, ಸಾರುಗಳ ಟೇಸ್ಟಲ್ಲಿ ಯಾವುದೇ ರಾಜಿ ಇಲ್ಲ. ತರಕಾರಿ ಹುಳಿ, ಚಿಕ್ಕದಾಗಿ ಹೆಚ್ಚಿ ಹಾಕಿರುವ ದಂಟಿನ ಸೊಪ್ಪು ಹುಳಿ, ಅದರಲ್ಲಿ ಹೆಕ್ಕಳಿಕೆ, ಹೆಕ್ಕಳಿಕೆಯಾಗಿ ಸಿಗುವ ಕೊಬರಿ ಚೂರುಗಳು ಒಂಥರ ವಿಭಿನ್ನ ರುಚಿಗೆ ಕಾರಣವಾಗುತ್ತದೆ. ಕೂಟು, ಮಜ್ಜಿಗೆ ಹುಳಿಗಳು ವಾರದಲ್ಲಿ ಒಂದಷ್ಟು ದಿನ ಅತಿಥಿಗಳಾಗಿ ಬಂದು ಹೋಗುತ್ತವೆ. ಉಪ್ಪಿನಕಾಯಿ ಕೂಡ ಹೋಮ್‌ ಮೇಡ್‌. ಅದರಲ್ಲೂ ಸೊಪ್ಪಿನ ಹುಳಿಗೆ ಬಡಿಸೋ ನಿಂಬೆ ಉಪ್ಪಿನಕಾಯಿ ಟೇಸ್ಟೇ ಬೇರೆ. ಹುಳಿ, ಸಾರು ಏಕೆ ಇಷ್ಟೊಂದು ಟೇಸ್ಟು? ಗುಟ್ಟೇ ಬೇರೆ. ಹುಳಿ, ಸಾರಿಗೆ ಚೂರು ಬೆಲ್ಲ ಕೂಡ ಸೇರಿಸುವುದರಿಂದ, ಚೂರು ಇಂಗು ಹೆಚ್ಚಿರುವುದರಿಂದ ನಾಲಿಗೆಯ ಮೇಲೆ ರುಚಿ ಹೆಪ್ಪುಗಟ್ಟುತ್ತದೆ. ಅಂದರೆ ಅಪ್ಪಟ ಮಾಧ್ವ ಮನೆಯ ಊಟ ಇದು. ನಿಮಗೆ ಮಠಮಾನ್ಯಗಳ ಊಟ ನೆನೆಪಿಗೆ ಬಂದರೂ ಆಶ್ಚರ್ಯವಿಲ್ಲ.

ಅನ್ನಸಾರು ಬೇಜಾರಾಯ್ತು. ಚಿಂತೆ ಇಲ್ಲ. ಚಪಾತಿ, ಜೋಳದ ರೊಟ್ಟಿಯೂ ಸಿಗುತ್ತದೆ. ಜೋಳದ ರೊಟ್ಟಿ ಊಟವೂ ಉಂಟು. ಪಕ್ಕಾ ಉತ್ತರ ಕರ್ನಾಟಕ ಶೈಲಿಯ ರೊಟ್ಟಿ ಇದು. ತೆಳ್ಳಗೆ ಎರಡು ಕೈಯಗಲದ ರೊಟ್ಟಿಗೆ ಎರಡು ರೀತಿ ಪಲ್ಯಗಳು ಕೊಡ್ತಾರೆ. ಎಣ್‌¡ಗಾಯಿ, ಬೇಯಿಸಿದ ಆಲುಗಡ್ಡೆ ಸುಲಿದು, ಕಡಲೆ ಹಿಟ್ಟು ಬೆರೆಸಿ ಈರುಳ್ಳಿ ಒಗ್ಗರಣೆ ಹಾಕಿದ ಜುಲ್ಕ ಬಾಯಲ್ಲಿ ನೀರು ಬರಿಸುತ್ತದೆ ನೋಡಿ. ಪ್ರತಿದಿನ ಒದೊಂದು ಸಬ್ಜಿಗಳು. ಯಾವುದಕ್ಕೂ ಬೆಳ್ಳುಳ್ಳಿ ಹಾಕಲ್ಲ. ಸೋಡ ಬೆರೆಸೋಲ್ಲ. ಹಾಗಾಗಿ ಊಟ ಮಾಡಿದರೆ ಮನೆಯ ಊಟದ ಸ್ವಾದ ಜೊತೆಗೆ ಹೊಟ್ಟೆ ಭಾರ ಆಗದೇ ಇರೋದು ಬೋನಸ್‌.  ಒಂದು ಪಕ್ಷ ಅನ್ನ ಸಾರು, ರೊಟ್ಟಿನೂ ಬೇಜಾರು ಆಯ್ತಪ್ಪಾ.. ಅದಕ್ಕೂ ಚಿಂತೆ ಬೇಡ. ಪ್ರತಿ ದಿನ ವೆರೀಟಿ ರೈಸ್‌ಬಾತ್‌ಗಳಿ ಸಿಗುತ್ತವೆ. ಚಿತ್ರಾನ್ನ, ಫ‌ಲಾವ್‌, ಬೇಳೆಬಾತ್‌ ಹೀಗೆ ವಾರದ ಅಷ್ಟೂ ದಿನಕ್ಕೂ ಅಷ್ಟಷ್ಟು ರೈಸ್‌ಗಳು. 

