Advertisement
ಮೈತ್ರಿ ಸೀಟು ಹಂಚಿಕೆಯಿಂದ ಕಾಂಗ್ರೆಸ್ ಕೆಲವು ನಾಯಕರಿಗೆ ಬೇಸರವಾಗಿದೆ ಎನ್ನುವುದು ನಿಜಾನಾ ?ಸ್ವಾಭಾವಿಕವಾಗಿಯೇ ಆಗಿರುತ್ತದೆ. ಉತ್ತರ ಕನ್ನಡ, ಉಡುಪಿ-ಚಿಕ್ಕಮಗಳೂರು ಕ್ಷೇತ್ರಗಳನ್ನು ಪಡೆದುಕೊಂಡರು. ಅಲ್ಲಿ ಅವರ ಶಕ್ತಿ ಇಲ್ಲ. ಬೆಂಗಳೂರು ಉತ್ತರ ಕ್ಷೇತ್ರದ ಸ್ಥಿತಿ ಏನಾಯಿತು ಎಂದು ಎಲ್ಲರಿಗೂ ಗೊತ್ತಿದೆ. ಜೆಡಿಎಸ್‌ನವರು ಎಂಟು ಕ್ಷೇತ್ರ ಕೇಳಿ ತಾವೂ ತೊಂದರೆಗೆ ಒಳಗಾದರು. ನಮ್ಮನ್ನು ತೊಂದರೆಗೆ ಸಿಲುಕಿಸಿದರು. ಅವರು ಐದಾರು ಕ್ಷೇತ್ರ ಪಡೆದುಕೊಂಡು ಸುಮ್ಮನಾಗಬೇಕಿತ್ತು.
ನೋಡಿ ಅಂಬರೀಶ್ ನನ್ನ ಆತ್ಮೀಯ ಸ್ನೇಹಿತ, ಸುಮಲತಾ ನನ್ನ ಸಹೋದರಿ ಇದ್ದ ಹಾಗೆ. ಮಂಡ್ಯ ಕ್ಷೇತ್ರವನ್ನು ಕಾಂಗ್ರೆಸ್‌ಗೆ ಬಿಟ್ಟುಕೊಟ್ಟಿದ್ದರೆ, ಸುಮಲತಾ ಅವರನ್ನು ಅಭ್ಯರ್ಥಿಯನ್ನಾಗಿ ಮಾಡಬೇಕೆನ್ನುವುದು ನನ್ನ ವೈಯಕ್ತಿಕ ಅಭಿಪ್ರಾಯವಾಗಿತ್ತು. ಜೆಡಿಎಸ್‌ಗೆ ಬಿಟ್ಟುಕೊಟ್ಟಿರುವುದರಿಂದ ಅವರು ಪಕ್ಷೇತರರಾಗಿ ಸ್ಪರ್ಧೆಗೆ ಇಳಿದಿದ್ದಾರೆ. ಈಗ ಅದು ಮುಗಿದು ಹೋದ ಅಧ್ಯಾಯ. ಈ ಸಮಯದಲ್ಲಿ ಸುಮಲತಾ ವಿಷಯದಲ್ಲಿ ನಾನು ಬೇರೆ ಏನೂ ಮಾತನಾಡುವುದಿಲ್ಲ. ರಾಜ್ಯದಲ್ಲಿ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡಿ ರುವುದರಿಂದ ಕಾಂಗ್ರೆಸ್ ಮುಂದಿನ
ದಿನಗಳಲ್ಲಿ ಸ್ವಂತ ಬಲದಿಂದ ಅಧಿಕಾರಕ್ಕೆ ಬರುವ ಅವಕಾಶ ಕಡಿಮೆಯಾಗುತ್ತಿದೆ ಎನ್ನುತ್ತಾರಲ್ಲಾ ?
