Advertisement

ಭಜನೆಯಿಂದ ಫಲಪ್ರಾಪ್ತಿ: ಮಹಾಬಲ ಸ್ವಾಮೀಜಿ

12:30 AM Feb 14, 2019 | Team Udayavani |

ಮಲ್ಪೆ: ಭಕ್ತಿ ಭಾವದಿಂದ ಭಜನೆಯನ್ನು ದೇವರಿಗೆ ಸಮರ್ಪಣೆ ಮಾಡಿದಾಗ ಅನಂತ ಫಲ ಪ್ರಾಪ್ತಿಯಾಗುತ್ತದೆ ಎಂದು ಕನ್ಯಾನ ಕಣಿಯೂರು ಚಾಮುಂಡೇಶ್ವರಿ ದೇವಿ ಕ್ಷೇತ್ರದ ಮಹಾಬಲ ಸ್ವಾಮೀಜಿ ಹೇಳಿದರು.

Advertisement

ಅವರು ಬುಧವಾರ ಮಲ್ಪೆ ಕಡಲ ತೀರ ಶ್ರೀ ಜ್ಞಾನಜ್ಯೋತಿ ಭಜನಾ ಮಂದಿರದ 43ನೇ ವಾರ್ಷಿಕ ಮಂಗಲ, 10ನೇ ವರ್ಷದ ಅಖಂಡ ಭಜನಾ ಸಪ್ತಾಹದ ಮಹಾಮಂಗಲ, ಸಾರ್ವಜನಿಕ ಸತ್ಯ ನಾರಾಯಣ ಪೂಜೆಯ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.

ಕುಟುಂಬಗಳ ವಿಭಜನೆಯಿಂದ ಇಂದು ಮಕ್ಕಳಿಗೆ ಸಂಸ್ಕಾರಗಳು ಸಿಗುತ್ತಿಲ್ಲ. ಮಕ್ಕಳಲ್ಲಿ ಮಾನವೀಯ ಮೌಲ್ಯಗಳು ನಶಿಸುತ್ತಿವೆ, ಮಕ್ಕಳಿಗೆ ಬಾಲ್ಯದಲ್ಲಿಯೇ ಉತ್ತಮ ಸಂಸ್ಕಾರವನ್ನು ನೀಡುವಲ್ಲಿ ಪಾಲಕರು ಶ್ರಮ ವಹಿಸಬೇಕು ಎಂದರು.

ಭಜನಾ ಮಂದಿರದ ಅಧ್ಯಕ್ಷ ಧನಂಜಯ ಕುಂದರ್‌, ಗೌರವಾಧ್ಯಕ್ಷ ಪಾಂಡುರಂಗ ಮಲ್ಪೆ, ಉಪಾಧ್ಯಕ್ಷರಾದ ರಾಜೀವ ಕರ್ಕೇರ, ಶಿವ ಕುಂದರ್‌, ಪ್ರಧಾನ ಕಾರ್ಯದರ್ಶಿ ಶೇಖರ ತಿಂಗಳಾಯ, ಜತೆ ಕಾರ್ಯದರ್ಶಿ ಹರಿಶ್ಚಂದ್ರ ಡಿ. ಸುವರ್ಣ, ಸಂಘಟನಾ ಕಾರ್ಯದರ್ಶಿ ಚಂದ್ರಶೇಖರ ಮೆಂಡನ್‌, ಕೋಶಾಧಿಕಾರಿ ಚೇತನ್‌ ಕುಮಾರ್‌, ಮಂದಿರದ ಅರ್ಚಕ ಸೂರಪ್ಪ ಸುವರ್ಣ, ಮಾತೃ ಮಂಡ ಳಿಯ ಅಧ್ಯಕ್ಷೆ ಚಂದ್ರಾವತಿ ಗಂಗಾಧರ್‌ ಹಾಗೂ ಸಮಿತಿಯ ಪದಾಧಿಕಾರಿಗಳು, ಸದಸ್ಯರುಗಳು ಪಾಲ್ಗೊಂಡಿದ್ದರು. ಶಶಿಧರ ಕಾಂಚನ್‌ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next