Advertisement

ಹಣ್ಣು ತೋಟಗಳು ಸಮೃದ್ಧಿಯ ಪ್ರತೀಕ

07:49 PM Jun 21, 2021 | Team Udayavani |

ಬೀದರ: ಜನವಾಡಾ ಕೃಷಿ ವಿಜ್ಞಾನ ಕೇಂದ್ರದಿಂದ ಕೆ.ವಿ.ಕೆ-ಕೃಷಿ ಪಾಠ ಶಾಲೆ ಸರಣಿ ಆನ್‌ಲೈನ್‌ ಕಾರ್ಯಕ್ರಮದಲ್ಲಿ “ಹಣ್ಣು ತೋಟಗಳ ನಿರ್ಮಾಣ ಮತ್ತು ನಿರ್ವಹಣೆ’ ವಿಷಯ ಕುರಿತು ತರಬೇತಿ ಕಾರ್ಯಕ್ರಮ ನಡೆಯಿತು.

Advertisement

ಕೆವಿಕೆ ವಿಜ್ಞಾನಿ ಡಾ| ನಿಂಗದಳ್ಳಿ ಮಲ್ಲಿಕಾರ್ಜುನ ತರಗತಿ ನಡೆಸಿಕೊಟ್ಟರು. ತೋಟಗಳ ವಿನ್ಯಾಸ, ಪ್ರಮುಖ ಹಣ್ಣು ಬೆಳಗಳ ಕಸಿ/ಸಸಿಗಳ ಆಯ್ಕೆ, ನಾಟಿಗೆ ವಿಧಾನ, ತೋಟಗಳ ನಿರ್ಮಾಣ ಮತ್ತು ನಿರ್ವಹಣೆಯ ತಾಂತ್ರಿಕತೆಗಳ ಕುರಿತು ಮಾಹಿತಿ
ನೀಡಿದರು.

ತರಬೇತಿಯಲ್ಲಿ ಪಾಲ್ಗೊಂಡ ರೈತರು, ತೋಟ ನಿರ್ಮಾಣಕ್ಕಾಗಿ ಅನುಸರಿಸಬೇಕಾದ ತಾಂತ್ರಿಕ ಕ್ರಮಗಳ ಕುರಿತು ಮಾಹಿತಿ ಪಡೆದರಲ್ಲದೆ, ಅವರಿಗಿರುವ ಅನೇಕ ಸಂದೇಹಗಳನ್ನು ಚರ್ಚೆಯಲ್ಲಿ ಬಗೆಹರಿಸಿಕೊಂಡರು. ಯುವ ರೈತ ಗುರುನಾಥ ಮಲಾದೆ ಅವರು ನಿಯಮಿತವಾಗಿ ನಡೆಯುತ್ತಿರುವ ಸರಣಿ ಆನ್‌ಲೈನ್‌ ಪಾಠ
ಶಾಲೆಯ ಕಾರ್ಯಕ್ರಮದಲ್ಲಿ ಭಾಗಿಯಾಗುವ ರೈತರನ್ನೊಳಗೊಂಡ ವಾಟ್ಸ್‌ಆ್ಯಪ್‌ ಗುಂಪು ರಚಿಸುವ ಕುರಿತು ಸಲಹೆ ನೀಡಿದರು.

ಕೆವಿಕೆ ಮುಖ್ಯಸ್ಥ ಡಾ| ಸುನೀಲಕುಮಾರ ಎನ್‌.ಎಂ ಮಾತನಾಡಿ, ಮುಂಗಾರು ಹಂಗಾಮು ಹಣ್ಣು ಮತ್ತು ತೋಟ ಪಟ್ಟಿ ಗಿಡಗಳನ್ನು ನೆಡಲು ಸಕಾಲವಾಗಿದ್ದು,
ಈ ಕುರಿತ ಮಾಹಿತಿ ರೈತ ಬಾಂಧವರಿಗೆ ತ್ವರಿತವಾಗಿ ನೀಡುವ ಸದುದ್ದೇಶದಿಂದ ರೈತರಿರುವಲ್ಲಿಯೇ ಆನ್‌ಲೈನ್‌ನಲ್ಲಿ ಹಣ್ಣು ತೋಟಗಳು ನಿರ್ಮಾಣದ
ಕುರಿತ ಮಾಹಿತಿ ತಲುಪಿಸಲು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ರೈತರು ಸಮಗ್ರ ಮಾಹಿತಿ ಪಡೆದು ಆರಂಭಿಸಿದಲ್ಲಿ ಸುಸ್ಥಿರತೆ ಸಾಧಿಸಬಹುದೆಂದು ಅಭಿಪ್ರಾಯಪಟ್ಟರು.

ಹೆಚ್ಚಿನ ಪ್ರಮಾಣದಲ್ಲಿ ರೈತರು ಕೃಷಿ ಪಾಠ ಶಾಲೆಯಲ್ಲಿ ಪಾಲ್ಗೊಳ್ಳಲು “ಕೆವಿಕೆ ಬೀದರ ಕೃಷಿ ಪಾಠ ಶಾಲೆ’ ವಾಟ್ಸ್‌ಆ್ಯಪ್‌ ಗುಂಪು ರಚಿಸಲಾಯಿತು. ಆಸಕ್ತರು ಈ https://chat.whatsapp.com/EXp7j4weppKK6YleaXKe2p ಲಿಂಕ್‌ನ್ನು ಉಪಯೊಗಿಸಿಕೊಂಡು ಈ ಗುಂಪಿಗೆ ಸೇರಿಕೊಳ್ಳಲು ಕೆವಿಕೆ ಮುಖ್ಯಸ್ಥರು ಮನವಿ ಮಾಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next