Advertisement

ಹಾರಾಡುತ್ತಲೇ ವಿಮಾನಕ್ಕೆ ಇಂಧನ ಮರುಪೂರಣ!

11:07 AM Dec 01, 2017 | |

ಹೊಸದಿಲ್ಲಿ: ಇಂಧನ ಮರುಪೂರಣ ಮಾಡಲು ವಿಮಾನಗಳನ್ನು ಲ್ಯಾಂಡ್‌ ಮಾಡುವುದು ಸಂಕೀರ್ಣ ಸನ್ನಿವೇಶದಲ್ಲಿ ಒಂದು ದೊಡ್ಡ ಸಮಸ್ಯೆ. ಹಲವು ದೇಶಗಳ ವಾಯುಪಡೆಗಳು ಈಗಾಗಲೇ ಈ ಸಮಸ್ಯೆಯನ್ನು ನಿವಾರಿಸಲು ಹಾರಾಡುತ್ತಲೇ ಇಂಧನ ಮರುಪೂರಣ ಪ್ರಯತ್ನ ಮಾಡಿ ದ್ದು, ಅದರಲ್ಲಿ ಯಶಸ್ವಿಯೂ ಆಗಿವೆ. ಆದರೆ ಭಾರತದ ವಾಯುಪಡೆ ಇದೇ ಮೊದಲ ಬಾರಿಗೆ ಎಂಬ್ರೇಯರ್‌ ವಿಮಾನಗಳಲ್ಲಿ ಈ ಪ್ರಯೋಗ ಮಾಡಿದ್ದು, ಯಶಸ್ವಿಯಾಗಿದೆ. ಇದು ಇಡೀ ಭಾರತೀಯ ವಾಯು ಪಡೆಗೆ ಮಹತ್ವದ ಸಾಧನೆಯಾಗಿದ್ದು, ತುರ್ತು ಸನ್ನಿವೇಶದಲ್ಲಿ ಹೆಚ್ಚು ಉಪಯೋಗಕ್ಕೆ ಬರಲಿದೆ.

Advertisement

ಈ ಪ್ರಕ್ರಿಯೆ ಅತ್ಯಂತ ಸಂಕೀರ್ಣವಾಗಿದ್ದು, ಇಂಧನ ತುಂಬಿಸಿಕೊಳ್ಳುವ ವಿಮಾನವು, ಇಂಧನ ಪೂರೈಸುವ ಡ್ರೋಗ್‌ ಅನ್ನು ಸರಿಯಾದ ಸ್ಥಳಕ್ಕೆ ಜೋಡಿಸಬೇಕಿರುತ್ತದೆ. ಅಲ್ಲದೆ ಎರಡೂ ವಿಮಾನಗಳು ಸಮಾನ ಮಟ್ಟದಲ್ಲಿ ಹಾರಾಡಬೇಕು. ಅತ್ಯಂತ ಉತ್ತಮ ತರಬೇತಿ ಹೊಂದಿರುವ ಪೈಲಟ್‌ಗಳಿಂದ ಮಾತ್ರ ಇದು ಸಾಧ್ಯ. 10 ನಿಮಿಷ ಇಂಧನ ಮರುಪೂರಣ ಮಾಡಿದರೆ ಒಂದು ವಿಮಾನ 4 ತಾಸು ಹೆಚ್ಚುವರಿ ಹಾರಾಟ ನಡೆಸುವ ಸಾಮರ್ಥ್ಯ ಪಡೆಯುತ್ತದೆ. ಇಂಥದ್ದೊಂದು ಸಾಧನೆ ಮಾಡಿದ ಜಗತ್ತಿನ ಕೆಲವೇ ಕೆಲವು ವಾಯುಪಡೆಗಳ ಪೈಕಿ ಇದೀಗ ಭಾರತದ ವಾಯುಪಡೆಯೂ ಸ್ಥಾನ ಪಡೆದುಕೊಂಡಿದೆ. 

Advertisement

Udayavani is now on Telegram. Click here to join our channel and stay updated with the latest news.

Next