ಒಂದು ವಿಚಾರ ಗೊತ್ತಿರಲಿ. ಸದ್ಯಕ್ಕೆ ಈ ಮೆಸ್‌ ಮಧ್ಯಾಹ್ನ ಮಾತ್ರ ತೆರೆದಿರುತ್ತದೆ. ಇನ್ನು ಮುಂದೆ ರಾತ್ರಿಯೂ ಊಟ ಕೊಡುವ ಯೋಜನೆ ಇದೆ. ಇದಕ್ಕೂ ಮೊದಲು ಸಂಜೆ ವೇಳೆ ಬಿಸಿ,ಬಿಸಿ ಮಿರ್ಚಿ ಮಂಡಕ್ಕಿ, ಗಿರ್ಮಿಟ್ಟು, ಪಕೋಡ ಮಾರಾಟ ಶುರುಮಾಡಲಿದ್ದಾರಂತೆ. 

“ಒಂದು ಸಲ ಅಡುಗೆ ಮಾಡಿದರೆ ಮುಗೀತು. ಮತ್ತೆ, ಮತ್ತೆ ಮಾಡೋಲ್ಲ. ಲಿಮಿಟೆಡ್‌ ಊಟ. ನಾವು ಎಷ್ಟು ಮಾರ್ತೀವಿ ಅನ್ನೋದು ಮುಖ್ಯ ಅಲ್ಲ. ಕ್ವಾಲಿಟಿ ಊಟ ಎಷ್ಟು ಕೊಟ್ಟಿದ್ದೇವೆ ಅನ್ನೋದು ಬಹಳ ಮುಖ್ಯ. ಅದಕ್ಕೆ ಒಂದು ಸಲ ಒಂದು ಐಟಂ ಕಾಲಿ ಆದರೆ ಮತ್ತೆ ಮಾಡಿ ಬಡಿಸೋಲ್ಲ ‘ ಅಂತರೆ ಮೆಸ್‌ ಮಾಲೀಕರಾದ ರಘು.

Advertisement

ನಿಮಗೂ ಚಾಮರಾಜಪೇಟೆ ಎರಡನೇ ಮೇಯ್ನಗೆ ಕಾಲಿಟ್ಟರೆ ಹೊಟ್ಟೆ ಚುರು, ಚುರು ಅಂದರೆ. ಡೋಂಟ್‌ ಮಿಸ್‌. ದಿಸ್‌ ಮೆಸ್‌. 
ಮೊಬೈಲ್‌ ನಂಬರ್‌-9945766253

Advertisement

Udayavani is now on Telegram. Click here to join our channel and stay updated with the latest news.

Next