ದೇವನಹಳ್ಳಿ : ರಾಜ್ಯದಲ್ಲಿನ ಸಫಾಯಿ ಕರ್ಮಚಾರಿ ಕುಟುಂಬಗಳಿಗೆ ಸೂಕ್ತ ಪುನ ರ್ವಸತಿ ಕಲ್ಪಿಸಬೇಕು ಹಾಗೂ ರಾಜ್ಯದ ಎಲ್ಲಾ ಸ್ಥಳೀಯ ಸಂಸ್ಥೆಗಳ ಪೌರ ಕಾರ್ಮಿಕರನ್ನು ಖಾಯಂ ಗೊಳಿಸಬೇಕು ಸೇರಿದಂತೆ ಇನ್ನಿತರೆ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಜಿಲ್ಲಾ ಸಫಾಯಿ ಕರ್ಮಚಾರಿ ಕಾವಲು ಸಮಿತಿ ವತಿಯಿಂದ ನಗರದ ಜಿಲ್ಲಾಡಳಿತ ಭವನದ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.
ರಾಜ್ಯದಲ್ಲಿ 2013 ರಿಂದ 2018 ನೇ ವರೆಗೆ 2995 ಮ್ಯಾನುಯಲ್ ಸ್ಕ್ಯಾವೆಂಜರ್‌ಗಳನ್ನು ಗುರುತಿಸಲಾಗಿತ್ತು. ಮಲ ಹೊರುವ ಪದ್ಧತಿಯನ್ನು ನಿಷೇಧಿಸಿದ ಕಾರಣ ಈ ಎಲ್ಲಾ ಮ್ಯಾನುಯಲ್ ಸ್ಕ್ಯಾವೆಂಜರ್‌ಗಳಿಗೆ ಪರ್ಯಾಯ ಉದ್ಯೋಗ ಪ್ರಾರಂಭಿಸಲು ಅಗತ್ಯ ವಿರುವ ಹಣಕಾಸಿನ ನೆರವು ನೀಡಬೇಕಿತ್ತು. ಆದರೆ ಸರ್ಕಾರ ಈ ವರೆಗೂ ನೀಡಿಲ್ಲ ಎಂದು ಪ್ರತಿಭಟನೆ ಯಲ್ಲಿ ಆಕ್ರೋಶ ಪಡಿಸಿದರು.
ಜಿಲ್ಲಾ ಸಫಾಯಿ ಕರ್ಮಚಾರಿ ಕಾವಲು ಸಮಿತಿಯ ಅಧ್ಯಕ್ಷ ಮ್ಯಾಥ್ಯು ಮುನಿಯಪ್ಪ ಮಾತನಾಡಿ, ಕಳೆದ 3 ವರ್ಷದಲ್ಲಿ ಜಿಲ್ಲೆ ಐದು 175 ಜನರು ಪರಿಶಿಷ್ಟ ಜಾತಿ ಸ್ಕ್ಯಾವೆಂಜರ್‌ಗಳನ್ನು ಗುರುತಿಸಲಾಗಿ ದೆ ಆದರೆ ಕಾರ್ಮಿಕರಿಗೆ ಗುರುತಿನ ಚೀಟಿ, ಪಿಎ ಫ್, ಹಣ ನೀಡಿರುವುದಿಲ್ಲ. ವಸತಿ, ಪರ್ಯಾಯ ಉದ್ಯೋಗ, ಮಕ್ಕಳಿಗೆ ವಿಧ್ಯಾರ್ಥಿ ವೇತನ ನೀಡಿಲ್ಲ ಈ ಕೂಡಲೇ ಜಿಲ್ಲಾಡಳಿತ ಎಲ್ಲಾ ಸೌಲಭ್ಯಗಳನ್ನು ನೀಡಲು ಕ್ರಮ ಕೈಗೊಳ್ಳಬೇಕು. ಸ್ಥಳೀಯ ಸಂಸ್ಥೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕಾರ್ಮಿಕರಿಗೆ ಭವಿಷ್ಯ ನಿಧಿ, ಆರೋಗ್ಯ ವಿಮೆ ಸೌಲಭ್ಯ ಒದಗಿಸಬೇಕು ಪೌರ ಕಾರ್ಮಿಕರಿಗೆ ಗೃಹ ಬಾಗ್ಯ ಯೋಜನೆ ಯಡಿಯಲ್ಲಿ ವಸತಿ ನಿರ್ಮಿಸಿ ಕೊಡಲು ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ರಾಜ್ಯ ಸಫಾಯಿ ಕರ್ಮಚಾರಿ ಕಾವಲು ಸಮಿತಿ ರಾಜ್ಯಾಧ್ಯಕ್ಷ ಓಬಲೇಶ್ ಮಾತನಾಡಿದರು. ಸಫಾಯಿ ಕರ್ಮಚಾರಿ ಕಾವಲು ಸಮಿತಿ ಬೆಂಗಳೂರು ನಗರ ಉಸ್ತುವಾರಿ ಶಕುಂತಲಾ, ರಾಜ್ಯ ಮೇಲ್ ಉಸ್ತುವಾರಿ ಪದ್ಮಾ, ತಾಲೂಕು ಅಧ್ಯಕ್ಷ ಆರ್ ಲಕ್ಷ್ಮಣ್, ಸದಸ್ಯರಾದ ನಾರಾಯಣಸ್ವಾಮಿ, ಮುನಿರಾಜು, ಅವಿನಾಶ್, ಇದ್ದರು.
ಮನವಿ: ಇದೇ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಜಗದೀಶ್ ಕೆ.ನಾಯಕ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.