Advertisement
ಸದ್ಯ ಕಿತ್ತಳೆ ಮತ್ತು ಸೇಬು ಹಣ್ಣುಗಳ ಬೇರ್ಪಡಿಸುವ ಕೆಲಸವನ್ನು ಈ ಯಂತ್ರ ಮಾಡುತ್ತಿದೆ. ಪ್ರತಿ ಸೆಕೆಂಡಿಗೆ 10 ಹಣ್ಣುಗಳನ್ನು ಗಾತ್ರ, ಬಣ್ಣ, ತೂಕ, ಹಣ್ಣಿನ ಮೇಲ್ಮೆ„ಯನ್ನು ಆಧರಿಸಿ ವಿಂಗಡಿಸುತ್ತದೆ. ಉದಾಹರಣೆಗೆ ಅತ್ಯುತ್ತಮ ಗುಣಮಟ್ಟ ಹೊಂದಿದ್ದರೆ, ಅಂತಹ ಹಣ್ಣುಗಳನ್ನು ವಿದೇಶಕ್ಕೆ ರಫ್ತಾಗಲಿರುವ ಬುಟ್ಟಿಗೆ ತಂದುಹಾಕುತ್ತದೆ. ಮೂರ್‍ನಾಲ್ಕು ದಿನ ತಡೆದುಕೊಳ್ಳುವ ಸಾಮರ್ಥ್ಯ ಇರುವ ಹಣ್ಣುಗಳನ್ನುಬೇರೆ ರಾಜ್ಯಗಳಿಗೆ ಕಳುಹಿಸುವ ಬುಟ್ಟಿಗೆ ಹಾಕುತ್ತದೆ. ಈ ವಿನೂತನ ಯಂತ್ರವನ್ನು ರಾಷ್ಟ್ರೀಯ ತೋಟಗಾರಿಕೆ ಮೇಳದಲ್ಲಿ ಪ್ರದರ್ಶನಕ್ಕಿಡಲಾಗಿದೆ.
ಹೋಗಿದೆ. ಈ ಬಗ್ಗೆ ಮಾತುಕತೆ ನಡೆದಿದೆ. ಪ್ರಸ್ತುತ ದೇಶದಲ್ಲಿ ಈ ರೀತಿ ಹಣ್ಣುಗಳ ಗುಣಮಟ್ಟ ಆಧರಿಸಿ ಬೇರ್ಪಡಿಸುವ ಯಂತ್ರ ಇಲ್ಲ. ಹಾಗಾಗಿ ಮ್ಯಾನ್ಯುವಲ್ ಆಗಿ ಈ ಕ್ರಿಯೆ ನಡೆಯುತ್ತಿದ್ದು, ಅದೂ ಸಮರ್ಪಕವಾಗಿ ಆಗುತ್ತಿಲ್ಲ. ಇದರಿಂದ “ಗುಣಮಟ್ಟಕ್ಕೆ ತಕ್ಕಂತೆ ಬೆಲೆ ಸಿಗುತ್ತಿಲ್ಲ’ ಎಂಬ ಕೊರಗು ರೈತರದ್ದಾದರೆ, “ನೀವು (ರೈತರು) ಗುಣಮಟ್ಟದ ಉತ್ಪನ್ನ ಪೂರೈಸಿ, ಉತ್ತಮ ಬೆಲೆ ಸಿಗುತ್ತದೆ’ ಎಂಬ ವಾದ ವ್ಯಾಪಾರಿಗಳದ್ದಾಗಿದೆ. ಈ
ಮಧ್ಯೆ ರೈತರು ನಷ್ಟ ಅನುಭವಿಸುತ್ತಿದ್ದಾರೆ. ಇನ್ಮುಂದೆ ಈ ಸಮಸ್ಯೆ ಬಗೆಹರಿಯಲಿದೆ. ವೈಜ್ಞಾನಿಕವಾಗಿ
ಯಂತ್ರವು ಹಣ್ಣುಗಳ ಗುಣಮಟ್ಟಕ್ಕೆ ತಕ್ಕಂತೆ ಬೇರ್ಪಡಿಸುವುದರಿಂದ ರೈತರಿಗೆ ಮೋಸ ಮಾಡಲು
ಆಗುವುದಿಲ್ಲ ಎಂದು ಝೆಂಟ್ರಾನ್ ಲ್ಯಾಬ್ಸ್ನ ಜಗದೀಶ್ ಸಿ. ಸುಂಕದ “ಉದಯವಾಣಿ’ಗೆ ತಿಳಿಸಿದರು.
