Advertisement

Salman Khan ಹತ್ಯೆ ಖಚಿತ…: ಮತ್ತೆ ಎಚ್ಚರಿಸಿದ ಗ್ಯಾಂಗ್ ಸ್ಟರ್ ಗೋಲ್ಡಿ ಬ್ರರ್

10:57 AM Jun 27, 2023 | Team Udayavani |

ಮುಂಬೈ: “ನಾವು ಹತ್ಯೆ ಮಾಡಬೇಕಾದವರ ಪಟ್ಟಿಯಲ್ಲಿ ಸಲ್ಮಾನ್ ಖಾನ್ ಹೆಸರಿದೆ” ಎಂದು ಕೆನಡಾದಲ್ಲಿರುವ ಗ್ಯಾಂಗ್ ಸ್ಟರ್ ಗೋಲ್ಡಿ ಬ್ರರ್ ಮತ್ತೆ ಗುಡುಗಿದ್ದಾನೆ. ಕಳೆದ ವರ್ಷದ ಮೇ ನಲ್ಲಿ ನಡೆದ ಪಂಜಾಬಿ ಗಾಯಕ ಸಿದ್ದು ಮೂಸೆವಾಲ ಹತ್ಯೆಯ ಮಾಸ್ಟರ್ ಮೈಂಡ್ ಆಗಿರುವ ಗೋಲ್ಡಿ ಬ್ರರ್ ಇದೀಗ ಮತ್ತೆ ಸುದ್ದಿಯಲ್ಲಿದ್ದಾನೆ.

Advertisement

ಇಂಡಿಯಾ ಟುಡೇ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಗೋಲ್ಡಿ ಬ್ರರ್, ನಟ ಸಲ್ಮಾನ್ ಖಾನ್ ಹತ್ಯೆ ಸಂಚಿನ ಬಗ್ಗೆ ಹೇಳಿಕೊಂಡಿದ್ದಾನೆ.

“ನಾವು ಅವನ ಹತ್ಯೆ ಮಾಡುತ್ತೇವೆ. ನಾವು ಖಂಡಿತವಾಗಿಯೂ ಹತ್ಯೆ ಮಾಡುತ್ತೇನೆ. ಭಾಯ್ ಸಾಹೇಬ್ (ಲಾರೆನ್ಸ್ ಬಿಷ್ಣೋಯ್) ಅವರು ಕ್ಷಮೆ ಕೇಳುವುದಿಲ್ಲ ಎಂದು ಹೇಳಿದ್ದಾರೆ. ಬಾಬಾ ಕರುಣಾಮಯಿ ಆದರೆ ಮಾತ್ರ ಕರುಣೆ ತೋರುತ್ತಾರೆ” ಎಂದು ಗೋಲ್ಡಿ ಬ್ರರ್ ಹೇಳಿದ್ದಾನೆ.

“ನಾವು ಈ ಹಿಂದೆಯೂ ಹೇಳಿದಂತೆ ಇದು ಕೇವಲ ಸಲ್ಮಾನ್ ಖಾನ್ ವಿಚಾರ ಮಾತ್ರವಲ್ಲ. ನಾವು ಬದುಕಿರುವವರೆಗೆ ನಮ್ಮ ಎಲ್ಲಾ ಶತ್ರುಗಳ ವಿರುದ್ದ ಹೋರಾಟ ನಡೆಸುತ್ತಲೇ ಇರುತ್ತೇವೆ. ಸಲ್ಮಾನ್ ಖಾನ್ ನಮ್ಮ ಟಾರ್ಗೆಟ್, ಅದರಲ್ಲಿ ಯಾವುದೇ ಅನುಮಾನಗಳಿಲ್ಲ. ನಾವು ಸತತ ಪ್ರಯತ್ನ ಮಾಡುತ್ತಲೇ ಇರುತ್ತೇವೆ. ನಾವು ಯಶಸ್ವಿಯಾದಾಗ ನಿಮಗೆ ತಿಳಿಯುತ್ತದೆ” ಎಂದು ಭೂಗತನಾಗಿರುವ ಪಾತಕಿ ಬ್ರರ್ ಹೇಳಿದ್ದಾನೆ.

ಇದನ್ನೂ ಓದಿ:ಪಿರಿಯಾಪಟ್ಟಣ; ಗ್ರಾಪಂ ಗದ್ದುಗೆಗಾಗಿ ಪೈಪೋಟಿ; ಮೋಜು-ಮಸ್ತಿಗೆ ಮೊರೆ ಹೋದ ಸದಸ್ಯರು

Advertisement

ಕಳೆದ ಮಾರ್ಚ್ ನಲ್ಲಿ ಮುಂಬೈ ಪೊಲೀಸರು ಸಲ್ಮಾನ್ ಖಾನ್ ಗೆ ಇಮೇಲ್ ಮೂಲಕ ಬೆದರಿಕೆಯೊಡ್ಡಿದ ಪ್ರಕರಣದಲ್ಲಿ ಲಾರೆನ್ಸ್ ಬಿಷ್ಣೋಯ್ ಮತ್ತು ಗೋಲ್ಡಿ ಬ್ರರ್ ವಿರುದ್ಧ ಕೇಸು ದಾಖಲಿಸಿಕೊಂಡಿದ್ದರು. ಲಾರೆನ್ಸ್ ಸಂದರ್ಶನವನ್ನು ಉಲ್ಲೇಖಿಸಿ ಸಲ್ಮಾನ್ ಆಪ್ತ ಪ್ರಶಾಂತ್ ಗುಂಜಾಲ್ಕರ್ ಎಂಬವರಿಗೆ ಇಮೇಲ್ ಮಾಡಲಾಗಿತ್ತು.

“ಗೋಲ್ಡಿ ಬ್ರಾರ್ ನಿಮ್ಮ ಬಾಸ್ (ಸಲ್ಮಾನ್ ಖಾನ್) ಜೊತೆ ಮಾತನಾಡಲು ಬಯಸುತ್ತಾರೆ. ಅವರು (ಬಿಷ್ಣೋಯಿಯವರ) ಸಂದರ್ಶನವನ್ನು ನೋಡಿರಬೇಕು, ಒಂದು ವೇಳೆ ಅವರು ನೋಡಿಲ್ಲದಿದ್ದರೆ ಅದನ್ನು ವೀಕ್ಷಿಸುವಂತೆ ಮಾಡಿ. ಈ ವಿಚಾರವನ್ನು ಅವರು ಇಲ್ಲಿಗೆ ಮುಗಿಸಬೇಕು ಎಂದುಕೊಂಡಿದ್ದರೆ ಗೋಲ್ಡಿ ಬ್ರರ್‌ ಜತೆ ಮಾತನಾಡಲಿ. ಅವರು ಮುಖಾಮುಖಿಯಾಗಿ ಮಾತನಾಡಲು ಬಯಸಿದರೆ, ನಮಗೆ ತಿಳಿಸಿ. ಈ ಬಾರಿ ನಾವು ನಿಮಗೆ ಸಮಯಕ್ಕೆ ಸರಿಯಾಗಿ ತಿಳಿಸಿದ್ದೇವೆ. ಮುಂದಿನ ಬಾರಿ ನಿಮಗ ಶಾಕ್ ಆಗಬಹುದು” ಎಂದು ಅದರಲ್ಲಿ ಬರೆಯಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next