Advertisement

ನಿರಂತರ ಮೂರನೇ ದಿನವೂ ಇಳಿದ ಇಂಧನ ಬೆಲೆ: ಗ್ರಾಹಕರು ಖುಷ್‌

11:05 AM Oct 20, 2018 | udayavani editorial |

ಹೊಸದಿಲ್ಲಿ : ಇಂಧನ ದರಗಳು ಇಂದು ಶನಿವಾರ ನಿರಂತರ ಮೂರನೇ ದಿನವೂ ಇಳಿದಿರುವದು ಗ್ರಾಹಕರಿಗೆ ಖುಷಿ ಕೊಟ್ಟಿದೆ.

Advertisement

ದಿಲ್ಲಿಯಲ್ಲಿ ಪೆಟ್ರೋಲ್‌ ಬೆಲೆ ಲೀಟರಿಗೆ 81.99 ರೂ. ಆಗಿದೆಯಾದರೆ ಮುಂಬಯಿ ಡೀಸೆಲ್‌ ದರ ಲೀಟರಿಗೆ 79 ರೂ.ಗೆ ಇಳಿದಿದೆ.

ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ಇಂದು ಶನಿವಾರ ಪೆಟ್ರೋಲ್‌ ದರ ಲೀಟರಿಗೆ 39 ಪೈಸೆ ಇಳಿದು 81.99 ರೂ. ಆಗಿದೆ. ಮುಂಬಯಿಯಲ್ಲ ಪೆಟ್ರೋಲ್‌ ದರ ಲೀಟರಿಗೆ 38 ಪೈಸೆ ಇಳಿದು 87.46 ರೂ. ಆಗಿದೆ.

ದಿಲ್ಲಿಯಲ್ಲಿ ಡೀಸೆಲ್‌ ಲೀಟರ್‌ ದರ 12 ಪೈಸೆ ಇಳಿದು 75.36 ರೂ. ಆಗಿದೆ; ಮುಂಬಯಿಯಲ್ಲಿ ಡೀಸೆಲ್‌ ಲೀಟರ್‌ ದರ 13 ಪೈಸೆ ಇಳಿದು 79 ರೂ. ಆಗಿದೆ.

ಕೋಲ್ಕತದಲ್ಲಿಯೂ ಇದೇ ರೀತಿಯ ಇಳಿಕೆ ಕಂಡು ಬಂದಿದೆ. ಇಲ್ಲಿ ಪೆಟ್ರೋಲ್‌ ದರ 83.83 ರೂ.ಗೆ (38 ಪೈಸೆ ಇಳಿಕೆ) ಆಗಿದೆ; ಚೆನ್ನೈನಲ್ಲಿ  ಪೆಟ್ರೋಲ್‌ ದರ ಲೀಟರಿಗೆ 85.22 ರೂ. (41 ಪೈಸೆ ಇಳಿಕೆ) ಆಗಿದೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next