Related Articles
ಕಷ್ಟವಾಗುತ್ತದೆ. ಹಾಗಾಗಿ, ರೈತ ಉತ್ಪಾದಕ ಸಂಘಗಳ ಮೂಲಕ ಹಲವು ರೈತರು ಸೇರಿ ಖರೀದಿಸುವುದು ಸೂಕ್ತ. ಯಂತ್ರದ ಮೂಲಕ ಒಂದು ಹಣ್ಣು ಬೇರ್ಪಡಿಸಲು ಸರಾಸರಿ 10ರಿಂದ 50 ಪೈಸೆ ಆಗುತ್ತದೆ. ಗಂಟೆಗೆ 4ರಿಂದ 10 ಟನ್ ವಿಂಗಡಿಸುತ್ತದೆ. ಆದರೆ, ಕಾರ್ಮಿಕರಿಂದ ಇದೇ ಪ್ರಕ್ರಿಯೆಗೆ ಸರಾಸರಿ 2 ರೂ. ಖರ್ಚಾಗುತ್ತದೆ. ಹಾಗೂ ದಿನಗಟ್ಟಲೆ ಕುಳಿತರೂ ಇಷ್ಟೊಂದು ಪ್ರಮಾಣದ ವಿಂಗಡಣೆ ಅಸಾಧ್ಯ. ಈ ಹಿನ್ನೆಲೆಯಲ್ಲಿ ಒಂದೆರಡು ವರ್ಷಗಳಲ್ಲೇ ಖರೀದಿದಾರರಿಗೆ ಹಣ ಉಳಿತಾಯದ ರೂಪದಲ್ಲಿ
ವಾಪಸ್ಸಾಗುತ್ತದೆ ಎಂದೂ ಜಗದೀಶ್ ಸುಂಕದ ವಿಶ್ವಾಸ ವ್ಯಕ್ತಪಡಿಸುತ್ತಾರೆ.
Advertisement
ವಿಂಗಡನೆ ಪ್ರಕ್ರಿಯೆ ಹೀಗೆ2016ರಲ್ಲಿ ಇದನ್ನು ಅಭಿವೃದ್ಧಿಪಡಿಸಲಾಗಿದ್ದು, ಇದುವರೆಗೆ ನಾಲ್ಕು ಯಂತ್ರಗಳು ಮಾರಾಟ ಆಗಿವೆ. ಉದ್ದೇಶಿತ ಈ ಯಂತ್ರದಲ್ಲಿ ಮೂರರಿಂದ ನಾಲ್ಕು ಅತ್ಯಾಧುನಿಕ ಕ್ಯಾಮೆರಾ ಅಳವಡಿಸ ಲಾಗಿದೆ. ಜತೆಗೆ ಕಂಪ್ಯೂಟರ್ ಕೂಡ “ಫಿಕ್ಸ್’ ಮಾಡಲಾಗಿದೆ. ಹಣ್ಣು ಯಂತ್ರಕ್ಕೆ ಅಳವಡಿಸಿದ ಬೆಲ್ಟ್ ಮೂಲಕ ಹೋಗುವಾಗ ವಿವಿಧ ಕೋನಗಳಿಂದ ಫೋಟೋ ಸೆರೆಹಿಡಿದು, ಕಂಪ್ಯೂಟರ್‌ಗೆ ಕಳುಹಿಸುತ್ತದೆ. ಅದರಲ್ಲಿರುವ ಸಾಫ್ಟ್ವೇರ್ ಆ ಹಣ್ಣಿನ ಗುಣಮಟ್ಟ ವಿಶ್ಲೇಷಿಸಿ, ಯಾವ ಬುಟ್ಟಿಗೆ ಬೀಳಬೇಕು ಎಂಬುದನ್ನು ನಿರ್ಧರಿಸುತ್ತದೆ ಎಂದು ಅವರು ಮಾಹಿತಿ ನೀಡಿದರು. – ವಿಜಯಕುಮಾರ್ ಚಂದರಗಿ