ಬ್ರಿಟನ್ ದೊರೆಯಾಗಿ ಮೂರನೇ ಚಾರ್ಲ್ಸ್ ಪಟ್ಟಾಭಿಷಿಕ್ತರಾದ ಕಾರ್ಯಕ್ರಮದಲ್ಲಿ ಧನ್‌ಕರ್ ಪಾಲ್ಗೊಂಡಿದ್ದರು. ಈ ವೇಳೆ ಬ್ರಿಟನ್‌ನಿಂದ ವಾಪಸಾಗುವ ಮುನ್ನ ಭಾರತೀಯ ಹೈಕಮಿಷನ್ ವತಿಯಿಂದ ಆಯೋಜಿಸಲಾಗಿದ್ದ ಭಾರತೀಯ ಮೂಲದ ಬ್ರಿಟನ್ನಿಗರೊಂದಿಗಿನ ಸಂವಾದ ನಡೆಸಿದರು.
Advertisement
ಬ್ರಿಟನ್‌ನಲ್ಲಿರುವ ಭಾರತೀಯ ಮೂಲದ ಪ್ರಜೆಗಳ ಮಹತ್ತರ ಪಾತ್ರವನ್ನುದ್ದೇಶಿಸಿ ಮಾತನಾಡಿದ ಅವರು ಬ್ರಿಟನ್ ವಿ.ವಿ.ಗಳಲ್ಲಿ ವಿದ್ಯಾಭ್ಯಾಸ ನಡೆಸುತ್ತಿರುವ ಭಾರತೀಯ ವಿದ್ಯಾ ರ್ಥಿಗಳು ಮತ್ತು ಅವರ ಸಾಧನೆಗಳ ಬಗ್ಗೆ ದೇಶ ಹಮ್ಮೆಪಡು ತ್ತದೆ. ಭಾರತದ ಸದ್ಭಾವನ ರಾಯ ಭಾರಿಗಳಾಗಿ ನೀವೇ ಕಾರ್ಯನಿರ್ವಹಿಸಬೇಕಿದ್ದು, ಭಾರತದ ಬಗ್ಗೆಗಿನ ವದಂತಿಗಳಿಗೆ ಸ್ಪಷ್ಟವಾದ ಉತ್ತರ ನೀಡಿ ಎಂದು ಧನ್‌ಕರ್ ಕರೆ ನೀಡಿದ್ದಾರೆ.