ವಿಶೇಷವಾಗಿ ದಕ್ಷಿಣ ಕರ್ನಾಟಕದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ನೇರ ಸ್ಪರ್ಧೆ ಇದೆ. ಆ ಭಾಗದಲ್ಲಿ ನಮ್ಮ ಪಕ್ಷದ ನಾಯಕರು, ಕಾರ್ಯಕರ್ತರು ಬಹಳ ತೊಂದರೆಗೆ
ಒಳಗಾಗುತ್ತಾರೆ. ಆದರೆ, ನಮ್ಮ ಹೈಕಮಾಂಡ್ ದೇಶದ ಹಿತದೃಷ್ಟಿಯಿಂದ, ಜಾತ್ಯತೀತ ಪಕ್ಷಗಳು ಒಗ್ಗೂಡಿ ಬಿಜೆಪಿಯನ್ನು ದೂರ ಇಡಬೇಕು ಎನ್ನುವ ವಿಶಾಲ ಮನೋಭಾವದಿಂದ ತೆಗೆದುಕೊಂಡ ತೀರ್ಮಾನವಿದು. ಇದರಿಂದ ಸಣ್ಣ, ಪುಟ್ಟ ಸಮಸ್ಯೆಗಳನ್ನು ಮರೆಯಬೇಕಾಗುತ್ತದೆ.
Related Articles
ಸ್ವಾಭಾವಿಕವಾಗಿ ಅನಿಸಿದೆ. ಹಿಂದೆ ಎರಡು ಬಾರಿ ನಮ್ಮ ಜಿಲ್ಲೆಯಲ್ಲಿ ಲಂಬಾಣಿ ಸಮುದಾಯಕ್ಕೆ ಸೇರಿದ್ದ ಪ್ರಕಾಶ್ ರಾಠೊಡ್ ಅವರಿಗೆ ಟಿಕೆಟ್ ನೀಡಿದ್ದೆವು. ಹೀಗಾಗಿ, ಮೊದಲೇ ಆಲೋಚನೆ ಮಾಡಿ, ಈ ಬಾರಿ ದಲಿತ ಬಲಗೈ ಸಮುದಾಯಕ್ಕೆ ಸೇರಿದ್ದ ಮಾಜಿ ಶಾಸಕ ರಾಜು ಅಲಗೂರ್ ಅವರಿಗೆ ಟಿಕೆಟ್ ನೀಡಿದ್ದರೆ, ದಲಿತ, ಲಂಬಾಣಿ, ಲಿಂಗಾಯತ ಕಾಂಬಿನೇಷನ್‌ನಲ್ಲಿ ಗೆಲ್ಲುವ ವಿಶ್ವಾಸ ಇತ್ತು. ಈಗಮೈ ತ್ರಿ ಲೆಕ್ಕಾಚಾರದಲ್ಲಿ ಜೆಡಿಎಸ್‌ಗೆ ಟಿಕೆಟ್ ಕೊಟ್ಟಿರು ವುದರಿಂದ ಮೈತ್ರಿ ಧರ್ಮ ಪಾಲನೆ ಮಾಡಿ, ಜೆಡಿಎಸ್ ಅಭ್ಯರ್ಥಿ ಗೆಲ್ಲಿಸುವ ಪ್ರಯತ್ನ ಮಾಡುತ್ತೇವೆ.
