Advertisement

ಕರಾವಳಿ: ಪೆಟ್ರೋಲ್‌ ಶತಕ : ದ.ಕ., ಉಡುಪಿಯ ಕೆಲವೆಡೆ ಲೀ.ಗೆ 100 ರೂ.

04:13 AM Jun 19, 2021 | Team Udayavani |

ಸುಳ್ಯ/ಬೆಳ್ತಂಗಡಿ/ ಕುಂದಾಪುರ: ಪೆಟ್ರೋಲ್‌ ದರ ಶತಕ ದಾಟುವುದರಲ್ಲಿ ಈಗ ಕರಾವಳಿ ಜಿಲ್ಲೆಗಳ ಸರದಿ. ಕೆಲವು ವಾರಗಳಿಂದ ಲೀ.ಗೆ ನೂರು ರೂ. ಗಡಿಯಲ್ಲಿದ್ದ ಪೆಟ್ರೋಲ್‌ ದರ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಕೆಲವು ಕಡೆಗಳಲ್ಲಿ ಶುಕ್ರವಾರ ನೂರು ರೂ. ದಾಟಿದೆ.

Advertisement

ಸುಳ್ಯದಲ್ಲಿ ಜೂ. 17ರಂದು 99.91 ರೂ. ಇದ್ದ ದರ ಜೂ. 18ರಂದು 100.19 ರೂ.ಗಳಾಗಿವೆ. ಕುಂದಾಪುರದ ಕೆಲವೆಡೆಗಳಲ್ಲಿಯೂ ಪೆಟ್ರೋಲ್‌ ಬೆಲೆ ಪ್ರತೀ ಲೀಟರ್‌ಗೆ 100 ರೂ. ಗಡಿ ದಾಟಿದೆ. ಕೆಲವು ಕಡೆ ಪೆಟ್ರೋಲ್‌ಗೆ 100.07 ರೂ. ದರ ಇದ್ದರೆ ಇನ್ನು ಕೆಲವು ಕಡೆಗಳಲ್ಲಿ 100.04 ರೂ. ಇತ್ತು. ಪೈಸೆಗಳ ಈ ವ್ಯತ್ಯಾಸ ಸರಬರಾಜು ಶುಲ್ಕ ಆಧರಿಸಿ ವ್ಯತ್ಯಯವಾಗುತ್ತದೆ.

ಉಜಿರೆ ಮತ್ತು ಕೊಕ್ಕಡದಲ್ಲಿಯೂ ಪೆಟ್ರೋಲ್‌ ದರ ನೂರರ ಗಡಿ ದಾಟಿದೆ. ಉಜಿರೆಯಲ್ಲಿ 100 ರೂ., ಕೊಕ್ಕಡದಲ್ಲಿ 100.26 ರೂ. ಆಗಿತ್ತು.

ಮಂಗಳೂರು, ಉಡುಪಿ: ಶತಕದತ್ತ
ಶುಕ್ರವಾರ ಮಂಗಳೂರು ನಗರದಲ್ಲಿ ಒಂದು ಲೀಟರ್‌ ಪೆಟ್ರೋಲ್‌ ದರ 99.3 ರೂ., ಡೀಸೆಲ್‌ ದರ 92.20 ರೂ. ದಾಖ ಲಾಗಿತ್ತು. ಇದರೊಂದಿಗೆ ಕಳೆದ ಮೂರು ವಾರಗಳಲ್ಲಿ ನಗರದಲ್ಲಿ ಪೆಟ್ರೋಲ್‌ಗೆ 2.53 ರೂ. ಮತ್ತು ಡೀಸೆಲ್‌ಗೆ 2.45 ರೂ. ಏರಿಕೆ ಯಾದಂತಾಗಿದೆ. ಬಂಟ್ವಾಳದಲ್ಲಿ ಪೆಟ್ರೋಲ್‌ಗೆ 99.58 ರೂ. ಇತ್ತು. ಉಡುಪಿಯಲ್ಲಿ ಶುಕ್ರ ವಾರ ಪೆಟ್ರೋಲ್‌ಗೆ 99.71 ರೂ., ಡೀಸೆಲ್‌ಗೆ 92.52 ರೂ. ಇತ್ತು.

ಅಂ.ರಾ. ಮಟ್ಟದಲ್ಲಿ ಕಚ್ಚಾತೈಲ ಬೆಲೆ ಏರುತ್ತಿದ್ದು, ಇಲ್ಲೂ ಕೆಲವು ದಿನಗಳ ವರೆಗೆ ಏರಿಕೆ ಮುಂದುವರಿಯಬಹುದು. ಸರಕಾರ ಅಬಕಾರಿ ಸುಂಕ ಪರಿಷ್ಕರಿಸಬೇಕು.
– ಆನಂದ ಕಾರ್ನಾಡ್‌, ಕರ್ನಾಟಕ ರಾಜ್ಯ ಪೆಟ್ರೋಲಿಯಂ ಡೀಲರ್ ಫೆಡರೇಶನ್‌ ಕಾರ್ಯದರ್ಶಿ

Advertisement
Advertisement

Udayavani is now on Telegram. Click here to join our channel and stay updated with the latest news.

Next