ಹೊಸದಿಲ್ಲಿ: ಪ್ರತಿ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ದರ ಸತತ 13ನೇ ದಿನವಾಗಿರುವ ಬುಧವಾರ ಯಥಾ ಸ್ಥಿತಿ ಕಾಯ್ದುಕೊಂಡಿದೆ. ಬರೋಬ್ಬರಿ 2 ತಿಂಗಳ ಬಳಿಕ 80 ರೂ. ಆಸುಪಾಸಿಗೆ ಬಂದಂತಾಗಿದೆ. ಪ್ರತಿ ಲೀಟರ್ ಪೆಟ್ರೋಲ್‌ಗೆ ಹೊಸದಿಲ್ಲಿಯಲ್ಲಿ 79.55 ರೂ, ಪ್ರತಿ ಲೀಟರ್ ಡೀಸೆಲ್‌ಗೆ 73.78 ರೂ. ಆಗಿದೆ. ಹೊಸದಿಲ್ಲಿಯಲ್ಲಿ ಪ್ರತಿ ಲೀಟರ್ ಡೀಸೆಲ್‌ಗೆ 7 ಪೈಸೆ ಇಳಿಕೆಯಾಗಿದೆ. ಮುಂಬಯಿನಲ್ಲಿ ಡೀಸೆಲ್‌ಗೆ 77.32 ರೂ. ಆಗಿದೆ. ಚೆನ್ನೈಯಲ್ಲಿ ಪೆಟ್ರೋಲ್‌ಗೆ 82.65 ರೂ., ಡೀಸೆಲ್‌ಗೆ 78 ರೂ, ಕೋಲ್ಕತಾದಲ್ಲಿ ಪೆಟ್ರೋಲ್‌ಗೆ 81.43 ರೂ., ಡೀಸೆಲ್‌ಗೆ 75.63 ರೂ. ಆಗಿತ್ತು. ಬೆಂಗಳೂರಿನಲ್ಲಿ ಪ್ರತಿ ಲೀಟರ್ ಡೀಸೆಲ್‌ಗೆ 74.16 ರೂ., ಪೆಟ್ರೋಲ್‌ಗೆ 80.17 ರೂ. ಆಗಿತ್ತು. ಹೀಗಾಗಿ ಅ.4ರಂದು ದೇಶದ ಕೆಲವು ಭಾಗಗಳಲ್ಲಿ ಪೆಟ್ರೋಲ್‌ಗೆ 91.16 ರೂ. ಆಗಿದ್ದ ಬಳಿಕ 80 ರೂ.ಗೆ ಇಳಿಕೆಯಾಗಿದೆ. ಅಖೀಲ ಭಾರತ ಪೆಟ್ರೋಲ್ ಡೀಲರ್‌ಗಳ ಒಕ್ಕೂಟ (ಎಐಪಿಡಿಎ) ನೀಡಿದ ಮಾಹಿತಿ ಪ್ರಕಾರ ಆ.20 ರಂದು ಇದ್ದ ದರ ಸ್ಥಿತಿಗೆ ಪೆಟ್ರೋಲ್, ಡೀಸೆಲ್ ಬೆಲೆ ತಲುಪಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲದ ದರ ಇಳಿಕೆ ಮತ್ತು ಇತರ ಬೆಳವಣಿಗೆಯಿಂದ ಈ ಇಳಿಕೆ ಉಂಟಾಗಿದೆ.