Advertisement
ಉತ್ತರ ಕರ್ನಾಟಕ ಭಾಗದಲ್ಲಿ ಜೆಡಿಎಸ್ ಪ್ರಭಾವ ಇಲ್ಲದಿದ್ದರೂ, ಅಲ್ಲಿ ಕ್ಷೇತ್ರ ಕೊಟ್ಟಿರುವುದು ಸರೀನಾ ?ವಿಜಯಪುರ ಜಿಲ್ಲೆಯಲ್ಲಿ ಅವರ ಇಬ್ಬರು ಶಾಸಕರಿದ್ದಾರೆ. ಮೂರು ಕ್ಷೇತ್ರಗಳಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಹೀಗಾಗಿ, ಇಡೀ ಉತ್ತರ ಕರ್ನಾಟಕ ಭಾಗದಲ್ಲಿ ವಿಜಯಪುರ ಜಿಲ್ಲೆಯಲ್ಲಿ ಹೆಚ್ಚು ಸ್ಥಾನ ಪಡೆದಿದ್ದಾರೆ. ಆದರೆ, ಲೋಕಸಭಾ ಕ್ಷೇತ್ರದಲ್ಲಿ ಅವರಿಗಿಂತ ನಾವು ಮೂರೂವರೇ ಲಕ್ಷ ಹೆಚ್ಚು ಮತ ಪಡೆದಿದ್ದೇವೆ. ಈಗ ಸೀಟು ಕೊಟ್ಟಿದ್ದಾರೆ. ಏನು ಮಾಡಲೂ ಆಗುವುದಿಲ್ಲ. ಈಗ ನಾನು ಗೊಂದಲ ಸೃಷ್ಟಿಸಲು ಬಯಸುವುದಿಲ್ಲ. ಕರ್ನಾಟಕದಲ್ಲಿ ಎಷ್ಟು ಸ್ಥಾನ ಗೆಲ್ಲುವ ಸಾಧ್ಯತೆ ಇದೆ?
ಜೆಡಿಎಸ್-ಕಾಂಗ್ರೆಸ್ ಸೇರಿ 18 ರಿಂದ 20 ಸ್ಥಾನ ಗೆಲ್ಲುವ ವಿಶ್ವಾಸ ಇದೆ ಐಟಿ ದಾಳಿ ಎಂದ ಕೂಡಲೇ ಮೈತ್ರಿ ಪಕ್ಷಗಳ ನಾಯಕರು ಏಕೆ ಭಯ ಬೀಳುತ್ತಾರೆ ?
ಯಡಿಯೂರಪ್ಪ ಅವರು ಆಪರೇಷನ್ ಕಮಲದ ಹೆಸರಿನಲ್ಲಿ ಶಾಸಕರ ಖರೀದಿಗೆ 30 ಕೋಟಿ ಕೊಡುವುದಾಗಿ ಹೇಳಿದ್ದರು. ಅವರ ಮನೆಗಳ ಮೇಲೆ ಏಕೆ ದಾಳಿ ಮಾಡುವುದಿಲ್ಲ. ಶಿವನಗೌಡ ನಾಯಕ, ಶ್ರೀರಾಮುಲು, ಜನಾರ್ದನ ರೆಡ್ಡಿ ಅವರ ಮನೆಗಳ
ಮೇಲೆ ಏಕೆ ದಾಳಿ ಮಾಡುವುದಿಲ್ಲ. ಚುನಾವಣಾ ಖರ್ಚಿಗೆ 10 ಕೋಟಿ ಕೊಡುವುದಾಗಿ ಯಡಿಯೂರಪ್ಪ ಬಹಿರಂಗವಾಗಿಯೇ ಹೇಳಿದ್ದರು. ವಿಧಾನಸಭೆ ಅಭ್ಯರ್ಥಿಗೆ
ಚುನಾವಣಾ ವೆಚ್ಚ 25 ಲಕ್ಷ ಮಾತ್ರ ಇರುವುದು. 10 ಕೋಟಿಖರ್ಚು ಮಾಡುತ್ತಾರೆ ಎಂದರೆ ಏನು ಅರ್ಥ?ಯಡಿಯೂರಪ್ಪ ಅವರ ಮನೆಯ ಮೇಲೆ ದಾಳಿ ಮಾಡಿ, ಮೈತ್ರಿ ಪಕ್ಷಗಳ ನಾಯಕರ ಮನೆಗಳ ಮೇಲೂ ದಾಳಿ ಮಾಡಿದ್ದರೆ ನಾವು ಒಪ್ಪುತ್ತಿದ್ದೆವು. ಸಂದರ್ಶನ: ಶಂಕರ ಪಾಗೋಜಿ