Advertisement

ಕಿಷ್ಕಿಂಧಾ ಪಂಪಾ ಸರೋವರದಿಂದ ಅಯೋಧ್ಯೆಯ ಶ್ರೀರಾಮನಿಗೆ ಬಾರಿ ಹಣ್ಣು ಕಳಿಸಿದ ಮಾಜಿ MLC

12:58 PM Jan 21, 2024 | Team Udayavani |

ಗಂಗಾವತಿ: ಸೀತೆಯನ್ನು ಹುಡುಕುತ್ತ ಕಿಷ್ಕಿಂಧಾ ಅಂಜನಾದ್ರಿ ಪ್ರದೇಶಕ್ಕೆ ಆಗಮಿಸಿದ್ದ ಶ್ರೀರಾಮ, ಲಕ್ಷ್ಮಣರಿಗೆ ಪಂಪಾಸರೋವರದ ದಡದಲ್ಲಿದ್ದ ಶಬರಿ ತಿನ್ನಲು ಕಿಷ್ಕಿಂಧಾ ಬೆಟ್ಟಪ್ರದೇಶದಲ್ಲಿ ಬೆಳೆದ ಬಾರಿ ಹಣ್ಣು ಸೇರಿ ಇತರೆ ಫಲಗಳನ್ನು ಸ್ವತಃ ತಿಂದು ರುಚಿನೋಡಿ ನಂತರ ಶ್ರೀರಾಮಪ್ರಭುವಿಗೆ ನೀಡಿ ಹಲವು ವರ್ಷಗಳ ಶ್ರೀ ರಾಮನ ದರ್ಶನದ ಬಯಕೆ ಈಡೇರಿಸಿಕೊಂಡಿದ್ದರು.

Advertisement

ಕಿಷ್ಕಿಂಧಾ ಅಂಜನಾದ್ರಿ ಪ್ರದೇಶ ಹಲವು ವನಸ್ಪತಿ, ಹಣ್ಣು ಹಂಪಲು, ಪಕ್ಷಿಪ್ರಾಣಿ ಹಾಗೂ ಜೀವಿಸಂಕುಲಕ್ಕೆ ಆಶ್ರಯತಾಣವಾಗಿದೆ. ಇಲ್ಲಿನ ಬಾರಿ ಹಣ್ಣು ಶ್ರೀರಾಮ ನಿಗೆ ಬಲು ಪ್ರೀತಿ ಅದ್ದರಿಂದ ಈ ಬಾರಿ ಹಣ್ಣುಗಳನ್ನು ಅಯೋಧ್ಯೆಯಲ್ಲಿ ಜ.22 ರಂದು ಶ್ರೀರಾಮ ಮಂದಿರ ಲೋಕಾರ್ಪಣೆ ಸಂದರ್ಭದಲ್ಲಿ ಕಿಷ್ಕಿಂಧಾ ಪಂಪಾಸರೋವರದ ಬಾರಿ ಹಣ್ಣು ಸಮರ್ಪಣೆ ಮಾಡಲು ವಿಧಾನ ಪರಿಷತ್ ಮಾಜಿ ಸದಸ್ಯ ಎಚ್.ಆರ್. ಶ್ರೀನಾಥ ಬಾರಿ ಹಣ್ಣು ಸಂಗ್ರಹಿಸಿ ರವಿವಾರ ಕಿಷ್ಕಿಂಧಾ ಅಂಜನಾದ್ರಿಗೆ ಭೇಟಿ ನೀಡಿದ್ದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರಿಗೆ ಸಲ್ಲಿಸಿ ಅಯೋಧ್ಯೆಯ ಶ್ರೀರಾಮನಿಗೆ ಸಮರ್ಪಣೆ ಮಾಡಲು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಎಚ್.ಆರ್.ಶ್ರೀ ನಾಥ ಮಾತನಾಡಿ, ಕಿಷ್ಕಿಂಧಾ ಹಾಗೂ ಅಯೋಧ್ಯೆ ಮಧ್ಯೆ ಅವಿನಾಭಾವ ಸಂಬಂಧವಿದ್ದು ಶ್ರೀರಾಮ
ಸಂಕಷ್ಟದಲ್ಲಿ ಕಿಷ್ಕಿಂಧಾ ಅಂಜನಾದ್ರಿ ಪ್ರದೇಶಕ್ಕೆ ಆಗಮಿಸಿ ಸೀತೆಯ ಅನ್ವೇಷಣೆ ಮತ್ತು ರಾವಣನನ್ನು ಸೋಲಿಸಿ ಲೋಕಕಲ್ಯಾಣ ಮಾಡಲು ಪ್ರೇರಣೆಕೊಟ್ಟ ಸ್ಥಳವಾಗಿದೆ. ಬಾರಿ ಹಣ್ಣು ಶಬರಿಯ ಭಕ್ತಿಯ ಸಂಕೇತವಾಗಿದ್ದು ಶ್ರೀರಾಮನಿಗೆ ಸಂಬಂಧಿಸಿದ ಪ್ರತಿಯೊಂದು ವಸ್ತು,ವಿಷಯಗಳು ಜ.೨೨ ರಂದು ಅಯೋಧ್ಯೆಗೆ ತಲುಪಿಸಬೇಕಿದೆ ಎಂದರು.

ಇದನ್ನೂ ಓದಿ: Shocking: ಮದುವೆಗೆ 13 ದಿನ ಬಾಕಿಯಿರುವಾಗಲೇ ನೇಣು ಬಿಗಿದುಕೊಂಡು ಯುವತಿ ಆತ್ಮಹತ್ಯೆ

Advertisement

Udayavani is now on Telegram. Click here to join our channel and stay updated with the latest news.

Next